ಪಲ್ಲಕ್ಕಿಯಲ್ಲಿ ಶಿವನ ಬೆಳ್ಳಿ ಮೂರ್ತಿ ಮೆರವಣಿಗೆ

0
54

ವಾಡಿ: ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಮಾಜ ಹಾಗೂ ದೇವಸ್ಥಾನ ಸಮಿತಿ ವತಿಯಿಂದ ಶಿವನ ಬೆಳ್ಳಿ ಮೂರ್ತಿ ಪ್ರತಿಷ್ಟಾಪಿಸಲಾಯಿತು.

ಶಿವನ ಪಲ್ಲಕ್ಕಿ ಮೆರವಣಿಗೆ ಬುಧವಾರ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ನಡೆಯಿತು. ಇದಕ್ಕೂ ಮೊದಲು ಅಕ್ಕಲಕೋಟದಿಂದ ತರಲಾದ ಐದು ಕೆಜಿ ತೂಕದ ಅತ್ಯಾಕರ್ಷಕ ಶಿವನ ಬೆಳ್ಳಿ ಮೂರ್ತಿಯನ್ನು ಚಾಮನೂರ ಭೀಮಾ ನದಿಯಲ್ಲಿ ಗಂಗಾಸ್ನಾನಗೈದು ಭಕ್ತರು ವಿಶೇಷ ಪೂಜೆ ನೆರವೇರಿಸಿದರು.

Contact Your\'s Advertisement; 9902492681

ನಂತರ ಪಟ್ಟಣದ ಚೌಡೇಶ್ವರ ವೃತ್ತದಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವರೆಗೆ ಪಲ್ಲಕ್ಕಿ ಉತ್ಸವ ಹಾಗೂ 108 ಜನ ಮುತ್ತೈದೆಯರಿಂದ ಕುಂಬ ಮೆರವಣಿಗೆ ಸಂಭ್ರಮ ಸಡಗರದಿಂದ ನಡೆಯಿತು. ಪುರವಂತರು ಮೆರವಣಿಗೆಯಲ್ಲಿ ಆರ್ಭಟದ ವೀರಗಾಸೆ ನೃತ್ಯ ಪ್ರದರ್ಶನ ನೀಡಿದರು.

ಶಸ್ತ್ರ ಧಾರಣೆ ಮಾಡಿ ಗಮನ ಸೆಳೆದರು. ದೇವಸ್ಥಾನದಲ್ಲಿ ಪುರೋಹಿತರಿಂದ ನೂತನ ಮೂರ್ತಿಗೆ ರುದ್ರಾಭಿμÉೀಕ ನಡೆಸಲಾಯಿತು ರಾವೂರಿನ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನೂರಾರು ಜನ ಮುತ್ತೈದೆಯರಿಗೆ ಉಡಿ ತುಂಬಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಕಾರ್ಯದರ್ಶಿ ಬಸವರಾಜ ಕೀರಣಗಿ, ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಮುಖಂಡರಾದ ಸಿದ್ದಣ್ಣ ಕಲಶೆಟ್ಟಿ, ಶಂಕ್ರಯ್ಯಸ್ವಾಮಿ ಮದ್ರಿ, ವೀರಣ್ಣ ಯಾರಿ, ಅಣ್ಣಾರಾವ ಪಸಾರೆ, ಸದಾಶಿವ ಕಟ್ಟಿಮನಿ, ಸಿದ್ದಯ್ಯ ಶಾಸ್ತ್ರೀ ನಂದೂರಮಠ, ಪರುತಪ್ಪ ಕರದಳ್ಳಿ, ಚಂದ್ರಶೇಖರ ಹಾವೇರಿ, ಕಾಶೀನಾಥ ಶೆಟಗಾರ, ಅರುಣಕುಮಾರ ಪಾಟೀಲ, ರಮೇಶ ಕಾರಬಾರಿ, ಈರಣ್ಣಗೌಡ, ಚೆನ್ನಯ್ಯಸ್ವಾಮಿ, ಕಿಶನ ಜಾಧವ ಸೇರಿದಂತೆ ನೂರಾರು ಜನ ಮಹಿಳೆಯರು ಪಾಲ್ಗೊಂಡಿದ್ದರು.

“ನಂಬುವವರಿಗೆ ಕಂಬದಲ್ಲೂ ದೇವರು ಕಾಣಿಸುತ್ತಾನೆ. ನಂಬದವರಿಗೆ ದೇವರು ಕಂಬದಂತೆ ಕಾಣುತ್ತಾನೆ. ನಂಬಿಕೆಯೊಂದೆ ಎಲ್ಲದಕ್ಕೂ ಕಾರಣವಾಗಿದೆ. ಆತ್ಮಶುದ್ಧಿಯಿಂದ ಧ್ಯಾನಿಸಿದರೆ ದೇವರು ಪ್ರತ್ಯಕ್ಷನಾಗುತ್ತಾನೆ. ಶಿವನ ಬೆಳ್ಳಿ ಮೂರ್ತಿ ಪ್ರಷ್ಠಾಪನೆಯಿಂದ ಭಕ್ತರಲ್ಲಿ ನಕರಾತ್ಮಕ ಭಾವನೆಗಳು ಕೊನೆಗಾಣಲಿವೆ. ಮೋಬಾಯಿಲ್ ಹುಚ್ಚಾಟದ ಈ ವ್ಯವಸ್ಥೆಯಲ್ಲಿ ಪುಸ್ತಕ ಓದುವ ಹವ್ಯಾಸ ಕ್ಷಿಣಿಸುತ್ತಿದೆ. ಸಾಮಾನ್ಯ ಜ್ಞಾನ ಮಸ್ತಕವನ್ನು ಸೇರಲು ಪುಸ್ತಕ ಅಧ್ಯಯನ ಅತ್ಯಗತ್ಯ. ದೇವರ ಪೂಜೆ ಮನಶಾಂತಿ ಹಾಗೂ ಆತ್ಮಬಲಕ್ಕಾಗಿ ಮಾಡಿರಿ. ಜ್ಞಾನ ಸಂಪತ್ತು ಸಂಪಾದಿಸಲು ಸಾಹಿತ್ಯ ಕೃತಿಗಳತ್ತ ಕಣ್ಣು ಹಾಯಿಸಿರಿ.” -ಶ್ರೀಸಿದ್ಧಲಿಂಗ ಸ್ವಾಮೀಜಿ. ಪೀಠಾಧಿಪತಿಗಳು, ಶ್ರೀಸಿದ್ಧಲಿಂಗೇಶ್ವರ ಸಂಸ್ಥಾನ ಮಠ ರಾವೂರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here