ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳ ತಾರತಮ್ಯ: ಮಾಜಿ ಶಾಸಕ ಗರಂ

0
80

ಸುರಪುರ: ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳ ಹಿಂದೆ ಬಂದ ಕೃಷ್ಣಾ ಪ್ರವಾಹದಿಂದ ಮನೆ ಜಮೀನುಗಳ ಕಳೆದುಕೊಂಡು ಸಂತ್ರಸ್ತರಾಗಿರುವ ಕುಟುಂಬಗಳಿಗೆ ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿರುವುದಾಗಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿ ಸುಮಾರು 232 ಮನೆಗಳು ನೆರೆಯಿಂದ ಹಾಳಾಗಿವೆ.ಆದರೆ ಅಧಿಕಾರಿಗಳು ಕೇವಲ ೧೭೨ ಮನೆಗಳನ್ನು ಮಾತ್ರ ಸರ್ವೇ ಮಾಡಿ ಇನ್ನುಳಿದ 60 ಮನೆಗಳನ್ನು ನಿರ್ಲಕ್ಷಿಸಿ ಬಿಡಲಾಗಿದೆ. ಇದರಿಂದ ಆ ಅರವತ್ತು ಕುಟುಂಬಗಳು ಸಂಕಷ್ಟ ಪಡುವಂತಾಗಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.

Contact Your\'s Advertisement; 9902492681

ನಂತರ ಜಿಲ್ಲಾಧಿಕಾರಿಗಳು ಪುನಃ ಸರ್ವೇ ಮಾಡಿಸಿ ಆ ಕುಟುಂಬಗಳಿಗೆ ನ್ಯಾಯ ಒದಗಿಸಿದ್ದಾರೆ. ಇದು ಕೇವಲ ತಿಂಥಣಿ ಒಂದು ಗ್ರಾಮದಲ್ಲಾದ ತಾರತಮ್ಯವಲ್ಲ ಅನೇಕ ಕಡೆಗಳಲ್ಲಿ ಈ ರೀತಿಯ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಎಲ್ಲಾ ಅಧಿಕಾರಿಗಳ ಸಭೆ ಕರೆದು ಈರೀತಿಯ ತಾರತಮ್ಯ ಮಾಡದಂತೆ ಆದೇಶ ಮಾಡಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಇದರ ವಿರುಧ್ಧ ಹೋರಾಟ ನಡೆಸಬೇಕಾಗಲಿದೆ ಎಂದು ಅವರು ತಹಸೀಲ್ದಾರರಿಗೆ ಆಹ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here