ಶ್ರೀದಾಮೋದರ ರಘೋಜಿ ಮೆಮೋರಿಯಲ್ ಶಾಲೆಯ 3ನೇ ಸಂಸ್ಥಾಪಕರ ದಿನಾಚರಣೆ

0
27

ಕಲಬುರಗಿ: ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಮೂರನೇ ವರ್ಷದ ಶಾಲೆಯ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ಮಹೇಶ ಬಡಿಗೇರ ಇವರ ಸಹಕಾರದೊಂದಿಗೆ ಶ್ರೀಮತಿ ಮೀರಾ ಆರ್ ರಘೋಜಿ ಹಾಗೂ ಸಂಗಡಿಗರಿಂದ ಸಂಗೀತ ನುಡಿನಮನ ಜರುಗಿತು.

Contact Your\'s Advertisement; 9902492681

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ವಿಜಯ ಡಿ. ರಘೋಜಿ, ಶಾಲೆಯ ಅಧ್ಯಕ್ಷರಾದ ರಾಮಚಂದ್ರ ಡಿ ರಘೋಜಿ ಕಾರ್ಯದರ್ಶಿಗಳಾದ ಮೀರಾ ಆರ್ ರಘೋಜಿ, ಟ್ರಸ್ಟೀ ಹೊಂದಿರುವ  ಕಮಲಾಬಾಯಿ ಡಿ ರಘೋಜಿ, ಕುಮಾರಿ ನಂದಿನಿ ಆರ್ ರಘೋಜಿ, ವಿಷ್ಣು ಕೇಲೋಜಿ ಇವರುಗಳಿಗೆ ಶಾಲೆಯ ವತಿಯಿಂದ ನೆನಪಿನ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಿಲಾಯಿತು.

ಈ ಸಂಸ್ಥೆಯಲ್ಲಿ ಸತತವಾಗಿ ಐದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಶಾಲೆಯ ಎಲ್ಲಾ ಭೋದಕರಿಗೂ ಹಾಗೂ ಭೋದಕೇತರರಿಗೂ ಶಾಲೆಯ ಪ್ರಾಂಶುಪಾಲರಾದ ಪ್ರಮೋದ ಎಸ್ ಮಾಳೇಕರ ಹಾಗೂ ಸಂಸ್ಥೆಯ ಸಮಸ್ತ ಪದಾಧಿಕಾರಿಗಳಿಂದ  ನೆನಪಿನಕಾಣಿಕೆಯನ್ನು ಕೊಟ್ಟು ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ, ಬೋಧಕರು, ಬೋಧಕೇತರರು ಹಾಗೂ ಶಾಲೆಯ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು. ಕೊನೆಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here