ಅಕ್ರಮ ಖಾಸಗಿ ಕ್ಲಿನಿಕ್ : ಕ್ರಮಕ್ಕೆ ಆಗ್ರಹ

0
45

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಳ್ಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡರ್ ಅಕ್ರಮವಾಗಿ ಕಾಳಗಿಯ ತಮ್ಮ ಸ್ವಂತ ಮನೆಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಜೈ ಕನ್ನಡಿಗರ ಸೇನೆ ಮತ್ತು ಜೈ ಕನ್ನಡಿಗರ ರಕ್ಷಣಾ ವೇದಿಕೆ ಜಂಟಿಯಾಗಿ ದೂರು ಸಲ್ಲಿಸಿದರು.

ಕಾಂಪೌಂಡರ್ ಎಂದು ಕೊಳ್ಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಈ ವ್ಯಕ್ತಿ ಯಾವುದೇ ವೈದ್ಯಕೀಯ ಪದತಿ ಹೊಂದಿರದೆ ಖಾಸಗಿಯಾಗಿ ವಾಸವಿಕ್ಲಿನಿಕ್ ಹೆಸರಿನಲ್ಲಿ ಅಕ್ರನ ಕ್ಲಿನಿಕ್ ನಡೆಸುತ್ತಿರುವ ಇವರ ವಿರುದ್ಧ ಕ್ರಮನ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ, ಜೈ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸಚೀನ ಫರತಾಬಾದ, ಮುಖಂಡರಾದ ಹುಸೇನ, ನವೀನ ಕುಮಾರ, ಬಸವರಾಜ ಮಗ್ಗಿ, ಸಾಗರ, ದುಮ್ಮಸೂರ, ಅನೀಲ ತಳವಾರ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here