ಕಲಬುರಗಿ ಉಸ್ತುವಾರಿ ಸಚಿವರಿಂದ 50 ವೇಗದೂತ ಮಾದರಿ ಬಸ್ಸುಗಳಿಗೆ ಚಾಲನೆ

0
154

ಕಲಬುರಗಿ: ರಾಜ್ಯದ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 78ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ 50 ವೇಗದೂತ ಮಾದರಿ ಬಸ್ ಹಾಗೂ 12 ಲಾಜಿಸ್ಟಿಕ್ ಟ್ರಕ್‌ಗಳಿಗೆ ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಈ ಭಾಗದ ಪ್ರಯಾಣಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಒದಗಿಸಿದ 45 ಕೋಟಿ ರೂ. ಅನುದಾನದಡಿ ತಲ 41.50 ಲಕ್ಷ ರೂ. ಮೊತ್ತದಲ್ಲಿ 109 ಬಸ್‌ಗಳನ್ನು ಖರೀದಿಸಲಾಗುತ್ತಿದ್ದು, ಇದರಲ್ಲಿ ಈಗ ಸರಬರಾಜಾಗಿರುವ 50 ಬಸ್‌ಗಳಿಗೆ ಇಂದಿಲ್ಲಿ ಚಾಲನೆ ನೀಡಲಾಯಿತು. ಇನ್ನೂಳಿದ 59 ಬಸ್‌ಗಳು ಸೆಪ್ಟೆಂಬರ್-24 ರ ಮಾಹೆಯಲ್ಲಿ ಸರಬರಾಜಾಗಲಿದ್ದು, ನಂತರ ಸಾರ್ವಜನಿಕ ಪ್ರಯಾಣಿಕರ ಬಳಕೆಗಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Contact Your\'s Advertisement; 9902492681

ಈ ಬಸ್‌ಗಳು 200 ಹೆಚ್.ಪಿ. ಸಾಮರ್ಥ್ಯದ ಬಿ.ಎಸ್.-6 ಇಂಜಿನ್ ಅಳವಡಿಸಿದ್ದು, 50 ಪ್ರಯಾಣಿಕ ಆಸನಗಳ ವ್ಯವಸ್ಥೆ ಇದೆ. ಈ ಬಸ್‌ಗಳನ್ನು ಆಟೋಮೋಟಿವ್ ಇಂಡಸ್ಟ್ರಿ, ಸ್ಯಾಂಡರ್ಡ್ ಬಸ್‌ಕೋಡ್‌ನಂತೆ ನಿರ್ಮಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಫೈರ್ ಡಿಕ್ಟೇಶನ್ ಮತ್ತು ಅಲಾರಾಂ ಸಿಸ್ಟಮ್, ಎಲೆಕ್ಟಾçನಿಕ್ ವಹಿಕಲ್ ಸ್ಟಾಬಿಲಿಟಿ ಕಂಟ್ರೋಲ್ ಸಿಸ್ಟಮ್, ಪವರ್ ಆಪರೇಟೆಡ್ ಬಾಗಿಲು, ಕ್ಯಾಮೆರಾ, ರಿವರ್ಸ್ ಪಾರ್ಕಿಂಗ್ ಅಲಾರಂ ಸಿಸ್ಟಮ್, ವಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಮ್, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸುರಕ್ಷತೆಗಾಗಿ ಉಪಯೋಗಿಸಿಕೊಳ್ಳಲು ಪ್ಯಾನಿಕ್ ಬಟನ್ ಹಾಗೂ ಪ್ಯಾಸೆಂಜರ್ ಇನ್‌ಫಾರ್ಮೇಶನ್ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ.

ಲಾಜಿಸ್ಟಿಕ್ ಟ್ರಕ್‌ಗಳಿಗೂ ಚಾಲನೆ: ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಗ್ರಾಣ/ಘಟಕಗಳಿಗೆ ಅವಶ್ಯ ಸಾಮಗ್ರಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ತಲಾ 17.50 ಲಕ್ಷ ರೂ. ಮೊತ್ತದ 12 ನೂತನ ಟ್ರಕ್‌ಗಳು ಖರೀದಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೂ ಚಾಲನೆ ನೀಡಿ ಸರಕು ಸಾಗಣೆ ಸೇವೆಗೆ ಸಮರ್ಪಿಸಿದರು.

120 ಎಚ್.ಪಿ. ಸಾಮರ್ಥ್ಯದ ಬಿಎಸ್ 6 ಎಂಜಿನ್‌ಗಳನ್ನು ಹೊಂದಿರುವ ಈ ಟ್ರಕ್‌ಗಳಲ್ಲಿ ಆಯಾಸ-ಮುಕ್ತ ಚಾಲನೆ ಹಾಗೂ ಮೈಲೇಜ್ ಸುಧಾರಿಸಲು ಕ್ರೂಜ್ ಕಂಟ್ರೋಲ್ ವ್ಯವಸ್ಥೆ ಹಾಗೂ ಸುರಕ್ಷತೆಗಾಗಿ ಅಗ್ನಿ ನಂದಕ ಉಪಕರಣ ಹಾಗೂ ರೀವರ್ಸ್ ಪಾರ್ಕಿಂಗ್ ಅಲರಾಮ್ ಸಿಸ್ಟಂ ಅಳವಡಿಸಲಾಗಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪಾ, ಮುಖ್ಯ ಸಂಚಾರ ಅಧಿಕಾರಿ ಸಂತೋಷ ಕುಮಾರ, ಚೀಫ್ ಮೆಕಾನಿಕಲ್ ಇಂಜಿನೀಯರ್ ಸಂತೋಷ ಗೋಗೇರಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಈಶ್ವರ ಹೊಸಮನಿ, ಸಿದ್ದಪ್ಪ ಗಂಗಾಧರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here