ವಾಡಿ; ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ

0
62

ವಾಡಿ:ಪಟ್ಟಣದ ಶ್ರೀ ಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ಬುಧವಾರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಪ್ರಜಾಪಿತ  ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದ ವಿಕಾರಾಬಾದ ಕೇಂದ್ರದ ರಾಜಯೋಗಿನಿ ಬ್ರಹ್ಮ ಕುಮಾರಿ ಜಗದೇವಿ ಅವರು ರಕ್ಷಾಬಂಧನದ ಸಂದೇಶ ಸಾರುತ್ತಾ ಮಾತನಾಡಿ, ಪ್ರತಿಯೊಬ್ಬರು ಪ್ರೀತಿ, ಸ್ನೇಹ, ಮಾನವೀಯತೆಯ ಗುಣ ಮೈಗೂಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದರು.

Contact Your\'s Advertisement; 9902492681

ನಾವು ಬರೀ ದೇಹವಲ್ಲ ಆತ್ಮಗಳು, ಪರಮಾತ್ಮನ‌ ಮಕ್ಕಳು‌ ಪರಸ್ಪರರಲ್ಲಿ ಸಹೋದರ ಸಹೋದರಿಯರು ಎಂಭ ಭಾವನೆಯನ್ನು ಮೂಡಿಸುವುದು ರಕ್ಷಾ ಬಂಧನದ ಆಧ್ಯಾತ್ಮಿಕ ರಹಸ್ಯವಾಗಿದೆ.  ಸಹೋದರಿಯರು ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರೆ, ಸಹೋದರ ಸಹೋದರಿಯನ್ನು ಜೀವನಪರ್ಯಂತ ರಕ್ಷಿಸುವ ಭರವಸೆ ನೀಡುತ್ತಾನೆ.  ನಾವು ಇಂದು ಪವಿತ್ರ ಶ್ರಾವಣ ಮಾಸದಲ್ಲಿ ಪರಸ್ಪರ ರಕ್ಷಾ ಬಂಧನಕ್ಕೆ ಒಳಗಾಗುವುರ ಮೂಲಕ ಸಮಾಜದಲ್ಲಿ ಪ್ರೀತಿಯ ಭಾತೃತ್ವ,ಸ್ನೇಹ ಶಾಂತಿ ಮೂಡಿಸಲು ನಾವು ಪ್ರತಿಜ್ಞೆಯೊಂದಿಗೆ ಬದ್ದರಾಗಬೇಕಾಗಿದೆ ಎಂದು ಹೇಳಿದರು.

ಸೆಡಮ್ ಈಶ್ವರಿ ವಿಶ್ವವಿದ್ಯಾಲಯ  ಕೇಂದ್ರದ ಬಿಕೆ ಗಿರಿಜಾ, ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿದರು. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ,ವೀರಶೈವ ಸಮಾಜದ ಅಧ್ಯಕ್ಷ ಶರಣಗೌಡ ಚಾಮನೂರ ಮುಖ್ಯ ಅತಿಥಿಗಳಾಗಿದ್ದರು.

ವಾಡಿ ಕೇಂದ್ರದ ಬಿಕೆ ಸಂತೋಷ, ಬಿಕೆ ಸುಭಾಷ್, ಬಿಕೆ ರಮೇಶ,ಪಟ್ಟಣದ ಪ್ರಮುಖರಾದ ಸಿದ್ದಣ್ಣ ಕಲ್ಲಶೆಟ್ಟಿ, ಭೀಮಶಾ ಜಿರೋಳ್ಳಿ, ಚಂದ್ರಶೇಖರ ಪಾಟೀಲ ಬಣಮಗಿ,ಮಹಾದೇವ, ರಾಜಶೇಖರ ದೊಪದ,ದತ್ತಾತ್ರೇಯ ಗೌಡಗಾಂವ, ಶಿವಶಂಕರ ಕಾಶೆಟ್ಟಿ, ಚಂದ್ರು ಹಾವೇರಿ,ಗುರುಮೂರ್ತಿ ಸ್ವಾಮಿ,ಶಂಕರ ಮಿಣಜಗಿ,ಅರುಣ ಪಾಟೀಲ,ಯಂಕಮ್ಮ ಗೌಡಗಾಂವ, ಪ್ರೇಮಾವತಿ ಕಾಶೆಟ್ಟಿ,ನಿರ್ಮಲ ಇಂಡಿ,ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಬಿಕೆ ಕಲಾವತಿ ನಿರೂಪಿಸಿದರು‌, ಬಿಕೆ ಮಹಾನಂದ ಸ್ವಾಗತಿಸಿದರು, ಬಿಕೆ ಜಯಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here