ಬದ್ಧತೆಯ ಬದುಕು ಸಾಗಿಸಿದ ಡಾ. ವಿಠ್ಠಲ ದೊಡ್ಡಮನಿ: ನಿಜಗುಣಾನಂದ ಸ್ವಾಮೀಜಿ

0
300

ಕಲಬುರಗಿ: ಬದುಕಿನಲ್ಲಿ ನೋವುಂಡಿದ್ದರೂ ಸಮಾಜಕ್ಕೆ ಬೆಳಕು ನೀಡಿದ ದಲಿತ ಲೋಕದ ಸೂರ್ಯ ಡಾ. ವಿಠ್ಠಲ ದೊಡ್ಡಮನಿಯವರು ಎಂದು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ನುಡಿದರು.

ನಗರದ ಡಾ. ಎಸ್.ಎಂ. ಪಂಡಿತ ರಂಗಂದಿರದ ಡಾ. ಶಿವರಾಮ ಮೋಘಾ ವೇದಿಕೆಯಲ್ಲಿ ಇಂದು ಬೆಳಗ್ಗೆ ಆಯೋಜಿಸಿದ್ದ ಡಾ. ವಿಠ್ಠಲ ದೊಡ್ಡಮನಿಯವರ ಅಭಿನಂದನಾ ಸಮಾರಂಭದಲ್ಲಿ ಪತ್ರಕರ್ತ ಸುರೇಶ ಬಡಿಗೇರ ಸಂಪಾದಿತ “ದಲಿತ ಲೋಕದ ದಳಪತಿ” ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಾವು ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ನೋಡಿಲ್ಲ. ಆದರೆ ಅವರ ವಿಚಾರಗಳನ್ನು ಪ್ರಚುರಪಡಿಸುವ ನಮ್ಮಂಥವರಿಗೆ ದೊಡ್ಡಮನಿ ಬೆನ್ನೆಲುಬಾಗಿರುವುದು ಸಂತೋಷದ ಸಂಗತಿ. ಇಂಥವರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ತಿಳಿಸಿದರು.

Contact Your\'s Advertisement; 9902492681

ಸಾಮಾಜಿಕ ಚಳವಳಿಯಲ್ಲಿ ತೊಡಗಿದವರು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂಬುದಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ. ವಿಠ್ಠಲ ದೊಡ್ಡಮನಿ ಸಾಕ್ಷಿಯಾಗಿದ್ದಾರೆ. ಇವರೀರ್ವರಿಗೆ ಅಧಿಕಾರ ಸಿಕ್ಕಿದ್ದರೆ ಬಹುಶಃ ದಲಿತ ಲೋಕಕ್ಕೆ ಇಷ್ಟೊಂದು ಶಕ್ತಿ ಬರುತ್ತಿರಲಿಲ್ಲ.
                                                                     – ಡಾ.ಐ.ಎಸ್. ವಿದ್ಯಾಸಾಗರ

ಸಮಾಜ ಎಷ್ಟೆಲ್ಲ ಮುಂದುವರಿದಿದ್ದರೂ ಸವರ್ಣೀಯರಲ್ಲಿ ಇನ್ನೂ ಅಸ್ಪೃಶ್ಯತೆ ಮಲದ ರೂಪದಲ್ಲಿ ಉಳಿದಿದೆ. ಕಾಣುವ ಮನುಷ್ಯರನ್ನು ಪ್ರೀತಿ ಮಾಡದ ನಾವು ಕಾಣದ ದೇವರನ್ನು ಸಾಧ್ಯವಿಲ್ಲ. ಮನಜವಾದದ ಮೇಲೆ ದೇಶ ಕಟ್ಟಿದರೆ ಭಾರತಕ್ಕೆ ಭವಿಷ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್ ತಳಹದಿಯ ಮೇಲೆ ಸಮಾಜ, ರಾಷ್ಟ ಕಟ್ಟಬೇಕಾಗಿದೆ ಎಂದು ಹೇಳಿದರು. ವ್ಯಕ್ತಿ ಕೇಂದ್ರೀತ ರಾಜಕಾರಣ ಬಿಟ್ಟು ತತ್ವ ಕೇಂದ್ರೀತ ರಾಜಕಾರಣದೆಡೆಗೆ ಸಾಗಬೇಕು. ಧರ್ಮ ಧ್ವಜ ಹಿಡಿಯುವುದನ್ನು ಬಿಟ್ಟು ಕಾಯಕ ಧ್ವಜ ಹಿಡಿದಾಗ ಮಾತ್ರ ದೇಶದ ಉದ್ದಾರ ಸಾಧ್ಯ. ೯೫೦ ವರ್ಷಗಳ ಹಿಂದೆಯೇ ಬಸವಣ್ಣ ಮಾನಹಕ್ಕುಗಳನ್ನು ಪ್ರತಿಪಾದಿಸಿದ್ದರು. ‌ಏಕ ಸಂಸ್ಕೃತಿಗಿಂತ ಬಹು ಸಂಸ್ಕೃತಿ ಈ ದೇಶದಲ್ಲಿ ಮೊಳೆಯಬೇಕಾಗಿದೆ ಎಂದರು.

ಮೇಲ್ವರ್ಗದವರ ಮನಸ್ಸು ಬದಲಾಗಬೇಕು, ಕೆಳವರ್ಗದವರು ಸಂಸ್ಕಾರ, ಸಂಸ್ಕೃತಿಯೆಡೆಗೆ ಬರಬೇಕು. ಜಾತಿ ಮನೋಭಾವನೆ ಎಲ್ಲರೂ ತೊರೆಯಬೇಕು. ಶಬ್ದಗಳ ಮೇಲೆ ಮಡಿವಂತಿಕೆಯ ಆಟ ನಡೆಯದು. ಬುದ್ಧ ತನು, ಬಸವಣ್ಣ ಮನ, ಅಂಬೇಡ್ಕರ್ ಆತ್ಮ ಮಾಡಿಕೊಳ್ಳಬೇಕು ಎಂದು ವಿವರಿಸಿದರು. ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಮಾತನಾಡಿ, ಊರ ಹೊರಗಿರುವವರು ಹೊಲೆಯರು, ಸಮತೆಯನ್ನು ಬಿತ್ತಿದವರು ಸಮಗಾರರು. ಸಮಾಜ ಸೇವೆ ಮಾಡುವರು ಜನಪ್ರತಿನಿಧಿಗಳು ಆಗುವುದಿಲ್ಲ ಎನ್ನುವುದಕ್ಕೆ ವಿಠ್ಠಲ ದೊಡ್ಡಮನಿ ಸಾಕ್ಷಿಯಾಗಿದ್ದಾರೆ ಎಂದು ನುಡಿದರು.

ಪುಸ್ತಕ ಪರಿಚಯವನ್ನು ಐ.ಎಸ್. ವಿದ್ಯಾ ಸಾಗರ ಮಾತನಾಡಿದರು. ಸಿದ್ಧಾರ್ಥ ಬುದ್ಧ ವಿಹಾರದ ಸಂಘಾನಂದ ಭಂತೇಜಿ, ಸುಲಫಲ ಮಠ ಹಾಗೂ ಶ್ರೀಶೈಲಂ ನ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಧಾಬಾಯಿ ಮಲ್ಲಿಕಾರ್ಜುನ ಖರ್ಗೆಯವರು ಪತ್ರಕರ್ತ ಸುರೇಶ ಬಡಿಗೇರ ಸಂಪಾದಿತ ” ದಲಿತ ಲೋಕದ ದಳಪತಿ” ಕೃತಿ ಬಿಡುಗಡೆ ಮಾಡಿದರು.

ಖ್ಯಾತ ಅಂಬೇಡ್ಕರ್ ವಾದಿ ತಾತ್ಯಾರಾವ ಕಾಂಬಳೆ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ವಿಶ್ರಾಂತ ನ್ಯಾಯಾಧೀಶರಾದ ಜಿ.ಕೆ. ಗೋಕಲೆ, ಸಿ.ಆರ್. ಬೆನಕನಳ್ಳಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ, ಮಾಜಿ ಮೇಯರ್ ಗಳಾದ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರ, ಶರಣು ಮೋದಿ, ವಿಧಾನ ಪರಿಷತ್ ಮಾಜಿ ಸಚಿವರಾದ ಅಮರನಾಥ ಪಾಟೀಲ, ಅಲ್ಲಮಪ್ರಭು ಪಾಟೀಲ, ಶಶೀಲ್ ನಮೋಶಿ, ಜಿ.ಪಂ. ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಅರುಣಕುಮಾರ ಎಂ.ವೈ.ಪಾಟೀಲ, ದಿಲೀಪ್ ಆರ್. ಪಾಟೀಲ, ಶಾಂತಪ್ಪ ಕೂಡ್ಲಗಿ, ಪ್ರಕಾಶ ಕಮಕನೂರ ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ , ಎನ್ ಇ ಕೆ ಆರ್ ಟಿಸಿ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಗುವಿಕ ಮಾಜಿ ಕುಲಪತಿ ಎಸ್.ಪಿ. ಮೇಲಕೇರಿ,
ವಿಠ್ಠಲ ದೊಡ್ಡಮನಿ, ಸುಶೀಲಾಬಾಯಿ ವಿಠ್ಠಲ ದೊಡ್ಡಮನಿ ಇತರರು ಇದ್ದರು.

ಡಾ. ಶಿವರಾಜ ಪಾಟೀಲ ಅಭಿನಂದನಾ ಭಾಷಣ ಮಾಡಿದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಎ.ಬಿ.‌ಹೊಸಮನಿ, ಸಿದ್ಧಾರ್ಥ ಚಿಮ್ಮಾಇದ್ಲಾಯಿ ಹಾಗೂ ಸಂಗಡಿಗರು ಸಂಗೀತ ಸೇವೆ ನಡೆಸಿಕೊಟ್ಟರು. ಕೃತಿ ಸಂಪಾದಕ ಸುರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here