ಅಂಗವಿಕಲ ಫಲಾನುಭವಿಗಳಿಂದ ಹಿರಿಯ ಅಧಿಕಾರಿಗಳಿಗೆ ಅಭಿನಂದನಾ ಮಹಾಪುರ

0
268

ಕಲಬುರಗಿ: ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಅಂಗವಿಕಲ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ಅಂಗವಿಕಲರಿಗೆ ಲ್ಯಾಪ್‌ಟಾಪ್, ಬ್ಯಾಟರಿ ಚಾಲಿತ ಮೋಟರ್ ಬೈಕ್, ತ್ರೀ ಚಕ್ರ ವಾಹನ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸಾಧನ ಸಲಕರಣೆಗಳು ವಿತರಿಸಿದಕ್ಕೆ ಅಂಗವಿಕಲ ಫಲಾನುಭವಿಗಳು ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಸನ್ಮಾನಿಸಿ ಅಭಿನಂದನೆ ವ್ಯಕ್ತಪಡಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಫೌಜಿಯಾ ತರನ್ನೂಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ಸಾದೀಕ್ ಹುಸೇನ್ ಖಾನ್ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

Contact Your\'s Advertisement; 9902492681

ಆಗಸ್ಟ್ 15ರಂದು ಮತ್ತು 20 ರಂದು ಪಂಚಾಯತ್ ರಾಜ್ಯ ಪೆಲೋಸಿಪ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನೀಡಲಾದ 180, ತ್ರಿಚಕ್ರ ವಾಹನ, ಬ್ಯಾಟ್ರಿ ವಿಲ್ ಚೇರ್, ಅಂದ ವಿಕಲಚೇತನರಿಗೆ ಲ್ಯಾಪ್ ಟಾಪ್, ಹೊಲಿಗೆ ಯಂತ್ರ ಸೇರಿ ಇನ್ನೂ ಅನೇಕ ಸಾಧನ ಸಲಕರಣೆ ವಿತ್ತರಣೆ ಮಾಡಲಾಯಿತು.

ವಿಕಚೇತನರನ್ನು ಮಕ್ಕಳಂತೆ ಕಾಣುವ ಏಕೈಕ ಅಧಿಕಾರಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಸಾದೀಕ್ ಹುಸೇನ್ ಖಾನ್ ಅವರು ಅಂಗವಿಕಲರಿಗೆ ತೋರುವ ಕಾಳಜಿ ಮತ್ತು ಸಹಕಾರಕ್ಕೆ ಸಹಕರಿಸಿದ ಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದನೆ ಸಲ್ಲಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವೇಳೆ ಜೇವರ್ಗಿ VRW ಚಂದ್ರಮಪ್ಪ ಖಾನಗೌಡ್ರು, ಶಿವಾನಂದ ಮಡಿವಾಳ, ಗುರುರಾಜ್ ಹೆರೂರ್, ಪರಮಾನಂದ ಕಂಬಾರ, ಹೈದ್ರಾಲಿ ಕಾಚಾಪುರ, ಮಲ್ಲು ಸಾತ್ಕೇಡ, ಸುಮಿತ್ರಾ ಕೂಡಿ, ದೇವಮ್ಮ ಅಕ್ಕಾ ಗಂಹಾರ, ಶ್ರೀದೇವಿ ಯಡ್ರಾಮಿ, ಶರಣು ಹಿಪ್ಪರಗಿ ಸೇರಿದಂತೆ ಚಿತ್ತಾಪುರ, ಅಫಜಲಪುರ, ಕಲಬುರಗಿಯ VRW ಕಾರ್ಯಕರ್ತರು ಹಾಗೂ ವಿಕಲಚೇತನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here