ಕಲಬುರಗಿ :ಗುಲಬರ್ಗಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದಲ್ಲಿ ಅತಿಥಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಶಂಭುನಾಥ ನಡಗೇರಿ ಅವರಿಗೆ ಪಿ. ಜಿ ಡಿಪ್ಲೊಮಾ ಇನ್ ಪಾಲಿ ಮತ್ತು ಬುದ್ಧಿಸ್ಟ್ ಸ್ಟಡೀಸ್ ಅಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವದರಿಂದ ವಿಶ್ವವಿದ್ಯಾಲಯದ 42ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ ಅವರು ಚಿನ್ನದ ಪದಕ ನೀಡಿ ಗೌರವಿಸಿದರು.
ಡಾ. ಶಂಭುನಾಥ ನಡಗೇರಿ ಅವರು ಮಹಿಳಾ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ ಜನಪ್ರಿಯ ಪರಿಕಲ್ಪನೆಗಳಲ್ಲಿ ಸ್ತ್ರೀವಾದಿ ಸಿದ್ಧಾಂತ , ನಿಲುವು ಸಿದ್ಧಾಂತ , ಬಹುಸಾಂಸ್ಕೃತಿಕತೆ , ಬಹುರಾಷ್ಟ್ರೀಯ ಸ್ತ್ರೀವಾದ , ಸಾಮಾಜಿಕ ನ್ಯಾಯ ಮತ್ತು ಅದರ ಅಧ್ಯಯನಗಳ ಪ್ರಭಾವ ಹೀಗೆ ಹಲವು ಮೈಲಿಯಲ್ಲಿ ಸಂಶೋಧನೆ ಮುಂದುವರಿಸಿದ್ದಾರೆ.
ಅವರ ಸಾಧನೆಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಡಾ. ಅರುಣ್ ಕುರನೆ, ಡಾ. ಎಂ. ಬಿ. ಕಟ್ಟಿ, ಡಾ. ಅಶೋಕ ದೊಡ್ಡಮನಿ, ಡಾ. ಹಣಮಂತ ಮೇಲಕೇರಿ, ಡಾ. ಶಿವಾನಂದ ಕಡಗಂಚಿ, ಅನೇಕ ಗಣ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.