ಸರಕಾರಿ ಸೌಲಭ್ಯ ನೀಡಲು ಅಧಿಕಾರಿಗಳು ತಾರತಮ್ಯ: ಚಿಂಚೋಳಿ ಶಾಸಕರಿಗೆ ಹಕ್ಕೊತ್ತಾಯ

0
108

ಚಿಂಚೋಳಿ: ತಾಲೂಕ ಚಿಂಚೋಳಿಯ ಪ್ರತಿಯೊಂದು ಗ್ರಾಮಗಳಲ್ಲಿರುವ ಮತ್ತು ಪುರಸಭೆ ವ್ಯಾಪ್ತಿಯ ಪ್ರತಿಯೊಂದು ವಾರ್ಡನ ಪರಡಿ ಮಹಿಳೆಯರಿಗೆ, ಆರಾಧಕರಿಗೆ,  ಬೂಥೆಯರಿಗೆ, ಮಂಗಳಮುಖಿಯರಿಗೆ, ದೇವದಾಸಿಯರಿಗೆ ವಿವಿಧ ವಸತಿ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಒತ್ತಾಯಿಸಿ ಹೋರಾಟಗಾರ ಮಾರುತಿ ಗಂಜಗಿರಿ ನೇತೃತ್ವದಲ್ಲಿ ಕ್ಷೇತ್ರದ ಶಾಸಕರಿಗೆ ಆಗ್ರಹಿಸಿದರು.

ಈ ಸಮುದಾಯಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹಾಗೂ ಮುಖ್ಯಾಧಿಕಾರಿಗಳ ನಡೆ ಮತ್ತು ಕಂದಾಯ ಇಲಾಖೆಯಿಂದ ವೃದ್ಧಾಪ್ಯ ಪುರುಷ ಮತ್ತು ಪರಡಿ ಮಹಿಳೆಯರಿಗೆ ದೊರೆಯುವ ಸೌಲಭ್ಯಗಳ ವರದಿ ಮಾಡುವಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನೀರಿಕ್ಷಕರು ಮದ್ಯವರ್ತಿಗಳ ಮಾತು ಕೇಳಿ ಪರಡಿ ಮಹಿಳೆಯರಿಗೆ ತಾರತಮ್ಯ ಮಾಡುತ್ತಿರುವ ತಾಲೂಕಾಡಳಿತಕ್ಕೆ ತಾವುಗಳು ಸೂಕ್ತ ನಿರ್ದೇಶನ ನೀಡುವಂತೆ ಶಾಸಕ ಡಾ. ಅವಿನಾಶ ಜಾಧವ್ ಒತ್ತಾಯಿಸಲಾಯಿತು.

Contact Your\'s Advertisement; 9902492681

ಈ ಕುರಿತು ಕೂಡಲೆ ಅಧಿಕಾರಿಗಳಿಗೆ ಈ ರೀತಿ ಮಾಡದಂತೆ  ತಾಕೀತು ಮಾಡಿ ಪರಡಿ ಮಹಿಳೆಯರಿಗೆ ಬೂಥೆಯರಿಗೆ ಆರಾಧಕರಿಗೆ ಮಂಗಳಮುಖಿಯರಿಗೆ ದೇವದಾಸಿ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನೀಡುವಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ ನಿವೃತ್ತ ಮುಖ್ಯ ಗುರುಗಳಾದ ಸಿರಾಜ್ಜೋದ್ದಿನ್ ಪಟೇಲ ಸಾಗರ ಹೊಸಳ್ಳಿ ಮೋಹನ ಐನಾಪುರ ದ್ರೌಪತಿ ಚಿಮ್ಮನಚೋಡ  ಮರೆಮ್ಮಾ ಕಲ್ಲಮ್ಮಾ ಪ್ರಭಾವತಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here