ಕಲಬುರಗಿ: ರಾಷ್ಟ್ರ ಸ್ವತಂತ್ರ ಪಡೆಯಲು ಎಷ್ಟು ಶ್ರಮಿಸಿದರೊ, ಇಂದಿನ ದಿನದಲ್ಲಿ ಸ್ವಾತಂತ್ರ್ಯ ಉಳಿಸಿ ಸಮಾನತೆ ಸಾರುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಕೆ ಎಚ್ ಬಿ ಗ್ರೀನ್ ಪಾರ್ಕ್ ಕ್ಷೆಮಾಭಿವೃದ್ಧಿ ನಿವಾಸಿಗಳ ಸಂಘದ ಅಧ್ಯಕ್ಷರಾದ ಸಂಜು ಕುಮಾರ ಶೆಟ್ಟಿ ಹೇಳಿದರು.
ನಗರದ ಸಂತೋಷ ಕಾಲೋನಿಯ ಕೆಎಚಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ಮಾತನಾಡಿದ ಅವರು ಸ್ವಾತಂತ್ರ್ಯ ಪಡಯಲು ಲಕ್ಷಾಂತರ ಮಹನೀಯರ ಜೀವ ಬಲಿದಾನದಿಂದ ಸಿಕ್ಕಿದೆ. ಇಂದಿನ ಮಕ್ಕಳಿಗೆ ಸ್ವಾತಂತ್ರ್ಯವೀರ ಪರಿಚಯಿಸುವುದರೊಂದಿಗೆ ರಾಷ್ಟ್ರಭಕ್ತಿ ಮೂಡಿಸಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಬಡಾವಣೆ ಅಭಿವೃದ್ಧಿ ಮಾಡುವುದರೊಂದಿಗೆ ರಾಷ್ಟ್ರ ಅಭಿವೃದ್ಧಿಗೆ ಬುನಾದಿ ಹಾಕೋಣ ಎಂದು ಮಾರ್ಮಿಕವಾಗಿ ನುಡಿದರು.
ನಾಗೇಂದ್ರಪ್ಪಾ ದಂಡೋತಿಕರ, ಬಾಲಕೃಷ್ಣ ಕುಲಕರ್ಣಿ, ಸಂಗಮೇಶ್ವರ ಸರಡಗಿ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಅನಿತಾ ಭಕರೆ, ನಿವೃತ್ತ ಶಿಕ್ಷಕರಾದ ಹಣಮಂತರಾವ ಪಾಟೀಲ, ಲಕ್ಷ್ಮಿ ಕಾಟಕೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ಬುಜ್ಜಿ, ಡಿ ವಿ ಕುಲಕರ್ಣಿ, ಕಲ್ಯಾಣರಾವ ಮಡಿವಾಳ, ಪ್ರಕಾಶ ಕುಲಕರ್ಣಿ, ವೀರಯ್ಯಸ್ವಾಮಿ, ಡಿ ಆರ್ ಕುಲಕರ್ಣಿ, ಜಿತೇಂದ್ರ ಸಿಂಗ್ ಠಾಕೂರ, ಶಿವಣಗೌಡ ಪಾಟೀಲ ಮಧಗುಣಕಿ ಸೇರಿದಂತೆ ಬಡಾವಣೆಯ ಅನೇಕ ಜನ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಅಶೋಕ ವಿ ವಾಗಜಿ, ಬಸವರಾಜ ಬಳ್ಳೂರ್ಗಿ, ರಾಮ ಬಾಬುರಾವ ಪಾಟೀಲ ಇವರನ್ನು ಗೌರವಿಸಲಾಯಿತು. ಖ್ಯಾತ ಸಂಗೀತ ಕಲಾವಿದರಾದ ಶರಣಪ್ಪ ಕಟ್ಟಿಮನಿ, ರವೀಂದ್ರ ಗುತ್ತೇದಾರ, ದಿಲೀಪಕುಮಾರ ಭಕರೆ, ಲಕ್ಷ್ಮಿ ಡಿ. ಕುಲಕರ್ಣಿ,ಗಿರಿಜಾ, ಸೇರಿದಂತೆ ಅನೇಕ ಜನ ದೇಶಭಕ್ತಿ ಗೀತೆಗಳು ಪ್ರಸ್ತುತಪಡಿಸಿ ಜನರನ್ನು ರಂಜಿಸಿದರು.