ಕೆನರಾ ಬ್ಯಾಂಕ್‍ನಿಂದ ವಿದ್ಯಾರ್ಥಿನಿಯರಿಗೆ ವಿದ್ಯಾ ಜ್ಯೋತಿ ಸ್ಕಾಲರ್‍ಶಿಪ್ ವಿತರಣೆ

0
83

ಶಹಾಬಾದ: ಬಡ ವಿದ್ಯಾರ್ಥಿಗಳಿಗೆ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‍ಶಿಪ್ ಯೋಜನೆಯ ಮೂಲಕ ಸ್ಕಾಲರ್‍ಶಿಪ್ ನೀಡುತ್ತಿರುವುದು ತುಂಬಾ ಅನುಕೂಲವಾಗಿದೆ ಎಂದು ಕರ್ನಾ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್ ಹೇಳಿದರು.

ಅವರು ನಗರದ ಸರಕಾರಿ ಕನ್ಯಾ ಪ್ರೌಢಶಾಲೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಜ್ ಏರಿಯಾ ಶಾಳೆಯಲ್ಲಿ ಏರ್ಪಡಿಸಿದ್ದ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ ಸ್ಕಾಲರ್‍ಶಿಪ್ ಯೋಜನೆಯ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಈ ಯೋಜನೆ ವಿದ್ಯಾರ್ಥಿನಿಯರಿಗೆ ಮಾತ್ರ ಇದ್ದು, ಇದರ ಸಂಪೂರ್ಣ ಸದುಪಯೋಗಪಡಿಸಿಕೊಂಡು, ಉತ್ತಮ ಅಭ್ಯಾಸ ಮಾಡಬೇಕು.ಅಲ್ಲದೇ ಉತ್ತಮ ಶಿಕ್ಷಣ ಪಡೆದು ದೇಶದ ಒಳ್ಳೆಯ ನಾಗರಿಕರಾಗಬೇಕು.ಮುಂದೆ ತಾವುಗಳು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕೆನರಾ ಬ್ಯಾಂಕ್‍ನ ವ್ಯವಸ್ಥಾಪಕ ಮುನ್ನಯ್ಯ ಮಾತನಾಡಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ಕೆನರಾ ಬ್ಯಾಂಕ್ ಡಾ.ಅಂಬೇಡ್ಕರ್ ವಿದ್ಯಾ ಜ್ಯೋತಿ’ ಯೋಜನೆ ತಂದಿದೆ.

ಈ ಬಾರಿ ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡದ ಐದನೇ ತರಗತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿನಿಯರಿಗೆ ವಿದ್ಯಾ ಜ್ಯೋತಿ ಶಿಷ್ಯ ವೇತನ ಚೆಕ್ ವಿತರಣೆ ಮಾಡಿದ್ದೆವೆ.ಹೆಣ್ಣುಮಕ್ಕಳ ಶಿಕ್ಷಣವನ್ನು ಅರ್ಥಪೂರ್ಣ ಅಭಿವೃದ್ಧಿಗೆ ಮೂಲಭೂತ ಅಗತ್ಯವೆಂದು ಪ್ರಚಾರ ಮಾಡಿದ ಸಂಸ್ಥಾಪಕ ಅಮ್ಮೆಂಬಳ ಸುಬ್ಬಾರಾವ್ ಪೈ ಅವರಿಗೆ ಗೌರವಾರ್ಥವಾಗಿ “ಕೆನರಾ ವಿದ್ಯಾ ಜ್ಯೋತಿ” ಯೋಜನೆಯನ್ನು ಪ್ರಾರಂಭಿಸಲಾಗಿದೆ.ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಸ್ವಾವಲಂಬಿಗಳಾಗಿ ಬದುಕಬೇಕು.ಅದಕ್ಕಾಗಿ ವಿದ್ಯಾರ್ಥಿಯರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಿ ಎಂದು ತಿಳಿಸಿದರು.

ಸರಕಾರಿ ಕನ್ಯಾ ಪ್ರೌಢಶಾಲೆಯ ಮುಖ್ಯಗುರು ಪ್ರತಿಭಾ ಪ್ರಿಯದರ್ಶಿನಿ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಜ್ ಏರಿಯಾ ಶಾಲೆಯ ಮುಖ್ಯ ಗುರು ಶಶಿಕಾಂತ್ ನಡಿಗೇರಿ,ರತನ್, ಭೀಮಣ್ಣ, ಶಿಕ್ಷಕರಾದ ಸುಶೀಲ, ಚಂದ್ರಕಲಾ ಸುಜಾತಾ, ರಜಿಯಾ ಪರ್ವೀನ್,ಶ್ರೀದೇವಿ, ನಿತ್ಯಾನಂದ, ಮಲ್ಲಪ್ಪ , ಎಸ್‍ಡಿಎಂಸಿ ಅಧ್ಯಕ್ಷರು ಹಾಗೂ ಶಾಲಾ ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here