ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಸೂಕ್ತ ಮಾರ್ಗದರ್ಶನ ಅವಶ್ಯ

0
154

ಶಹಾಬಾದ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಸೂಕ್ತ ಮಾರ್ಗದರ್ಶನ, ವೇದಿಕೆ ಸಿಕ್ಕಾಗ ಮಾತ್ರ ಪ್ರಕಾಶಮಾನಕ್ಕೆ ಬರುತ್ತವೆ ಎಂದು ಶಿಕ್ಷಕ ಬನ್ನಪ್ಪ ಸೈದಾಪೂರ ಹೇಳಿದರು.

ಅವರು ನಗರದ ಎಸ್.ಜಿ.ವರ್ಮಾ ಹಿಂದಿ ಶಾಲೆಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಭಾರತ ವಿಕಾಸ ಸಂಗಮ, ವಿಕಾಸ ಕೇಂದ್ರ ಕಲಬುರಗಿ ಹಾಗೂ 7ನೇ ಭಾರತೀಯ ಸಂಸ್ಕøತಿ ಉತ್ಸವ ಮತ್ತು ಕೊತ್ತಲ ಸ್ವರ್ಣ ಜಯಂತಿ ವತಿಯಿಂದ ಆಯೋಜಿಸಲಾದ ತಾಲೂಕಾ ಮಟ್ಟದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಮಕ್ಕಳ ಮಾನಸಿಕ ಬೆಳವಣಿಗೆಗೆ ಪಠ್ಯ-ಪಠ್ಯೇತರ ಚಟುವಟಿಕೆಗಳು ಬಹುಮುಖ್ಯ ಕಾರಣ. ಮಕ್ಕಳ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ಶಿಕ್ಷಕರ ಪಾತ್ರವೂ ಅನನ್ಯ.ಪ್ರತಿಯೊಬ್ಬರಲ್ಲಿ ತನ್ನದೇ ಆದ ಪ್ರತಿಭೆ ಇರುತ್ತದೆ.ಅದನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ಅನುಕೂಲವಾಗಲಿದೆ.

ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿಯನ್ನು ಕಿತ್ತೊಗೆಯಲು ಈ ಭಾಗದ ವಿದ್ಯಾರ್ಥಿಗಳಿಗೆ, ಯುವಕರಿಗೆ , ಮಹಿಳೆಯರಿಗೆ, ರೈತರಿಗೆ ನುರಿತ ತಜ್ಞರಿಂದ ಎಲ್ಲಾ ರಿತೀಯ ಜ್ಞಾನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.ಇದಕ್ಕೆ ರೂವಾರಿಗಳಾದ ಬಸವರಾಜ ಪಾಟೀಲ ಸೇಡಂ ಅವರು ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ.ಈ ಭಾಗದ ಮಕ್ಕಳಿಗೆ ಶಿಕ್ಷಣ ಅರಿವು ನೀಡಿದರೇ ಈ ಭಾಗ ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂಬ ದೃಷ್ಠಿಕೋನದಿಂದ ಒಳ್ಳೆಯ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಸಂಸ್ಕøತಿ, ಸಂಸ್ಕಾರ, ಅಭಿನಯ, ಅನುಭವ, ನೃತ್ಯ , ಭಾμÉ ಎಲ್ಲಾ ಪ್ರಕಾರಗಳಲ್ಲಿಯೂ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಸಾಧ್ಯ. ಈ ಮೂಲಕ ಭವಿಷ್ಯತ್ತಿನಲ್ಲಿ ಅಪ್ರತಿಮ ಸಾಧಕರಾಗಿ ಎಂದು ಹೇಳಿದರು.

ಕಾರ್ಯಕ್ರಮವನ್ನು ರಾಷ್ಟ್ರಭಾಷಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ದಿಲೀಪ್ ಯಲಶೆಟ್ಟಿ ಉದ್ಘಾಟಿಸಿದರು. ವಿಕಾಸ ಅಕಾಡೆಮಿ ಸಂಚಾಲಕರಾದ ಕನಕಪ್ಪ ದಂಡಗುಲಕರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಚಿದಾನಂದ ಕುಡ್ಡನ್, ಶಿಕ್ಷಕರಾದ ಹೆಚ್.ವಾಯ್ ರಡ್ಡೇರ್, ಸುಭಾಷ ಜಾಪೂರ, ಮೋಹನ್ ಘಂಟ್ಲಿ , ವಿಕಾಸ ಅಕಾಡೆಮಿಯ ಪ್ರಮುಖರಾದ ಶರಣು ವಸ್ತ್ರದ್, ಮಲ್ಲಿಕಾರ್ಜುನ ಇಟಗಿ, ರಮೇಶ ಸಾಹು, ಅಣ್ಣಾರಾವ ಬಾಳಿ,ಸುನೀಲ ಗುಡೂರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here