ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನೀಲಿ ನಕ್ಷೆ: ಸಚಿವ ಪ್ರಿಯಾಂಕ್ ಖರ್ಗೆ

0
69

ಕಲಬುರಗಿ: ಜಿಲ್ಲೆಯಲ್ಲಿ‌ನ ಗ್ರಾಮಗಳ ಕುಡಿಯುವ‌ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಸಮಗ್ರ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಸಲುವಾಗಿ ನೀಲಿ ನಕ್ಷೆ ತಯಾರಿಸಲಾಗುತ್ತಿದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಆಳಂದ ಪುರಸಭೆ ಸಂಯುಕ್ತಾಶ್ರದಲ್ಲಿ 2021-22 ನೇ ಸಾಲಿನ ಜೆಜೆಎಂ ಯೋಜನೆಯಡಿಯಲ್ಲಿ ಆಳಂದ‌ ತಾಲೂಕಿನ‌ ಕೊರಳ್ಳಿ ಹಾಗೂ ಇತರೆ 4 ಗ್ರಾಮಗಳಿಗೆ ರೂ 36 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಯೋಜನೆಗೆ, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತ ಅಡಿಯಲ್ಲಿ ರೂ 3.19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 12 ಪೊಲೀಸ್ ವಸತಿ ನಿಲಯಗಳಿಗೆ ಅಡಿಗಲ್ಲು
ಹಾಗೂ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿಯಲ್ಲಿ ಆಳಂದ್ ಪಟ್ಟಣಕ್ಕೆ ಅಮರ್ಜಾ ಆಣೆಕಟ್ಟು ಮೂಲದಿಂದ ನೀರು ಸರಬರಾಜು ಅಭಿವೃದ್ದಿ ಯೋಜನೆ ಅಂದಾಜು ಮೊತ್ತ ರೂ 85.86 ಕೋಟಿ ಅಡಿಗಲ್ಲು ನೆರವೇರಿಸಿದ ನಂತರ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅತಿಹೆಚ್ಚು ಲಾಭ ಪಡೆಯುತ್ತಿರುವುದೇ ಬಿಜೆಪಿಯವರು ಎಂದು ಎಂದ ಅವರು ಐದು ಗ್ಯಾರಂಟಿ ಯೋಜನೆಗಳಿಂದ ಅಸಂಖ್ಯಾತ ಕುಟುಂಬಗಳ ನಿರ್ವಹಣೆಗೆ ಆರ್ಥಿಕ‌ ಸಹಾಯ ಒದಗಿಸಲಾಗುತ್ತಿದೆ. ಈ ಸರ್ಕಾರ ರೈತರ ಬಡವರ ಹಾಗೂ ಕಲ್ಯಾಣ ಕರ್ನಾಟಕದ ಪರವಾಗಿರುವ ಸರ್ಕಾರವಾಗಿದ್ದು, ಈ ಭಾಗದ ಅಭಿವೃದ್ದಿಗೆ ಬದ್ಧವಾಗಿದೆ. ಹಾಗಾಗಿ, ಕೆಕೆಆರ್ ಡಿಬಿ ಗೆ ವಾರ್ಷಿಕ ರೂ 5000 ಕೋಟಿ ಅನುದಾನ ನೀಡಲಾಗುತ್ತಿದೆ. ಇದು ಮೂಲಭೂತ ಯೋಜನೆ,ಶಾಲೆ, ಅಂಗನವಾಡಿ ಮುಂತಾದ ಯೋಜನೆಗಳ ಜಾರಿಗೆ ಅನುಕೂಲವಾಗುತ್ತಿದೆ ಎಂದರು.

ಕಲ್ಯಾಣ ಪಥ ಯೋಜನೆಯಡಿಯಲ್ಲಿ ಈ ಭಾಗದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿ ಮಾಡಲಾಗುತ್ತಿದೆ. ಕರ್ನಾಟಕ ಪಥ ಯೋಜನೆಯಡಿಯಲ್ಲಿ ರಾಜ್ಯದ ಇತರೆ ಭಾಗಗಳ ರಸ್ತೆ ಅಭಿವೃದ್ದಿ ಮಾಡಲಾಗುತ್ತಿದೆ. ಆದರೆ ಕಲ್ಯಾಣ ಕರ್ನಾಟಕ‌ಭಾಗದಲ್ಲಿ ಕಲ್ಯಾಣ ಪಥ ಹಾಗೂ ಕರ್ನಾಟಕ ಪಥದ ಅಡಿಯಲ್ಲಿ ರಸ್ತೆ ಅಭಿವೃದ್ದಿ ಮಾಡಲಾಗುತ್ತಿದೆ.

ಆಳಂದ್ ಪಟ್ಟಣ ಹಾಗೂ ತಾಲೂಕಿನ ಅಭಿವೃದ್ದಿಗೆ ಬದ್ಧರಾಗಿದ್ದು ಶಾಸಕ ಬಿ.ಆರ್. ಪಾಟೀಲ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವುದಾಗಿ ಹೇಳಿ ಅವರು ಬಿ.ಆರ್.ಪಾಟೀಲರ ಸಲಹೆ ಹಾಗೂ ಸಹಕಾರ ನನಗೆ ಬೇಕಿದೆ. ಅವರ ಸಲಹೆಯಂತೆ ಅಭಿವೃದ್ದಿ ಕಾರ್ಯ ಮಾಡುವುದಾಗಿ ಹೇಳಿದರು.

ಶಾಸಕ ಎಂ ವೈ ಪಾಟೀಲ ಮಾತನಾಡಿ, ಸಿಎಂ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಭೀಮಾ ನದಿಯಿಂದ ರೂ 360 ಕೋಟಿ ವೆಚ್ಚದಲ್ಲಿ ಅಮರ್ಜಾ ಕೆರೆ‌ ತುಂಬಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಕೇವಲ ಕುಡಿಯುವುದಕ್ಕೆ ಮಾತ್ರವಲ್ಲದೇ ಜಮೀನುಗಳಿಗೆ ಕೂಡಾ ನೀರಾವರಿ ಅವಶ್ಯಕತೆ ಇದೆ. ನೀರಾವರಿ ಯೋಜನೆಗಳ ಮೂಲಕ ರೈತರ ಭೂಮಿಗಳಿಗೆ ನೀರು ಒದಗಿಸುವ ಯೋಜನೆಗಳನ್ನು ಜಾರಿಗೊಳಿಸಲು ತಾವು ಬದ್ದ ಎಂದರು.

ಭೀಮಾ ನದಿಯಿಂದ ಅಫಜಲ್ ಪುರ ಕ್ಷೇತ್ರದ ಪಟ್ಟಣ ಹಾಗೂ ಇತರೆ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ರೂ 300 ಕೋಟಿ ಅನುದಾನ ಒದಗಿಸಿದ್ದು ಸಚಿವ ಪ್ರಿಯಾಂಕ್ ಖರ್ಗೆ. ಅವರ ಪ್ರೋತ್ಸಾಹದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲಾಗುತ್ತಿದೆ ಎಂದರು.

ಸಿಎಂ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ ರೂ 350 ಕೋಟಿ ವೆಚ್ಚದಲ್ಲಿ 18 ತಿಂಗಳಲ್ಲಿ ಭೀಮಾ ನದಿಯಿಂದ ಅಮರ್ಜಾ ಆಣೆಕಟ್ಟಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ‌ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ನಂತರ ಬಂದ ಸರ್ಕಾರ ಆಸಕ್ತಿ ತೋರಿಸದ ಕಾರಣ ಯೋಜನೆ ಮುಗಿಸಲು ವರ್ಷಗಳೇ ಬೇಕಾದವು.

ಭೀಮಾ ನದಿಗೆ ಮಹಾರಾಷ್ಟ್ರ ದಲ್ಲಿ ಹಲವು ಕಡೆ ಡ್ಯಾಂ ಕಟ್ಟಿರುವುದರಿಂದ ಹೊರ ಹರಿವು ಕಡಿಮೆಯಾಗಿದೆ. ಹಾಗಾಗಿ ತಾಲೂಕಿನ ಹಲವಾರು ಗ್ರಾಮಗಳಿಗೆ ನೀರಿನ ಕೊರತೆಯಾಗುತ್ತಿತ್ತು. ಸದರಿ ಯೋಜನೆಯ ಮೂಲಕ ಬಹುಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು.

ತರಕಾರಿ ಹಾಗೂ ಹಣ್ಣು ಬೆಳೆಯುವ ರೈತರಿಗೆ ಅನುಕೂಲವಾಗಲೆಂದು ಯೋಜನೆ ರೂಪಿಸಲು ಜಿಪಂ ಸಿಇಓ ಅವರೊಂದಿಗೆ ಮಾತನಾಡಿದ್ದೇನೆ. ರೇಷ್ಮೆ ಕೃಷಿಗೆ ಇಲ್ಲಿ ಅನುಕೂಲಕರ ವಾತಾವರಣ ಇದೆ. ಸಧ್ಯ 700 ಹೆಕ್ಟೇರ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಆಳಂದ ತಾಲೂಕಿನಲ್ಲಿ ಹಾಲು ಉತ್ಪಾದಿಸಲಾಗುತ್ತಿದೆ. ಅವರಿಗೆ ಮತ್ತಷ್ಟು ಪ್ರೋತ್ಸಾಹಿಸಲು ಸಾಲ‌ಸೌಲಭ್ಯ ಒದಗಿಸಬೇಕಿದೆ ಎಂದರು.

ಆಳಂದ ಪಟ್ಟಣಕ್ಕೆ ರೂ 86 ಕೋಟಿ ಅನುದಾನದಲ್ಲಿ ಪೈಪ್ ಲೈನ್ ಅಳವಡಿಸಿ ಮನೆ‌ಮನೆಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆ ಎರಡು ವರ್ಷದಲದಲಿಯೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಈ ಯೋಜನೆ ಉದ್ಘಾಟನೆಗೆ ಸಚಿವ ಪ್ರಿಯಾಂಕ್ ಖರ್ಗೆ ಬರಬೇಕು ಎಂದರು.

ಆಳಂದ ತಾಲೂಕಿನ ರೈತರಿಗೆ ರೂ 86 ಕೋಟಿ ಬೆಳೆವಿಮೆ ಪರಿಹಾರ ಸಿಕ್ಕಿದೆ. ಇದು ರಾಜ್ಯದಲ್ಲಿಯೇ ಅತಿಹೆಚ್ಚಾಗಿದೆ. ಒಟ್ಟು 175 ಕೋಟಿ ಪರಿಹಾರ ತಾಲೂಕಿಗೆ ಬಂದಿದೆ ಎಂದು ಪಾಟೀಲ್ ಹೇಳಿದರು.

5 ಪಿಯು ಕಾಲೇಜು‌ ಹಾಗೂ 5 ಪ್ರೌಢಶಾಲೆ ಸ್ಥಾಪಿಸುವ ಬೇಡಿಕೆ ಸರ್ಕಾರಕ್ಕೆ ನೀಡಿದ್ದೆ ಅದರಲ್ಲಿ ಈಗಾಗಲೇ 5 ಪಿಯು ಕಾಲೇಜು ಮಂಜೂರಾಗಿವೆ. ತಾಲೂಕಿನ‌ ಜನರು ಉದ್ಯೋಗ ಹುಡುಕುತ್ತಾ ದೂರದೂರಿಗೆ ಹೋಗುತ್ತಿದ್ದಾರೆ. ಅವರ ಜಮೀನುಗಳಿಗೆ ನೀರಾವರಿ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಒದಗಿಸಿದರೆ ಅವರು ಇಲ್ಲಿಯೇ ಉಳಿಯುತ್ತಾರೆ. ಜೊತೆಗೆ ವಿವಿಯ ಪಿಜಿ ಕೇಂದ್ರ ಸ್ಥಾಪಿಸುವುದು ತುರ್ತಾಗಿ ಆಗಬೇಕಾಗಿದೆ ಎಂದರು.

ಆಳಂದ್ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಈ‌ ಸಮಸ್ಯೆ ನೀಗಬೇಕಾದರೆ ಜೆಸ್ಕಾಂ ನ ಪ್ರತ್ಯೇಕ‌ ವಿಭಾಗ ಮಾಡಬೇಕಾಗಿದೆ. ಈಗಾಗಲೇ ಜೆಸ್ಕಾಂ ಎಂಡಿ‌ ಅವರೊಂದಿಗೆ ಮಾತನಾಡಿದ್ದೇನೆ ಎಂದರು.

ದುತ್ತರಗಾಂವ್ ಹಾಗೂ ಇತರೆ ಹದಿನಾಲ್ಕು ಹಳ್ಳಿ ಹಾಗೂ ತಾಂಡಗಳಿಗೆ ರೂ 28. ಕೋಟಿ ಅನುದಾನದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಯತ್ನ ನಡೆಸಿದ್ದು 9 ತಿಂಗಳಲ್ಲಿ ಈ ಯೋಜನೆ ಮುಗಿಸಬೇಕು ಎಂದು ಹೇಳಿದರು.

ಸರ್ಕಾರದ ಹೊಸ‌ಯೋಜನೆಗಳಿಗೆ ಜಮೀನಿನ ಕೊರತೆ ಇದ್ದು ತಾಲೂಕಿನಲ್ಲಿ ಭೂ ಬ್ಯಾಂಕ್ ಸ್ಥಾಪನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಪಾಟೀಲ್ ಇದೇ ಸಂದರ್ಭದಲ್ಲಿ ಹೇಳಿದರು.

ವೇದಿಕೆಯ ಮೇಲೆ ಶಾಸಕರಾದ ಹಾಗೂ ಸಿಎಂ ಸಲಹೆಗಾರರಾದ ಬಿ.ಆರ್.ಪಾಟೀಲ, ಶಾಸಕರಾದ ಎಂ ವೈ ಪಾಟೀಲ, ವಿಧಾನ ಪರಿಷತ್ ಸದಸ್ಯ ರಾದ ಜಗದೇವ ಗುತ್ತೇದಾರ, ಐಜಿ ಅಜಯ್ ಹಿಲೋರಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಎಸ್ ಪಿ, ಶ್ರೀನಿವಾಸ ಅಡ್ಡೂರು, ದೇವೆಂದ್ರಪ್ಪ ಮರತೂರು, ತಹಸೀಲ್ದಾರ ಅಣ್ಣಾರಾವ್ ಪಾಟೀಲ, ನರಸಿಂಹರೆಡ್ಡಿ ಎನ್, ಸಂಗಮೇಶ ಪನಶೆಟ್ಟಿ, ತಾಪಂ ಇಓ ಮಾನಪ್ಪ ಕಟ್ಟೀಮನಿ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here