ಮಹರ್ಷಿ ವಾಲ್ಮೀಕಿ ಒಬ್ಬ ಇತಿಹಾಸಕಾರ: ಡಾ ಎಸ್.ಎಸ್.ನಾಯಕ ಅಭಿಮತ

0
104

ಸುರಪುರ: ಮಹರ್ಷಿ ವಾಲ್ಮೀಕಿ ಒಬ್ಬ ಕಳ್ಳನಾಗಿದ್ದ ಸುಳ್ಳನಾಗಿದ್ದ ಎಂಬುದು ಪುರೋಹಿತಶಾಹಿಗಳ ಸುಳ್ಳು ಸೃಷ್ಟಿಯಾಗಿದೆ.ವಾಲ್ಮೀಕಿ ಒಬ್ಬ ಇತಿಹಾಸಕಾರ,ತತ್ವಜ್ಞಾನಿ,ಮೇಧಾವಿ,ಚರಿತ್ರಕಾರನಾಗಿದ್ದ ಎಂದು ಉಪನ್ಯಾಸಕ ಡಾ:ಎಸ್.ಎಸ್.ನಾಯಕ ಮಾತನಾಡಿದರು.

ತಾಲ್ಲೂಕು ಆಡಳಿತ ದಿಂದ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಒಬ್ಬ ಕಳ್ಳ ಸುಳ್ಳನಾದ ವ್ಯಕ್ತಿಯು ಜಗತ್ತಿಗೆ ಮಾದರಿಯಾಗುವ, ಸಮಾಜದಲ್ಲಿ ಭಾತೃತ್ವ ಮೂಡಿಸುವ ರಾಮಾಯಣದಂತ ಗ್ರಂಥ ರಚಿಸಲು ಹೇಗೆ ಸಾಧ್ಯ? ವಾಲ್ಮೀಕಿಯನ್ನು ಕೆಟ್ಟ ವ್ಯಕ್ತಿಯಾಗಿದ್ದ ಎಂದು ಹೇಳುವುದೆಲ್ಲ ಕಟ್ಟು ಕತೆಯಾಗಿದೆ. ಅಲ್ಲದೆ ವಾಲ್ಮೀಕಿ ಬಸವಣ್ಣ ಕನಕದಾಸರು ಅಂಬೇಡ್ಕರರು ಇವರೆಲ್ಲ ಒಂದು ಜನಾಂಗದ ಸ್ವತ್ತಲ್ಲ,ಇವರೆಲ್ಲ ಜನಾಂಗದ ಸ್ವತ್ತಾಗಿದ್ದಾರೆ ಎಂದರು.

Contact Your\'s Advertisement; 9902492681

ಇಂದು ಅನೇಕರು ಮೀಸಲಾತಿಯನ್ನು ತೆಗೆಯಬೇಕೆಂಬ ಮಾತನಾಡುತ್ತಾರೆ.ಅದು ಸಂವಿಧಾನ ಕೊಟ್ಟಿರುವ ಹಕ್ಕು ಅದೇನು ಭೀಕ್ಷೆಯಲ್ಲ.ಎಲ್ಲಿಯವರೆಗೆ ಜಾತಿ ಇರುತ್ತದೆಯೋ ಅಲ್ಲಿಯ ವರೆಗೆ ಮೀಸಲಾತಿ ಇರುತ್ತದೆ ಎಂದರು.ಅಲ್ಲದೆ ಬೇಡ ಸಮುದಾಯ ಇನ್ನೂ ಅಭಿವೃಧ್ಧಿ ಹೊಂದಬೇಕಿದೆ..ವಾಲ್ಮೀಕಿ ಹೇಳಿದ ಧೈರ್ಯ ಸಾಹಸ ಮತ್ತು ಸ್ವಾಭಿಮಾನವನ್ನು ನಾವು ಎಂದೂ ಕಳೆದುಕೊಳ್ಳದೆ ಬದುಕಬೇಕೆಂದು ಕಿವಿಮಾತು ಹೇಳಿದರು.ನಂತರ ಮತ್ತೋರ್ವ ಉಪನ್ಯಾಸಕರಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕ ಬಸವಂತ್ರಾಯ ಪಾಟೀಲ ದೇವರಗೋನಾಲ ಮಾತನಾಡಿದರು.
ಕಾರ್ಯಕ್ರಮಕ್ಕು ಮುನ್ನ ನಗರದ ಡೊಣ್ಣಿಗೇರಾದಲ್ಲಿರುವ ಮಹರ್ಷಿ ವಾಲ್ಮೀಕಿ ಮಂದಿರದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಮಹರ್ಷಿ ವಾಲ್ಮೀಕಿ ಭವನದ ವರೆಗೆ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ನಂತರ ನಡೆದ ಕಾರ್ಯಕ್ರಮವನ್ನು ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಮಾಜದ ಸಾಧಕರಾದ ನ್ಯಾಯವಾದಿ ದೇವಿಂದ್ರಪ್ಪ ಬೇವಿನಕಟ್ಟಿ,ನಗರಸಭೆ ಸದಸ್ಯ ರಾಜಾ ಪಿಡ್ಡನಾಯಕ,ಟಿ.ಹೆಚ್.ಒ ಡಾ:ಆರ್.ವಿ.ನಾಯಕ,ಅನೀಲ ಕುಮಾರ ಇಟ್ಟಂಗಿ,ಬಸವರಾಜ ಹೆಮ್ಮಡಗಿ,ಮರೆಪ್ಪ ಪೈಲ್ವಾನ್,ಮಡಿವಾಳಪ್ಪ ತಳ್ಳಳ್ಳಿ ಹಾಗು ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿದರು.ಪಿ.ಐ ಆನಂದರಾವ್,ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ,ಭೀಮಣ್ಣ ಬೇವಿನಾಳ ವೇದಿಕೆ ಮೇಲಿದ್ದರು.ಹಣಮಂತ್ರಾಯ ನಾಯಕ ದೊರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಗಂಗಾಧರ ನಾಯಕ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ದೊಡ್ಡ ದೇಸಾಯಿ,ಡಾ:ಯಲ್ಲಪ್ಪ ನಾಯಕ,ರವಿ ನಾಯಕ,ಶಂಕರ ನಾಯಕ,ಮಲ್ಲಿಕಾರ್ಜುನ ಕುಲಕರ್ಣಿ,ಅಯ್ಯಣ್ಣ ಹಾಲಬಾವಿ,ಮೂಕಪ್ಪ ಬಿಚಗತ್ತಿಕೇರಾ,ನಾಗರಾಜ ಕಲಬುರ್ಗಿ,ಸಿದ್ದನಗೌಡ ಕರಿಬಾವಿ,ವಿಷ್ಣು ಗುತ್ತೇದಾರ,ಉಸ್ತಾದ ವಜಾಹತ್ ಹುಸೇನ,ಶರಣು ಅನಕಸುಗೂರ, ವೆಂಕಟೇಶ ರಡ್ಡಿ ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳಾದ ಲಾಲಸಾಬ್,ಸತ್ಯನಾರಾಯಣ ದರಬಾರಿ,ಅಮರೇಶ ಕುಂಬಾರ,ಶರಣಪ್ಪ ಕುಂಬಾರ,ಸಂಗೀತಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here