ಸುರಪುರ: ಶ್ರೀಕೃಷ್ಣ ಪರಮಾತ್ಮನು ಆರಾಧನೆಯಿಂದ ಸನ್ಮಾರ್ಗ ಲಭಿಸಿ ನಾವು ಭವಸಾಗರದಿಂದ ಮುಕ್ತಿ ಮಾರ್ಗದಡೆಗೆ ಹೋಗಬಹುದು ಎಂದು ಚಿತ್ರದುರ್ಗ ಯಾದವ ಸಂಸ್ಥಾನ ಮಠದ ಶ್ರೀ ಯಾದವಾನಂದ ಸ್ವಾಮಿಜಿ ತಿಳಿಸಿದರು.
ತಾಲೂಕಿನ ಪೇಠಅಮ್ಮಾಪುರ ಗ್ರಾಮದಲ್ಲಿ ಯಾದವ ಸಮುದಾಯದವರಿಂದ ಶ್ರೀಕೃಷ್ಣನ ಮೂರ್ತಿ ಪ್ರತಿಷ್ಠಾಪನೆ ಮತ್ತು ದೇವಸ್ಥಾನಕ್ಕೆ ಕಳಾಸಾರೋಹಣವನ್ನು ಸ್ಥಾಪಿಸಿ ಮಾತನಾಡಿದ ಅವರು ಶ್ರೀಕೃಷ್ಣನ ಬಗ್ಗೆ ಹಲವರು ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ ಶ್ರೀ ಕೃಷ್ಣನು ಅರ್ಜುನನಿಗೆ ಭೋಧಿಸಿದ ಭಗ್ವತಗೀತೆಯಿಂದ ಅವನ ಮಹಿಮೆಗಳು ಗೊತ್ತಾಗುತ್ತವೆ ಭಗವಾನ ಕೃಷ್ಣನು ಸರ್ವವ್ಯಾಪಿಯಾಗಿದ್ದು ಅವನನ್ನು ಭಕ್ತಿಯಿಂದ ಪೂಜಿಸದರೆ ನಮ್ಮ ಜನ್ಮ ಕೃರ್ತಾಥವಾಗುತ್ತದೆ ಎಂದರು ಕನಕದಾಸರು, ವಾಲ್ಮೀಕಿ, ಭಗೀರಥ, ಬಸವಣ್ಣನವರಂಥ ಧಾರ್ಶೀನಿಕ ಮಹನಿಯರು ಒಂದು ಜಾತಿಗೆ ಸೀಮಿತವಲ್ಲ ಅವರ ಎಲ್ಲಾ ಮನುಜಕೂಲಕ್ಕೆ ಅವರುಗಳು ಆಧರ್ಶಪ್ರಾಯರು ಅವರ ಆದರ್ಶಗಳನ್ನು ನಾವುಗಳು ಅಳವಡಿಸಿಕೊಂಡು ಸಮಾಜದಲ್ಲಿ ಸಮಾನತೆಯಿಂದ ಇರಬಹುದಾಗಿದೆ ಎಂದು ಆರ್ಶೀವಚಿಸಿದರು.
ಪುರೋಹಿತರಿಂದ ದೇವಸ್ಥಾನಕ್ಕೆ ಕುಂಭಾಭಿಶೇಖ ಮತ್ತು ಪ್ರತಿಷ್ಠಾಪನೆಯ ವಿಧಿವಿಧಾನಗಳು ಜರುಗಿದವು ಗ್ರಾಮದಲ್ಲಿ ಸಮಸ್ತ ಯಾದವ ಭಂದುಗಳಿಂದ ಮತ್ತು ಗ್ರಾಮಸ್ಥರಿಂದ ಶ್ರೀ ಕೃಷ್ಣನ ಭಾವಚಿತ್ರ ಹಾಗೂ ಶ್ರೀ ಯಾದವಾನಂದ ಸ್ವಾಮಿಜಿಯವರನ್ನು ಶೋಭಾಯಾತ್ರೆಯ ಮಾಡಲಾಯಿತು ಈ ವೇಳೆ ಶಿವಮುಗ್ಗಾದ ಮಹಿಳಾತಂಡದಿಂದ ಡೊಳ್ಳುಕುಣಿತ ತಾಲೂಕಿನ ಗ್ರಾಮದವರಿಂದ ಡೊಳ್ಳುವಾಧ್ಯ, ಹಾಲೂಕುಳಿ ಕಾರ್ಯಕ್ರಮಗಳು ಮತ್ತು ಕುದುರೆ ಕುಣಿತ ಇನ್ನಿತರ ಕಾರ್ಯಕ್ರಮಗಳು ಜರುಗಿದವು ಈ ಕಾರ್ಯಕ್ರಮದಲ್ಲಿ ಕಲಬುರ್ಗಿ, ಶಹಾಪುರ, ಸೇರಿದಂತೆ ಇನ್ನಿತರೆ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿತ್ತು ಪೇಠ ಅಮ್ಮಾಪರ ಗ್ರಾಮದ ಹಾಗೂ ಯಾದವ ಸಮಾಜದ ಮುಖಂಡು ಭಕ್ತಾದಿಗಳು ಇದ್ದರು.