ಛಾಯಾಚಿತ್ರ ಪ್ರದರ್ಶನ ಭಾಷೆಯಷ್ಟೇ ಪ್ರಬಲ ಮಾಧ್ಯಮ

0
52

ಕಲಬುರಗಿ : ಒಂದು ಛಾಯಾಚಿತ್ರ ನೂರು ಪದಗಳಲ್ಲಿ ಹೇಳಬಹುದಾದೊಂದನ್ನು ಪರಿಣಾಮಕಾರಿ ಹೇಳುತ್ತದೆ, ಅದು ಭಾಷೆಯಷ್ಟೇ ಪ್ರಬಲ ಮಾಧ್ಯಮ ಎಂದು ಹಿರಿಯ ಸಾಹಿತಿ ಡಾ ಸ್ವಾಮಿರಾವ ಕುಲಕರ್ಣಿ ಹೇಳಿದರು.

ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ ಗ್ಯಾಲರಿಯಲ್ಲಿ 185ನೇ ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ಏರ್ಪಡಿದ್ದ ನಾರಾಯಣ ಎಂ. ಜೋಶಿ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನದಲ್ಲಿ ಗಮನ ಸೆಳೆದ ಜೋಶಿ ಅವರ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನಗಳನ್ನು ಅವರು ಪ್ರಶಂಶಿಸಿದರು.

Contact Your\'s Advertisement; 9902492681

ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ ಎಂ.ಠಾಕೂರ ಛಾಯಾಚಿತ್ರಗಳ ಉಗಮ ವಿಕಾಸ ಸಮಕಾಲೀನ ಬೆಳವಣಿಗೆ ಪತ್ರಿಕೋಧ್ಯಮದಲ್ಲಿ ಅವರ ಮಹತ್ವ ವಿವರಿಸಿದರು. ವೇದಿಕೆ ಮೇಲೆ ಸುದ್ದಿಕಾಲ ಸಂಪಾದಕ ವಾಸುದೇವರಾವ ದೇಸಾಯಿ, ಛಾಯಾಚಿತ್ರಗ್ರಾಹಕ ನಾರಾಯಣÀ ಎಂ. ಜೋಶಿ ವೇದಿಕೆ ಮೇಲೆ ಇದ್ದರು.

ಸಿ.ಎಸ್. ಮಾಲಿಪಾಟೀಲ ಸ್ವಾಗತಿಸಿದರು. ರಂಜೀಷಾ ಕುಲಕರ್ಣಿ ಪ್ರಾರ್ಥಿಸಿ ನಿರೂಪಿಸಿದರು. ವೀರಶೆಟ್ಟಿ ಎಂ.ಪಾಟೀಲ ಬೀದರ ನಗರದ ಗುಲಾಂ ಮುÀಂತಕಾ ಫೋಟೋಗ್ರಾಫರ್ ಅವರ ಜೀವನಚರಿತ್ರೆ ಕುರಿತಾದ ಕವನ ವಿವರಿಸಿದರು.

ಮೋಹನ ಸೀತನೂರ, ರಮೇಶ ಜೋಶಿ ನಾರಾಯಣ ಕುಲಕರ್ಣಿ, ದೌಲತರಾಯ ದೇಸಾಯಿ, ಡಾ. ಸದಾಶಿವ ಜಿಡಗೇಕರ, ಜೀತೇಂದ್ರ ಕೊಥಳಿಕರ, ಎಂ. ಸಂಜೀವ, ವಿಠಲಕಟ್ಟಿ, ದೇಸಾಯಿ ಪರಿವಾರ, ಸಿದ್ದು ಮರಗೋಳ, ಶರಣು ಪಟ್ಟಣಶೆಟ್ಟಿ ಕೆ ಎಂ ಲೋಕಯ್ಯಾ, ಡಾ ಹಣಮಂತ ಮಂತಟ್ಟಿ, ಶೇಷರಾವ ಬಿರಾದಾರ, ಲಕ್ಷ್ಮೀಕಾಂತ ಮನೋಕರ ಮುಂತಾದವರು ಇದ್ದರು ಪ್ರದರ್ಶನ 19 ಆಗಸ್ಟ್ ರಿಂದ 21 ವರೆಗೆ ಮುಂಜಾನೆ 11 ರಿಂದ ಸಂಜೆ 6 ಗಂಟೆಯ ವರüಗೆ ತೆರೆದಿರುತ್ತದೆ. ಒಟ್ಟು 62 ಛಾಯಾಚಿತ್ರಗಳು ಪ್ರದರ್ಶಿಸಿದ್ದಾರೆ ಕಲ್ಯಾಣ ಕರ್ನಾಟಕದ ಸ್ಮಾರಕಗಳ ಛಾಯಾಚಿತ್ರಗಳನ್ನು ಆಸಕ್ತರು ಶಾಲಾ ಕಾಲೇಜು ವಿದ್ಯಾರ್ಥಿಗಳು ವೀಕ್ಷಿಸಬಹುದು ಎಂದು ನಾರಾಯಣ ಎಂ. ಜೋಶಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here