ಸುರಪುರ: ಬೀದರ-ಶ್ರೀರಂರಪಟ್ಟಣ ರಾಜ್ಯ ಹೆದ್ದಾರಿ ಅಭಿವೃಧ್ಧಿಗೊಳಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲು ಸಂಸದ ಜಿ.ಕುಮಾರ ನಾಯಕಗೆ ಮನವಿ ಸಲ್ಲಿಸಲಾಗಿದೆ.
ನಗರಕ್ಕೆ ಆಗಮಿಸಿದ್ದ ಸಂಸದ ಜಿ.ಕುಮಾರ ನಾಯಕ ಅವರು ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಬ್ದುಲ್ ಅಲೀಮ್ ಗೋಗಿ ಮನವಿ ಸಲ್ಲಿಸಿ,ಬೀದರ-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯನ್ನು ಹತ್ತಿಗುಡೂರ ವರೆಗೆ ಕಾಮಗಾರಿ ಮಾಡಿ,ಹತ್ತಿಗುಡೂರ ದಿಂದ ಲಿಂಗಸೂಗುರ ವರೆಗೆ ಸುಮಾರು 65 ಕಿ.ಮೀ ರಸ್ತೆ ಹಾಗೇ ಬಿಟ್ಟಿದ್ದರಿಂದ ಸಿಂಗಲ್ ಲೇನ್ ರಸ್ತೆ ಇದ್ದು ರಸ್ತೆ ಪಕ್ಕದಲ್ಲಿ ದೊಡ್ಡ ದೊಡ್ಡ ಗುಂಡಿಗಳಿದ್ದು ನಿತ್ಯವೂ ಅನೇಕ ಕಡೆಗಳಲ್ಲಿ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದು ರಸ್ತೆಯ ಅಗಲಿಕರಣ ಅಗತ್ಯವಿದೆ.ಆದ್ದರಿಂದ ಕೇಂದ್ರ ಸರಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿ ಹತ್ತಿಗುಡೂರ ದಿಂದ ಲಿಂಗಸೂಗುರ ವರೆಗಿನ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ಮನವಿ ಸ್ವೀಕರಿಸಿದ ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಅವರು ಕೂಡ ಉಪಸ್ಥಿತರಿದ್ದು ಸಂಸದರಿಗೆ ಕಾಮಗಾರಿಯ ಕುರಿತು ಮನವರಿಕೆ ಮಾಡಿದರು.ಮುಖಂಡರಾದ ವೆಂಕೋಬ ಯಾದವ್,ರಾಜಾ ಲಕ್ಷ್ಮೀನಾರಾಯಣ ನಾಯಕ ಅವರು ಉಪಸ್ಥಿತರಿದ್ದರು.