ಹೈ ಕ ಪ್ರದೇಶದ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸದ ಜಾಧವ್ ಗೆ ಭೇಟಿ

0
127

ಕಲಬುರಗಿ: ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ನಿಯೋಗ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಇಂದು ಲೋಕಸಭಾ ಸದಸ್ಯರಾದ ಡಾ. ಉಮೇಶ ಜಾಧವರವರನ್ನು ಅವರ ಕಛೇರಿಯಲ್ಲಿ ಭೇಟಿಯಾಗಿ ಕಲಬುರಗಿ ರೈಲ್ವೆ ವಿಭಾಗೀಯ ಕಛೇರಿ ಸೇರಿದಂತೆ ಹೈ ಕ ಪ್ರದೇಶದ ರೈಲ್ವೆ ಕ್ಷೇತ್ರದ ಅಭಿವೃದ್ಧಿಯ ವಿಷಯವಾಗಿ ವಿವರವಾಗಿ ಚರ್ಚಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಯಿತು.

ಸಂಸದರಾದ ಉಮೇಶ ಜಾಧವರವರು ಈ ಬಗ್ಗೆ ತಾವು ಗಂಭೀರವಾಗಿ ಪರಿಗಣಿಸಿರುವದಾಗಿ ತಿಳಿಸಿದ್ದು. ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೇಂದ್ರ ಸರ್ಕಾರದ ಸಕಾರಾತ್ಮಕವಾಗಿ ಒತ್ತಾಯ ತರುವದಾಗಿ ಆಶ್ವಾಸನೆ ನೀಡಿದ್ದಾರೆಂದು ಅವರು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮನೀಷ ಜಾಜು ಪರಿಣಿತ ಸಮಿತಿಯ ಸದಸ್ಯರುಗಳಾದ  ಸನೀಲ ಕುಲಕರ್ಣಿ ಆನಂದ ದೇಶಪಾಂಡೆ ಸುನೀಲ ಗಣಪತಿ ಅಬ್ದುಲ ರಹೀಮ ಆಕಾಶ ರಾಠೋಡ ಹೇಮಂತ ರಾಠೋಡ್ ಚೌಂಗೆ ಸೇರಿದಂತೆ ಸಮಿತಿಯ ಅನೇಕ ಸದಸ್ಯರು ಹಾಜರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here