ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡೋಂಗರಗಾಂವ ಗ್ರಾಮದ ಕೆರೆ ಹತ್ತಿರ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯ ಗುರುತು ಇದುವರೆಗೆ ಪತ್ತೆಯಾಗಿಲ್ಲ, ಡೋಂಗರಗಾಂವ ಕೆರೆ ಹತ್ತಿರದಲ್ಲಿ ನಿನ್ನೆ ರಾತ್ರಿ ಕೊಲೆ ಮಾಡಿ ವ್ಯಕ್ತ ಶವ ಬಿಸಾಡಿದ್ದಾರೆ ಎಂದು ಅನುಮಾನಿಸಲಾಗಿದ್ದು, ಮೃತ ವ್ಯಕ್ತಿಯ ಕತ್ತು ಕೊಯಿದು ಕೊಲೆ ಮಾಡಿರುವುದಾಗಿ ಮೇಲ್ನೋಟಕ್ಕೆ, ಕಂಡು ಬರುತಿದ್ದು, ಮೃತನ ಹೆಸರು ಮತ್ತು ವಿಳಾಸ ಹಾಗೂ ಕೊಲೆಗೆ ಕಾರಣದ ಬಗ್ಗೆ ಕಮಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.