ಕಲಬುರಗಿ: ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವತಿಯಿಂದ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ ಬಗ್ಗೆ ಜಾಗೃತಿಗಾಗಿ “ದ ವೆಲ್ ನೇಸ್ ರೆವೂಲೇಷನ” ಎಂಬ ಆರೋಗ್ಯ ಕುರಿತು ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ಮ್ಯಾಗಝೀನ್ ನ 2 ನೇ ಸಂಚಿಕೆಯನ್ನು ಕಲಬುರಗಿಯ ಜಿ.ಪಂ ಕಛೇರಿಯ ಅವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆ ಸಚಿವ ದಿನೇಶ್ ಗುಂಡೂರಾವ್ ಲೋಕಾರ್ಪಣೆ ಮಾಡಿದ್ದರು.
ಕಲಬುರಗಿ ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಚಿಕಿತ್ಸೆ ಹಾಗೂ ಸಮಾಜಿಕ ಕ್ಷೇತ್ರದಲ್ಲಿ ಸದಾ ಹೊಸತನದೊಂದಿಗೆ ಕೆಲಸ ಮಾಡುತ್ತಿರುವ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮನ್ನೂರ ಅವರು ಹೊಸ ಪ್ರಯತ್ನ ದೊಂದಿಗೆ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ ಬಗ್ಗೆ ಜಾಗೃತಿಗಾಗಿ “ದ ವೆಲ್ ನೇಸ್ ರೆವೂಲೇಷನ” ಎಂಬ ಆರೋಗ್ಯ ಕುರಿತು ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ಮ್ಯಾಗಝೀನ್ ನ 2 ನೇ ಸಂಚಿಕೆಯನ್ನು ಜನರಿಗೆ ಉಚಿತವಾಗಿ ವಿತರಣೆ ಮಾಡುತ್ತಿದೆ.
“ದ ವೆಲ್ ನೇಸ್ ರೆವೂಲೇಷನ ಮ್ಯಾಗಝೀನ್ ಅನ್ನು ಸಚಿವ ದಿನೇಶ್ ಗುಂಡೂರಾವ್ ಓದುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಡಿ.ಹೆಚ್.ಓ ಶರಣಬಸಪ್ಪ ಕ್ಯಾತನಾಳ,ಆಮಿನ್ ಜಿಬರನ್, ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕದ ಜನರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಮನ್ನೂರ ಆಸ್ಪತ್ರೆಯ ತಂಡ ಕಳೆದ 3 ವರ್ಷದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಟ್ರಾಮಾ ಡೇ ಕುರಿತು ಜಾಗೃತಿ ಸೇರಿದಂತೆ ಅನೇಕ ಆರೋಗ್ಯದ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬಂದಿದೆವೆ. ಜೊತೆಗೆ ಜನರಿಗೆ ಇನ್ನೂ ಜಾಗೃತಿಗಾಗಿ ಆರೋಗ್ಯ ,ಕ್ಷೇಮ,ಯೋಗ, ಸದೃಢತೆಯ ಬಗ್ಗೆ ಜಾಗೃತಿಯ ಕುರಿತು ‘ದ ವೆಲ್ ನೇಸ್ ರೆವೂಲೇಷನ ‘ ಎಂಬ ಆರೋಗ್ಯ ಮತ್ತು ಕ್ಷೇಮದ ಕುರಿತು ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ಮ್ಯಾಗಝೀನ್ 2 ಸಂಚಿಕೆಯನ್ನು ಲೋಕಾರ್ಪಣೆ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ತಾಲೂಕಿನಲ್ಲಿ ಉಚಿತ ವಾಗಿ ವಿತರಣೆ ಮಾಡಲಾಗುತ್ತಿದೆ. – ಡಾ. ಫಾರುಕ್ ಅಹ್ಮದ ಮನ್ನೂರ, ಮುಖ್ಯಸ್ಥರು ಮನ್ನೂರ ಅಸ್ಪತ್ರೆ ಕಲಬುರಗಿ