ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಗುರು ಬಂಡಿ ಆಗ್ರಹ

0
68

ಕಲಬುರಗಿ: ಇತ್ತೀಚಿಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮ ಮಾನ್ವಿ ಖಾಸಗಿ ಲೋಯಲ್ ಶಾಲೆಯ ಬೀಗರ ಅಪಘಾತಕ್ಕೆ ಇಡಾಗಿದ್ದು ತುಂಬಾ ದುಃಖಕರ ವಿಷಯವಾಗಿದೆ ಈ ಘಟನೆಗೆ ಖಾಸಗಿ ಶಾಲೆ ಆಡಳಿತ ಮಂಡಳಿ ಮೂಲ ಕಾರಣವಾಗಿದೆ ಎಂದು ಕರ್ನಾಟಕ ಸಂಘಟನೆಯ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರು ಬಂಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಯ ವಾಹನಗಳ ಚಾಲಕರಿಗೆ ಶಾಲೆಯ ಆಡಳಿತ ಮಂಡಳಿ ಅಂದರೆ ಕಡಿಮೆ ಸಮಯದಲ್ಲಿ ನಗರದ ಎಷ್ಟು ಕಡೆಗಳಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕೆಂದು ಮಂಡಳಿ ಒತ್ತಾಯಿಸುತ್ತದೆ ಕಡಿಮೆ ಸಮಯದಲ್ಲಿ ಚಾಲಕನು ಟಾರ್ಗೆಟನ್ನು ಮುಗಿಸಬೇಕು ಅನ್ನೋ ಕಾರಣಕ್ಕೆ ಅತಿಯಾಗಿ ಸ್ಪೀಡ್ ಓಡಿಸಿ ಈ ರೀತಿ ದುರ್ಘಟನೆಗೆ ಕಾರಣವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Contact Your\'s Advertisement; 9902492681

ಇದಕ್ಕೆ ಕಡಿವಾಣ ಹಾಕಬೇಕು ಮತ್ತು ಬಸ್ಸುಗಳಲ್ಲಿ ವಿದ್ಯಾರ್ಥಿಗಳು ಸೀಟ್ ಗಳಿಗಿಂತ ಜಾಸ್ತಿ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುತ್ತಾರೆ ಹಾಗೂ ಶಾಲೆಯ ವಾಹನಗಳಿಗೆ 50 ಸ್ಪೀಡ್ ಗಳಿಗೆ ಕಡಿವಾಣ ಹಾಕಬೇಕು ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ನಗರದ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಬೇಕೆಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here