ಸುರಪುರ: ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಯುವತಿ ಅತ್ಯಚಾರ ಕೊಲೆ ಖಂಡಿಸಿ ನಗರದಲ್ಲಿ ಅಖಿಲ ಕರ್ನಾಟಕ ಕೋಲಿ ಕಬ್ಬಲಿಗ ಅಂಬಿಗ ಭೋಯಿ ಬೆಸ್ತ ಬುಡಕಟ್ಟು ಹೋರಾಟ ಸಂಘ ದಿಂದ ಪ್ರತಿಭಟನೆ ನಡೆಸಲಾಗಿದೆ.ನಗರದ ಅಂಬಿಗರ ಚೌಡಯ್ಯ ವೃತ್ತ ದಿಂದ ತಹಸಿಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆವರಣಿಗೆ ನಡೆಸಿ ಘಟನೆ ಖಂಡಿಸಿ ಘೋಷಣೆಗಳನ್ನು ಕೂಗಿದರು.
ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅನೇಕ ಮುಖಂಡರು ಮಾತನಾಡಿ,ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಟೋಕ್ರಿ ಕೋಳಿ ಸಮಾಜದ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಕಾಮುಕರಿಗೆ ಗಲ್ಲು ಶಿಕ್ಷೆ ಅಥವಾ ಎನ್‍ಕೌಂಟರ್ ಮಾಡಬೇಕು.ಯುವತಿ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು.ಯುವತಿ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗೆ ಬರೆದ ಮನವಿ ತಹಸಿಲ್ದಾರ್ ಕಚೇರಿ ಸಿರಸ್ತೆದಾರ ಗುರುಬಸಪ್ಪ ಪಾಟೀಲ್ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ದೇವಿಂದ್ರಪ್ಪಗೌಡ ಬಿ.ಮಾಲಿ ಪಾಟೀಲ್,ಉಪಾಧ್ಯಕ್ಷ ವೆಂಕಟರಡ್ಡಿ ಭೋವಿಗಲ್ಲಿ,ಗೌರವಾಧ್ಯಕ್ಷ ಪಾರಪ್ಪ ಗುತ್ತೇದಾರ,ಸಂತೋಷ ಬಿ.ಬಾಗಲಿ,ಹಣಮಂತ ಯಕ್ತಾಪುರ,ಮಲ್ಲು ವಿಷ್ಣು ಸೇನಾ,ಮಾನಪ್ಪ ಸೂಗುರ,ಯಂಕಣ್ಣ ಕಟ್ಟಿಮನಿ,ಮರೆಪ್ಪ ದಾಯಿ,ಶಿವಪ್ಪ ಕಟ್ಟಿಮನಿ,ವಿಶ್ವಮಿತ್ರ ಕಟ್ಟಿಮನಿ,ಯಲ್ಲಪ್ಪ ರತ್ತಾಳ,ಶ್ರೀಕಾಂತ ರತ್ತಾಳ,ಮರೆಪ್ಪ ವೆಂಕಟಾಪುರ,ವೆಂಕಟೇಶ ಕವಡಿಮಟ್ಟಿ,ಲಕ್ಷ್ಮಣ ಹೆಗ್ಗಣದೊಡ್ಡಿ,ನಾಗರಡ್ಡಿ ರತ್ತಾಳ,ಆನಂದ ಮಾಚಗುಂಡಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.