ಸುರಪುರ: ಯಾವುದೇ ಕಾಮಗಾರಿ ನಿರ್ಮಿಸಿದರು ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಿಸಿದರೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿಯಲ್ಲಿ 1.75 ಕೋಟಿ ರೂಪಾಯಿ ಅನುದಾನದ ನೂತನ ಪ್ರಯೋಗಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಚಾಲನೆ ನೀಡಿ ಮಾತನಾಡಿ,ಯಾವುದೇ ಕಾಮಗಾರಿಯಾಗಲಿ ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಾಣ ಪ್ರಮುಖವಾದುದು.ಆದ್ದರಿಂದ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಜನ ಮೆಚ್ಚುವಂತಿರಬೇಕು,ಆ ನಿಟ್ಟಿನಲ್ಲಿ ಕಾಮಗಾರಿ ನಿರ್ಮಾಣಕ್ಕೆ ಅಧಿಕಾರಿಗಳಿಗೂ ಹೇಳುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜ್ ವತಿಯಿಂದ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ವಿ.ಯಾದವ್,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ,ಮಾಜಿ ಅಧ್ಯಕ್ಷರಾದ ರಾಜಾ ವಾಸುದೇವ ನಾಯಕ,ಸೂಗುರೇಶ ವಾರದ,ಮುಖಂಡರಾದ ಮಲ್ಲಣ್ಣ ಸಾಹುಕಾರ ನರಸಿಂಗಪೇಟ,ಅಬ್ದುಲ್ ಗಫೂರ ನಗನೂರಿ,ರಾಜಾ ಅಪ್ಪಾರಾವ್ ನಾಯಕ ವೇದಿಕೆಯಲ್ಲಿದ್ದರು.
ಕಾಲೇಜ್ ಪ್ರಾಂಶುಪಾಲ ಶ್ರೀಕಾಂತ ಜಿ.ಕೆ ಉಪಸ್ಥಿತರಿದ್ದರು.ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಕರ್ನಾಟಕ ಗೃಹ ಮಂಡಳಿ ಇಲಾಖೆ ಎಇಇ ಗಿರೀಶ,ಸಿಂಘಾಡೆ ಕನಸ್ಟ್ರಕ್ಷನ್‍ನ ಪ್ರಮೋದ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು,ಸಿಬ್ಬಂದಿಗಳು ಸೇರಿ ಅನೇಕರು ಭಾಗವಹಿಸಿದ್ದರು.ಉಪನ್ಯಾಸಕ ರಾಮನಗೌಡ ಸುಬೇದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಗರದ ಕುಂಬಾರಪೇಟೆಯ ಕುರುಬರಗಲ್ಲಿಯಲ್ಲಿ 45 ಲಕ್ಷ ರೂಪಾಯಿಗಳ ಅನುದಾನದಲ್ಲಿ ಕನಕ ಭವನ ನಿರ್ಮಾಣ ಹಾಗೂ ರಂಗಂಪೇಟೆಯ ದೊಡ್ಡ ಬಜಾರದಲ್ಲಿ 45 ಲಕ್ಷ ರೂಪಾಯಿಗಳ ಅನುದಾನದ ಶ್ರೀ ಜಿವ್ಹೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ರಾಜಾ ವೇಣುಗೊಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿದರು.