ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ ) ಸಹಯೋಗದಲ್ಲಿ ಕಿದ್ವಾಯ್ ಕ್ಯಾನ್ಸರ್ ಸಂಸ್ಥೆಯ ಶ್ರೀ ವೆಂಕಟೇಶ್ವರ ಧರ್ಮಶಾಲೆ ಬೆಂಗಳೂರಿನಲ್ಲಿ ಕಲಬುರಗಿಯ ಚೇತನ್ ಬಿ. ಕೋಬಾಳವರಿಂದ,ವಚನ ಗಾಯನ ದಾಸವಾಣಿ,ತತ್ವಪದ ಭಾವಗೀತೆ ಜನಪದ ಗೀತೆ ಯಶಸ್ವಿಯಾಗಿ ಹಾಡಿ ರೋಗಿಗಳ ಹಾಗೂ ರೋಗಿಗಳ ಆರೈಕೆದಾರರ ಮನಸ್ಸನ್ನು ಸಂತೃಪ್ತಿಗೊಳಿಸಿದರು.
ಕೇದಾರ್ ಫುಲಾರಿ ತಬಲಾ ಸಾತ್ ನೀಡಿದರೆ ಗಣೇಶ ಹಾರ್ಮೋನಿಯಂ ಸಾತ್ ನೀಡಿದರು ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಅಧಿಕಾರಿಗಳಾದ ಶ್ರೀಮತಿ ಅನ್ನಪೂರ್ಣ ಎಲ್. ಕಿರಣ ಸರ್ ಆಸ್ಪತ್ರೆಯ ಸಿಬ್ಬಂದಿ ಸಂಗೀತವನಾಲಿಸಿ ಹರ್ಷ್ಯವ್ಯಕ್ತಪಡಿಸಿದರು.
ಪ್ರತಿ ಬುಧವಾರ ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ಅವರಣದಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ರೋಗಿಗಳ ಆರೈಕೆದಾರರ ನೋವನ್ನು ಸಾಂತ್ವನ ಗೊಳಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.