ಶಹಾಪುರ: ಜಾನಪದ ಕಲೆ,ಸಾಹಿತ್ಯ,ಮತ ಸಂಗೀತ ಸಂಸ್ಕೃತಿ ಗ್ರಾಮೀಣ ಜನರ ಜೀವಾಳ ಎಂದು ಖ್ಯಾತ ವೈದ್ಯರಾದ ಹಾಗೂ ಕಲಬುರಗಿ ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ:ಎಸ್. ಎಸ್. ಗುಬ್ಬಿ ಹೇಳಿದರು.
ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ತಾಲ್ಲೂಕು ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಜಾನಪದ ಸಾಹಿತ್ಯ ಸಂಭ್ರಮ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಜನಪದ ದಿಗ್ಗಜರಾದ ಮೈಲಾರಪ್ಪ ನಾಯಕ್ ಮಾತನಾಡಿ ಜನಪದ ಸಾಹಿತ್ಯ ತಾಯಿ ಬೇರು ಇದ್ದಂತೆ ಆದ್ದರಿಂದ ಇದು ಬಹುಬೇಗ ಜನಪ್ರಿಯತೆ ಪಡೆಯುವ ಶಕ್ತಿ ಹೊಂದಿದೆ ಎಂದು ಬಣ್ಣಿಸಿದರು.
ಅಲ್ಲದೆ ಜನಪದ ಸಾಹಿತ್ಯದ ಹಲವಾರು ಮಜಲುಗಳಾದ ಹಂತಿಪದ, ಜಾನಪದ,ಗೀಗಿಪದದ ಹಾಡಿನ ತುಣುಕುಗಳನ್ನು ಹಾಡಿ ಎಲ್ಲರನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ನಾಡಿನ ಸಾಧಕರಿಗೆ ಕಲಾನಿಕೇತನ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿ ಸತ್ಕರಿಸಲಾಯಿತು ನಂತರ ರಮೇಶ ಯಾಳಗಿ ಕೆಂಭಾವಿ ಮತ್ತು ತಂಡದವರಿಂದ ಸುಗಮ ಸಂಗೀತ, ಪ್ರದೀಪ್ ಅಂಗಡಿ ಬಳಗದ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮಗಳು ಜರುಗಿದವು ಈ ಸಮಾರಂಭದ ವೇದಿಕೆಯ ಮೇಲೆ ಖ್ಯಾತ ವೈದ್ಯರಾದ ಡಾ: ಚಂದ್ರಶೇಖರ್ ಸುಬೇದಾರ್, ಹಿರಿಯ ಸಾಹಿತಿಗಳಾದ ಶ್ರೀ ಸಿದ್ಧರಾಮ ಹೊನಕಲ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಾದ ಸಿದ್ದಲಿಂಗಣ್ಣ ಆನೆಗುಂದಿ, ರೈತ ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಸತ್ಯಂಪೇಟೆ, ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ ಹಾಗೂ ಇತರರು ಉಪಸ್ಥಿತರಿದ್ದರು.
ಜಯಶ್ರೀ ಪ್ರಾರ್ಥಿಸಿದರು ಸುರೇಶ್ ಶಿರೋಳಮಠ ಸ್ವಾಗತಿಸಿದರು ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಸೂಗುರಯ್ಯ ಗಣಾಚಾರಿಮಠ ನಿರೂಪಿಸಿದರು ವೀರಭದ್ರಯ್ಯ ವಂದಿಸಿದರು.