ಚಿತ್ತಾಪುರ ತಾಲೂಕಿನ ಕರದಾಳ ಗ್ರಾಪಂ ವ್ಯಾಪ್ತಿಯ ಹಣ್ಣಿಕೇರಾ ಗ್ರಾಮದಲ್ಲಿ 15ನೇ ಹಣಕಾಸಿನಲ್ಲಿ ಚರಂಡಿ ಸ್ವಚ್ಛತೆ ಕಾಮಗಾರಿಗೆ ಬಿಡುಗಡೆಯಾದ ಒಂದು ಲಕ್ಷ ರೂ.ಯನ್ನು ಚರಂಡಿ ಸ್ವಚ್ಛತೆ ಮಾಡದೇ ಹಣವನ್ನು ಎತ್ತಿದ್ದಾರೆ ಎಂದು ಗ್ರಾಮದ ಮುಖಂಡರಾದ ಕೋರಿಸಿದ್ಧ ಗಂಜಿ, ಬಸವರಾಜ ಹೂಗಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ. ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೇ ಇರುವುದರಿಂದ ಅನೇಕ ಜನರು ಕಾಲರಾ, ಡೇಂಗ್ಯೂಗಳಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ ಗ್ರಾಪಂ ಪಿಡಿಓ ಅವರು ಮಾತ್ರ ಗ್ರಾಮಕ್ಕೆ ಬಿಡುಗಡೆಯಾದ 15ನೇ ಹಣಕಾಸಿನ ಅನುದಾನದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಹಳೆಯ ಜಿಪಿಎಸ್ ಫೋಟೋಗಳನ್ನು ಹಚ್ಚಿ ಹಣವನ್ನು ಡ್ರಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೂಡಲೇ ಸಂಬಂಧ ಪಟ್ಟ ಮೇಲಾಧಿಕಾರಿಗಳು ಪಿಡಿಒ ಅವರ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರು ಇದ್ದರು.