ಕಲಬುರಗಿ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು & ಪ್ರಾದೇಶಿ ಕೇಂದ್ರ ವತಿಯಿಂದ ವಿವಿಧ ತಾಲೂಕಿನ ಗ್ರಾಮ ಪಂಚಾಯತಿಯ ಮಟ್ಟದ ಸ್ಥಳೀಯ ಮಹಿಳಾ ಒಕ್ಕೂಟದ ಸದಸ್ಯರಿಗೆ ಘನ-ತಾಜ್ಯ ನಿರ್ವಹಣೆ ಕುರಿತು 3 ದಿನಗಳ ವಸತಿ ಸಹಿತ ಸುಸ್ಥಿರ ನಡೆ ಸ್ವಚ್ಛತೆ ಕಡೆಗೆ ಎನ್ನುವ ಪುನಶ್ಚೇತನ ತರಬೇತಿಯನ್ನು ಆಯೋಜಿಸಲಾಗಿತ್ತು ಮೊದಲಿಗೆ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕರಾದ ಧನರಾಜ್ ಬೊರಾಳೆ ಹಾಗೂ ಬೋಧಕಾರದ ಡಾ.ರಾಜು ಕಂಬಳಿಮಠ, ಸಂತೋಷ ಎನ್., ಶಿವಪುತ್ರಪ್ಪ ಗೊಬ್ಬರು, ರವರು ತರಬೇತಿಯ ಗುರಿ-ಉದ್ದೇಶ ಕುರಿತು ಮಾತಾನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸತೀಶಕುಮಾರ ಸುಲೇಪೇಟ, ಪುಷ್ಪಾ ಬೆಳಮಗಿ, ಸಂಗೀತಾ ರಡ್ಡಿ, ಹಾಗೂ ಸಂಗೀತಾ ಬಡಿಗೇರ್ ರವರು ಆಗಮಿಸಿ ಶಿಬಿರಾರ್ಥಿಗಳನ್ನು ಉದ್ದೇಶಿ ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಅಶ್ವೀನಿ ಸ್ವಾಗತಿಸಿದರು, ಅರ್ಚನ ಪಾಟೀಲ್ ನಿರೂಪಿಸಿದರು,