ಕಲಬುರಗಿ: ಪುರಾಣ ಆಲಿಸುವುದರಿಂದ ಮನುಷ್ಯನಲ್ಲಿ ಭಕ್ತಿ ಭಾವನೆ ಮೂಡುವದಲ್ಲದೆ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಕೋಲಿ ಸಮಾಜದ ಹಿರಿಯ ಮುಖಂಡರಾದ ಶಿವರಾಯ ಕಮಕನೂರ್ ಅವರು ತಿಳಿಸಿದರು.
ಶ್ರಾವಣ ಮಾಸ ನಿಮಿತ್ಯ ಗಂಗಾ ನಗರದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವೆ ಸಮಿತಿ ಹಮ್ಮಿಕೊಂಡಿದ್ದ ಗುಡ್ಡಾಪುರದ ದಾನಮ್ಮ ದೇವಿಯ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗುಡ್ಡಾಪುರ ದಾನಮ್ಮ ದೇವಿ, ಮಾತಾ ಮಾಣಿಕೇಶ್ವರಿ ಅವರ ಚರಿತ್ರೆಯನ್ನು ಪ್ರತಿಯೊಬ್ಬರೂ ಕೇಳಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದಿನನಿತ್ಯ ತಾಯಿಯ ಸ್ಮರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಅಂತಹ ಭಕ್ತರಿಗೆ ಆಯುಷ್ಯ ಆರೋಗ್ಯ ಸಮೃದ್ಧಿ ನೀಡಿ ಹಾರೈಸುವಳು ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಜಗನ್ನಾಥ್ ಮಾಸ್ಟರ್ ಶಿವರಾಜ್ ಕಿರಸಾವಳಗಿ. ಲಕ್ಷ್ಮಣ ಹಾಗರಗುಂಡಗಿ. ಮಹದೇವಿ ಮಸ್ಕಿ. ಸಿದ್ದು ವೈಜಾಪುರ್. ಶ್ರೀಮತಿ ಶಾಮಬಾಯಿ. ಪಿ. ವಿಠ್ಠಾಬಾಯಿ ಯಳಸಂಗಿ ಮುಂತಾದರು ಉಪಸ್ಥಿತರಿದ್ದರು , ಗುಡ್ಡಾಪುರ ಶ್ರೀ ದಾನಮ್ಮ ದೇವಿಯ ಪುರಾಣವನ್ನು ಶ್ರೀ ವೇದಮೂರ್ತಿ ಸಿದ್ದೇಶ್ವರ ಶಾಸ್ತ್ರಿಗಳು ಹಿರೇಮಠ ಸುಂಟನೂರು ನಡೆಸಿಕೊಟ್ಟರು ಬಾಬುರಾವ್ ಕೋಬಾಳ ಸಂಗೀತ ಸೇವೆ ನೀಡಿದರು.
ಅಮೃತ ಎಚ್. ಡಿಗ್ಗಿ ಅವರು ಕಾರ್ಯಕ್ರಮ ನಿರೂಪಿಸಿದರು ಗಂಗಾ ನಗರದ ಬಡಾವಣೆ ಎಲ್ಲಾ ಹಿರಿಯ ಮುಖಂಡರು ಸತ್ಸಂಗ ಸಮಿತಿಯ ಅಧ್ಯಕ್ಷರಾದ ಅನಿಲ್ ಎನ್.ಕೂಡಿ, ಶಾಂತಪ್ಪ ಕೂಡಿ, ವಿಜಯಕುಮಾರ್ ಹದಗಲ್. ರಾಯಪ್ಪ ಹೊನಗುಂಟಿ, ಸಮಿತಿಯ ಎಲ್ಲಾ ಪದಾಧಿಕಾರಿಗಳು, ಮಹಿಳೆಯರು, ಹಿರಿಯರು, ಸಾರ್ವಜನಿಕರು ಭಾಗವಹಿಸಿದ್ದರು.