ಸ್ವಾತಂತ್ರ್ಯ ದೇಶದ ಭಾವೈಕ್ಯತೆ – ನೆಮ್ಮದಿ ಬದುಕಿಗೆ ಸಹಕಾರಿ

0
62

ಶಹಾಬಾದ: ಸ್ವಾತಂತ್ರ್ಯ ದಿನಾಚರಣೆ ಇದು ದೇಶದ ಅತಿ ದೊಡ್ಡ ಹಬ್ಬ.ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯ ದೇಶದ ಜನ ಸಮುದಾಯ ಅಭಿವೃದ್ಧಿ, ಭಾವೈಕ್ಯತೆ ಮತ್ತು ನೆಮ್ಮದಿ ಬದುಕಿಗೆ ಸಹಕಾರಿಯಾಗಿದೆ ಎಂದು ಲುಂಬಿನಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್.ಮೇತ್ರೆ ಹೇಳಿದರು.

ಅವರು ಗುರುವಾರ ನಗರದ ಪ್ರಜ್ಞಾ ಪಬ್ಲಿಕ್ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಬಡತನ,ಅನಕ್ಷರತೆ ಮತ್ತು ಅಸಮಾನತೆಯಿಂದ ಮುಕ್ತಿಯೇ ನಿಜವಾದ ಸ್ವಾತಂತ್ರ್ಯ ಎಂದ ಗಾಂಧೀಜಿಯವರ ಆಶಯದ ಬೆಳಕಿನಲ್ಲಿ ಮುನ್ನಡೆಯಬೇಕಾಗಿದೆ.ಇಂದು ಅವರು ಕೊಟ್ಟ ಸ್ವಾತಂತ್ರ್ಯದ ಫಲವಾಗಿಯೇ ಮುಕ್ತ ವಾತಾವರಣದಲ್ಲಿ ಬದುಕುತ್ತಿದ್ದೆವೆ ಎಂದು ಯಾರು ಮರೆಯಬಾರದು.

ರಾಷ್ಟ್ರಪ್ರೇಮ, ದೇಶಾಭಿಮಾನ ,ನಮ್ಮ ನಾಡು ನುಡಿಗಳ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಮಾತ್ರ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸುವ ಮೂಲಕ ಸ್ವತಂತ್ರೋತ್ಸವವನ್ನು ಅರ್ಥ ಗರ್ಭಿತಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಸುರೇಖಾ.ಪಿ.ಮೇತ್ರಿ ,ಶಿಕ್ಷಕರು, ಮಕ್ಕಳ ಪಾಲಕರು ಹಾಗೂ ಶಾಲಾಮಕ್ಕಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here