ಬಸವಲಿಂಗೇಶ್ವರರ ಸಾಮಾಜಿಕ ಕೊಡುಗೆ ಪ್ರಮುಖ: ಶಿವಾನಂದ ಸ್ವಾಮೀಜಿ

0
38

ಕಲಬುರಗಿ: ಪೂಜ್ಯ ಲಿಂ.ಬಸವಲಿಂಗೇಶ್ವರರು ಸಮಾಜದಲ್ಲಿರುವ ಬಡವರು,ಅನಾಥರು, ದುರ್ಬಲ ವರ್ಗದವರ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಅನೇಕ ಭಕ್ತರಿಗೆ ಜೀವನಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ ಅವರ ಬಾಳನ್ನು ಬೆಳಗಿದ್ದಾರೆ. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಪ್ರಮುಖವಾಗಿದೆಯೆಂದು ಶಿವಾನಂದ ಸ್ವಾಮೀಜಿಗಳು ಹೇಳಿದರು.

ಅವರು ನಗರದ ಮಕ್ತಂಪೂರನ ಗುರುಬಸವ ಬೃಹನ್ಮಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ’ಪೂಜ್ಯ ಬಸವಲಿಂಗೇಶ್ವರರ ೮೭ನೆಯ ಪುಣ್ಯ ಸ್ಮರೋಣತ್ಸವ ಕಾರ್ಯಕ್ರಮದಲ್ಲಿ ಅವರಿಗೆ ನಮನಗಳನ್ನು ಸಲ್ಲಿಸಿ ನಂತರ ಮಾತನಾಡುತ್ತಿದ್ದರು. ಗುರುಬಸವ ಮಠಕ್ಕೆ ತನ್ನದೇ ಆದ ಭವ್ಯವಾದ ಇತಿಹಾಸವಿದೆ. ಜಿಲ್ಲೆ ಹಾಗೂ ಮಹಾರಾಷ್ಟ್ರದ ನಾಗಣಸೂರನಲ್ಲಿ ಶಾಖಾ ಮಠಗಳಿವೆ. ಭಕ್ತರೆ ಮಠದ ಆಸ್ತಿಯಾಗಿದ್ದು, ಇಲ್ಲಿ ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ಜರುಗುತ್ತದೆ. ಬಡ ಮಕ್ಕಳಿಗಾಗಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಶಿಕ್ಷಣ ನೀಡಲಾಗುತ್ತಿದೆ. ಉಚಿತವಾಗಿ ಊಟ, ವಸತಿ ವ್ಯವಸ್ಥೆಯ ಕಲ್ಪಿಸಲಾಗಿದೆಯೆಂದರು.

Contact Your\'s Advertisement; 9902492681

ಪ್ರತಿಯೊಬ್ಬರು ಮೌಢ್ಯತೆಯಿಂದ ಹೊರಬನ್ನಿ. ವೈಚಾರಿಕತೆ ಮೈಗೂಡಿಸಕೊಳ್ಳಿ. ಜಿಡ್ಡಗಟ್ಟಿದ ಸಂಪ್ರದಾಯದಿಂದ ಮಾನಸಿಕ ತೊಳಲಾಟವನ್ನು ಅನುಭವಿಸಲಾಗುತ್ತದೆ. ಬಸವಾದಿ ಶರಣರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಕೊಂಡು ಜೀವನ ಸಾಗಿಸಿದರೆ ಉನ್ನತವಾದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಸಮಾಜಕ್ಕೆ ಸಾಧ್ಯವಾದಷ್ಟು ಸೇವೆಯನ್ನು ನೀಡಬೇಕೆಂದು ನೆರೆದಿದ್ದ ಅನೇಕ ಭಕ್ತರಿಗೆ ಸಲಹೆ ನೀಡಿದರು. ಕಾರ್ಯಕ್ರಮ ನಿಮಿತ್ಯ ಪೂಜ್ಯ ಬಸವಲಿಂಗೇಶ್ವರರ ಕರ್ತೃ ಗದ್ದುಗೆ ವಿಶೇಷ ಪೂಜೆ, ಮಹಾಮಂಗಳಾರತಿ, ನಂತರ ಪ್ರಸಾದ ವಿತರಣೆ, ಭಜನೆ ಜರುಗಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸತೀಶ ಅಷ್ಟಮೂರ್ತಿ ಹಿರೇಮಠ, ಪ್ರೊ.ಎಚ್.ಬಿ.ಪಾಟೀಲ, ಪ್ರೊ.ಶಿವಕುಮಾರ ಹಿರೇಮಠ, ಶಿವಶಂಕರ ನನ್ನಾ, ರಾಜಶೇಖರ ಕಲ್ಯಾಣಿ, ಶಿವರಾಜ ನಂದಗಾಂವ, ನಾಗಯ್ಯ ಶಿವಯೋಗಮಠ, ಶಿವಪ್ರಕಾಶ ಶಾಸ್ತ್ರೀ, ಬಸವರಾಜ ಅಗ್ಗಿ, ಉಮಾಮಹೇಶ್ವರ ಬಿಲಗುಂದಿ, ಚಂದ್ರಶೇಖರ ಚಕ್ಕಿ, ಕಲ್ಯಾಣಕುಮಾರ ಶೀಲವಂತ, ರಾಜಶೇಖರ ಬಿ.ಮರಡಿ, ವೀರೇಶ ಬೋಳಶೆಟ್ಟಿ, ಅನ್ಣಾರಾವ ಮಂಗಾಣೆ, ಬಸವರಾಜ ಪುರಾಣೆ, ಲಕ್ಷ್ಮೀಪುತ್ರ ಬಿರಾದಾರ, ಮಲ್ಲಿಕಾರ್ಜುನ ಕಾಕಡಂಕಿ ಸೇರಿದಂತೆ ನಗರದ ಹಾಗೂ ಜಿಲ್ಲೆಯ ಅನೇಕ ಭಕ್ತರು, ಮಠದ ಶಾಲಾ-ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here