ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ

0
38

ಕಲಬುರಗಿ: ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ್ ಅವರು ನಾರಾಯಣ ಎಂ. ಜೋಶಿ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು

ಕಲಬುರಗಿ ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ ಗ್ಯಾಲರಿಯಲ್ಲಿ 185ನೇ ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ಏರ್ಪಡಿದ್ದ ನಾರಾಯಣ ಎಂ. ಜೋಶಿ ಅವರ

Contact Your\'s Advertisement; 9902492681

ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನದಲ್ಲಿ ಕಲಬುರಗಿ ಜಿಲ್ಲೆಯ ಕೋಟೆ-ಕೊತ್ತಲ, ಆಧ್ಯಾತ್ಮಿಕ ಸಾಂಸ್ಕೃತಿಕ ಪರಂಪರೆಗೆ ಪ್ರತಿಕವಾಗಿರುವ ಗುಡಿ-ಗುಂಡಾರ ದೇಗುಲ ದೇವಸ್ಥಾನಗಳು, ಸೂಫಿ, ದಾಸರ, ಶರಣರ, ಸಂತರ ಜೈನ ಬಸದಿ, ಗುರುದ್ವಾರ. ಬೌದ್ಧ ವಿಹಾರ, ಶರಣರ ಅನುಭವ ಮಂಟಪ್ಪ, ಆಧ್ಯಾತ್ಮಿಕ ಪರಂಪರೆಯ ತಾಣಗಳ ಛಾಯಾಚಿತ್ರ ವೀಕ್ಷಣೆ ಮೂಲಕ ಪ್ರತಿಯೊಬ್ಬರ ಮನೋವಿಕಾಸಕ್ಕೆ ಹಾಗೂ ಸ್ಥಳಿಯ ಸ್ಥಳಗಳ ಅರಿವು ಮೂಡಿಸಲು ಸಾಧ್ಯವೆಂದು ಮಹಾನಗರ ಪಾಲಿಕೆಯ ಆಯುಕ್ತರು ಭುವನೇಶ ಪಾಟೀಲ್ ಅವರು ಹೇಳಿದರು.

ನಾರಾಯಣ ಎಂ. ಜೋಶಿ ಏಕವ್ಯಕ್ತಿ ಛಾಯಾಚಿತ್ರಗಳ ಪ್ರದರ್ಶನ-2024ಕ್ಕೆ ಮಹಾನಗರ ಪಾಲಿಕೆಯ ಆಯುಕ್ತರು ಭುವನೇಶ ಪಾಟೀಲ್ ಅವರು ಮಂಗಳವಾರ ಭೇಟಿಕೊಟ್ಟು, ಛಾಯಾಚಿತ್ರ ವೀಕ್ಷಿಸಿ, ಸ್ಮಾರಕಗಳ ಪ್ರದರ್ಶನ ಕುರಿತು ಶ್ಲಾಘನೀಯ ಕಾರ್ಯವೆಂದು ಅವರು ಹೇಳಿದರು. ಡಾ|| ಬಿ. ಗುಲಶೆಟ್ಟಿ, ಛಾಯಾಚಿತ್ರಗಾರ ರಾಘವೇಂದ್ರ ಬುರ್ಲಿ, ಬಿ.ಎಮ್.ರಾವೂರ ಇತರರು ಉಪಸ್ಥಿತರಿದ್ದರು.

ಕಲಬುರಗಿ ನಗರದ ಸರಕಾರಿ ಶಿಕ್ಷಿಯರ ತರಬೇತಿ ಕೇಂದ್ರ ಟಿ.ಟ.ಐ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳು ಅಂದಾನಿ ಆರ್ಟ ಗ್ಯಾಲರಿಯಲ್ಲಿ ವಿಶ್ವ ಛಾಯಾಚಿತ್ರ ದಿನಾಚರಣೆ ನಿಮಿತ್ಯವಾಗಿ ನಾರಾಯಣ ಎಂ. ಜೋಶಿ ಏಕವ್ಯಕ್ತಿ ಛಾಯಾಚಿತ್ರಗಳ ಪ್ರದರ್ಶನ-2024ಕ್ಕೆ ಅವರು ಭೇಟಿಕೊಟ್ಟು, ಛಾಯಾಚಿತ್ರ ವೀಕ್ಷಿಸಿ, ಸ್ಮಾರಕಗಳ ಪ್ರದರ್ಶನ ವಿಕ್ಷಿಸಿ. ನಮ್ಮಗೇಷ್ಟು ಗೋತ್ತು ನಮ್ಮ ಕಲಬುರಗಿ ಜಿಲ್ಲೆಯ ಕೋಟೆ-ಕೊತ್ತಲ, ಸೂಫಿ, ಡಾಸರ, ಶರಣರ, ಸಂತರ ಜೈನ ಬಸದಿ, ಗುರುದ್ವಾರ. ಬೌದ್ಧ ವಿಹಾರ, ಶರಣರ ಅನುಭವ ಮಂಟಪ್ಪ, ವಸ್ತು ಸಂಗ್ರಹಾಲಯ, ವಿವಿದ ಮುಖ್ಯ ರಸ್ತೆ, ಛಾಯಾಚಿತ್ರ ವೀಕ್ಷಿಸಿದರು ನಂತರ ನಾರಾಯಣ ಎಮ್. ಜೋಶಿ ಅವರೊಂದಿಗೆ ಪ್ರಶ್ನೆನೋತರ ಕೇಳಿ ಮಾಹಿತಿ ಪಡೆದರು.

ಜಿಲ್ಲೆಯ ಎಲ್ಲಾ ಸ್ಮಾರಕಗಳ ಸಂರಕ್ಷಣೆ, ಸ್ವಚ್ಛತೆ ಕಾಪಾಡುವದು ನಮ್ಮ ಜವಾಬ್ದಾರಿ, ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆಗಳ ಓದು ಜೊತೆಗೆ ಛಾಯಾಚಿತ್ರಗಳು ನೋಡುವದೊಂದು ಕಲೆ, ಈ ಮೂಲಕ ಪಗತಿ-ಅಭಿವೃದ್ಧಿ ಪೂರಕವಾಗಿ ಆಲೋಚನೆಗಳು ಅಳವಡಿಸಿಕೊಳ್ಳಬೇಕೆಂದು ಸರಕಾರಿ ಶಿಕ್ಷಿಯರ ತರಬೇತಿ ಕೇಂದ್ರ ಟಿ.ಟ.ಐ ನ ಉಪನ್ಯಾಸಕ ನೂಸತ ಮೈನೂದಿನ, ಗುರುಶಾಂತಯ್ಯ ಹೀರೆಮಠ, ಮಲ್ಕಮ್ಮ ರಾಣೆ, ಇಬ್ರಾಹಿಮ್ ಅವರು ಮಾತನಾಡಿ ಏಕವ್ಯಕ್ತಿ ಛಾಯಾಚಿತ್ರಗಳ ಪ್ರದರ್ಶನ-2024ಕ್ಕೆ ಕುರಿತು ಮಾತನಾಡಿ, ಉಪನ್ಯಾಸಕರು ಕರೆ ನೀಡಿದರು ಜೋಶಿ ಅವರ ಕುರಿತು ಶ್ಲಾಘನೀಯ ಕಾರ್ಯವೆಂದು ಅವರು ಹೇಳಿದರು. ಹಿರಿಯ ಪತ್ರಕರ್ತ ವಾಸುದೇವರಾವ ದೇಸಾಯಿ ಅವರು ಮಾತನಾಡಿದರು.

ಛಾಯಾಚಿತ್ರಗಾರ ರಾಘವೇಂದ್ರ ಬುರ್ಲಿ ಅವರು ನಾರಾಯಣ ಎಂ ಜೋಶಿ ಅವರಿಗೆ ಸನ್ಮಾನಿಸಿದರು. ಇತರರು ಉಪಸ್ಥಿತರಿದರು. ಪ್ರಜಾವಾಣಿ ದಿನ ಪತ್ರಿಕೆ ಛಾಯಾಚಿತಗಾರ ಆಜಾದ ತಾಜೋದ್ದಿನ್ ಅವರಿಗೆ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here