ಹಿಂದಿ ಎಲ್ಲರನ್ನು ಜೋಡಿಸುತ್ತದೆ : ಪ್ರೊ ರಿಷಬದೇವ ಶರ್ಮಾ

0
42

ಕಲಬುರಗಿ: ಹಿಂದಿ ಹಿಂದೂಸ್ತಾನದ ಭಾಷೆ. ಹಿಂದಿ ಭಾರತದ ಎಲ್ಲ ರಾಜ್ಯದ ಜನರನ್ನು ಜೋಡಿಸುತ್ತದೆ ಅಲ್ಲದೇ ಇಲ್ಲಿನ ಬಹುತೇಕ ಜನರು ಹಿಂದಿ ಅರಿತವರಾಗಿದ್ದಾರೆ ಎಂದು ಮೌಲನ ಅಜಾದ ವಿವಿಯ ಪ್ರೊ ರಿಷಬದೇವ್ ಶರ್ಮಾ ಹೇಳಿದರು.

ಅವರು ಮಂಗಳವಾರ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಹಿಂದಿ ವಿಭಾಗದಿಂದ ಆಯೋಜಿಸಲ್ಪಟ್ಟ ಹಿಂದಿ ದಿವಸ ಪಕವಾಡಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಹಿಂದಿ ದಿವಸವನ್ನಾಗಿ ಆಚರಿಸಲಾಗುತ್ತದೆ. ಇದು ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿರುವ ದಿನ. ಹಿಂದಿ ನಮ್ಮ ದೇಶದ ವಿವಿಧ ಪ್ರದೇಶಗಳ ಜನರನ್ನು ಒಂದುಗೂಡಿಸುತ್ತದೆ.ಇದು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಹಿಂದಿ ಪ್ರಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ.ಹಿಂದಿ ಮಾತನಾಡಲು ಮತ್ತು ಕಲಿಯಲು ನಾವು ಹೆಮ್ಮೆ ಪಡಬೇಕು.ಹಿಂದಿ ಕೇವಲ ಭಾಷೆಯಲ್ಲ, ರಾಷ್ಟ್ರೀಯ ಏಕತೆಯ ಸಂಕೇತ. ಅನೇಕ ಶ್ರೇಷ್ಠ ಕವಿಗಳು ಮತ್ತು ಬರಹಗಾರರು ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.

ನಮ್ಮ ರಾಷ್ಟ್ರ ಭಾಷೆಯನ್ನು ಗೌರವಿಸಿ ಉಳಿಸೋಣ.
ಈ ಹಿಂದಿ ದಿವಸ್‌ನಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ಹಿಂದಿಯನ್ನು ಪ್ರಚಾರ ಮಾಡುವ ಭರವಸೆ ನೀಡೋಣ ಎಂದು ಹೇಳಿದರು.

ಕಾರ್ಯಕ್ರಮದ ವಿಶೇಷ ಅತಿಥಿ ಕೆಬಿಎನ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ ಅಲಿ ರಜಾ ಮೂಸ್ವಿ ಕಾರ್ಯಕ್ರಮದ ಆಯೋಜಕರನ್ನು ಶ್ಲಾಘಸಿದರು. ಇಂತಹ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದಕ್ಕೆ ಹಿಂದಿ ವಿಭಾಗವನ್ನು ಅಭಿನಂದಿಸಿದರು. ಕೆಬಿನ ವಿವಿ ಬಹು ಶಿಸ್ತೀಯ ವಿವಿಯಾಗಿದ್ದು ಎಲ್ಲ ನಿಕಾಯಗಳು ಕಲಿತು ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಫಲಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಡೀನ ಪ್ರೊ ನಿಶಾತ ಆರೀಫ್ ಹುಸ್ಸೇನಿ, ತಮ್ಮ ಅಧ್ಯಕ್ಷೀಯ ಸುಮಾರೋಪದಲ್ಲಿ ಮಾನವ ಮನಸ್ಸು ಮತ್ತು ಭಾಷೆಗಳ ನಡುವನ ತಾಳುಕಿನ ಬಗ್ಗೆ ಅಧ್ಯಯನ ನಡೆಯಬೇಕು ಎಂಬುದನ್ನು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಿಂದಿ ದಿವಸದ ಅಂಗವಾಗಿ ಏರ್ಪಡಿಸಲಾದ ಎಲ್ಲ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಉಪನ್ಯಾಸಕರಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಅವರಿಗೂ ಕೂಡ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.

ವಿದ್ಯಾರ್ಥಿನಿ ಸುಮಯ್ಯ ಪ್ರಾರ್ಥಿಸಿದರು. ಉರ್ದು ವಿಭಾಗದ ನಶ್ರೀನ ನಾಥ ವ್ಯಕ್ತ ಪಡಿಸಿದರು. ಡಾ ಮಿಲನ ಸ್ವಾಗತಿಸಿ ಪರಿಚಯಿಸಿದರು.ಡಾ ಆಫ಼ಷನ ದೇಶಮುಖ ವರದಿ ಪ್ರಸ್ತುತ ಪಡಿಸಿದರು. ಶಿಫಾ ಸಾಹೇರ್ ಮತ್ತು ಸುಬಿಯಾ ನಿರೂಪಿಸುದರೆ ಸಫಾ ಮರ್ಯಮ ವಂದಿಸಿದರು.

ಕಲಾ, ಭಾಷಾ, ಮಾನವೀಕತೆ, ಸಮಾಜ ವಿಜ್ಞಾನ, ವಿಜ್ಞಾನ, ಶಿಕ್ಷಣ, ಕಾನೂನು, ನಿಕಾಯದ ಎಲ್ಲ ವಿದ್ಯಾರ್ಥಿಗಳು ಮತ್ತು ಸಹಾಯಕ ಪ್ರಾಧ್ಯಪಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here