ಸುರಪುರ: ನಗರದ ಹೊರ ವಲಯದಲ್ಲಿನ ಡಿ.ದೇವರಾಜ ಅರಸು ಭವನದ ಬಳಿಯಲ್ಲಿ ನಿರ್ಮಿಸಲಾಗುತ್ತಿರುವ ಪತ್ರಿಕಾ ಭವನ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಅಡಿಪಾಯ ನಿರ್ಮಾಣ ಮಾಡಿರುವ ಕಾಮಗಾರಿಯ ನಕ್ಷೆ ಸರಿಯಾಗಿಲ್ಲದ ಕಾರಣ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಖಂಡರು ಕಾಮಗಾರಿ ಸರಿಯಾಗಿಲ್ಲದ ಕುರಿತು ವಿರೋಧ ವ್ಯಕ್ತಪಡಿಸಿ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಮನವಿ ಮಾಡಿ,ಸರಿಯಾದ ರೀತಿಯ ಕಾಮಗಾರಿ ನಿರ್ಮಾಣಕ್ಕೆ ಸೂಚಿಸುವಂತೆ ಮನವಿ ಮಾಡಲಾಗಿತ್ತು.ಅದರಂತೆ ಶನಿವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಿರ್ಮಿಸುತ್ತಿರುವ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ,ಕಾಮಗಾರಿ ನಕ್ಷೆ ತೆಗೆದುಕೊಂಡು ಬರುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರು ಶಾಸಕ ರಾಜಾ ವೇಣುಗೋಪಾಲ ನಾಯಕ ಹಾಗೂ ಅವರೊಂದಿಗೆ ಆಗಮಿಸಿದ್ದ ಮುಖಂಡರಾದ ವಿಠ್ಠಲ್ ವಿ.ಯಾದವ್,ಪ್ರಕಾಶ ಗುತ್ತೇದಾರ,ರಾಜಾ ವಾಸುದೇವ ನಾಯಕ,ಸೂಗುರೇಶ ವಾರದ್,ಮಲ್ಲಣ್ಣ ಸಾಹುಕಾರ ನರಸಿಂಗಪೇಟ,ಅಬ್ದುಲ್ ಗಫೂರ ನಗನೂರಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ವೆಂಕಟೇಶ ರಡ್ಡಿ,ಕರ್ನಾಟಕ ಭೂ ಸೇನಾ ನಿಗಮದ ಚಂದ್ರೇಗೌಡ ಹಾಗೂ ಸಂಘದ ಗೌರವಾಧ್ಯಕ್ಷ ಗಿರೀಶ ಶಾಬಾದಿ,ಅಧ್ಯಕ್ಷ ಶ್ರೀಕರ ಭಟ್ ಜೋಷಿ,ಪ್ರ.ಕಾರ್ಯದರ್ಶಿ ಕ್ಷೀರಲಿಂಗಯ್ಯ ಬೋನ್ಹಾಳ,ಖಜಾಂಚಿ ನಾಗರಾಜ ನ್ಯಾಮತಿ ಹಾಗೂ ಪತ್ರಕರ್ತರಾದ ಮಲ್ಲು ಗುಳಗಿ,ನಿಕಟ ಪೂರ್ವ ಅಧ್ಯಕ್ಷ ಸಿದ್ದಯ್ಯ ಪಾಟೀಲ್,ಧೀರೇಂದ್ರ ಕುಲಕರ್ಣಿ,ರಾಜು ಕುಂಬಾರ,ಕಲೀಂ ಫರಿದಿ, ಪರಶುರಾಮ ಮಲ್ಲಿಬಾವಿ,ಶ್ರೀಮಂತ ಚಲುವಾದಿ,ಉಸ್ಮಾನ ಚಿತ್ತಾಪುರ,ವೆಂಕಟೇಶ ಯಾದವ್,ಥಾಮಸ್ ಮ್ಯಾಥ್ಯೂ ಸೇರಿದಂತೆ ಅನೇಕರಿದ್ದರು.