ಪಾಲಕರ ಸಹಕಾರದಿಂದ ಶಾಲೆಗಳು ಅಭಿವೃದ್ಧಿ

0
37

ಕಲಬುರಗಿ: ಯಾವುದೇ ಒಂದು ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಸರಕಾರದ ಜೊತೆಗೆ ಪಾಲಕರು ಸಹ ಕೈಜೋಡಿಸಿದಾಗ ಮಾತ್ರ ಅಭಿವೃದ್ದಿ ಸಾಧ್ಯವೆಂದು ಪ್ರಭಾರಿ ಪ್ರಾಚಾರ್ಯ ಡಾ.ರಾಜಶೇಖರ ಮಾಂಗ್ ಹೇಳಿದರು.

ಅವರು ಆಳಂದ ತಾಲೂಕಿನ ಕೊರಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ನಡೆದ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಮಕ್ಕಳಿಗೆ ಕೇವಲ ಶಾಲೆಗೆ ಸೇರಿಸಿದರೆ ಸಾಲದು ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಆಗಾಗ ಶಾಲಾ ಸಿಬ್ಬಂದಿಗಳ ಜೊತೆ ಚರ್ಚಿಸಬೇಕು, ನಿರಂತರವಾಗಿ ಕಲಿಕಾ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಹೇಳಿದರು.

Contact Your\'s Advertisement; 9902492681

ಸರಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಮಕ್ಕಳಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಅವರ ಸವಾಂಗೀಣ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಪಾಲಕ ಪ್ರತಿನಿಧಿ ಮಲ್ಲಿಕಾರ್ಜುನ ಬೋಳಣಿ ಮಾತನಾಡಿ,ಹೊಸ ಪ್ರಾಂಶುಪಾಲರು ಬಂದ ನಂತರ ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ.ಮಕ್ಕಳಿಗೆ ಗುಣಮಟ್ಟದ ಆಹಾರದ ಜೊತೆಗೆ ಉತ್ತಮ ಶಿಕ್ಷಣ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಅವರು ಬುದ್ದ,ಬಸವ,ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಶಾಲೆಗೆ ಕಾಣಿಕೆಯಾಗಿ ನೀಡಿದರು.

ಅತಿಥಿಗಳಾಗಿ ಧರ್ಮಾ ಬಂಗರಗಾ, ಪ್ರಕಾಶ ಜಂಗಲೆ, ಲತಾ ಶ್ರೀನಿವಾಸ ಬೋಸಗೆ ಆಗಮಿಸಿದ್ದರು. ಶಿಕ್ಷಕ ಜಗದೀಶ್ ಗಣಪತಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here