ಕಟ್ಟಡ ಕಾರ್ಮಿಕರ 2ನೇ ಶಾಖಾ ಸಮ್ಮೇಳನ : ಕಾಪೆರ್Çರೇಟ್ ಕಂಪೆನಿಗಳಿಗೆ ಧಾರೆ ಎರೆದ ದೇಶದ ಸಂಪತ್ತು
ಶಹಾಬಾದ: ರಾಜಕೀಯ ಪಕ್ಷಗಳು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದ್ದು, ಕಾರ್ಮಿಕರು ರಾಜಕೀಯವಾಗಿ ಸ್ಥಾನಮಾನ ಪಡೆದಾಗ ಮಾತ್ರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಸಿಪಿಐ ಮುಖಂಡೆ ಕೆ.ನೀಲಾ ಹೇಳಿದರು.
ಅವರು ನಗರದ ಅಂಬಿಗರ ಚೌಡಯ್ಯ ಭವನದಲ್ಲಿ ಸಿಪಿಐ ವತಿಯಿಂದ ಆಯೋಜಿಸಲಾದ ಕಟ್ಟಡ ಕಾರ್ಮಿಕರ 2ನೇ ಶಾಖಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಸಂಪತ್ತನ್ನು ಕಾಪೆರ್Çರೇಟ್ ಕಂಪೆನಿಗಳಿಗೆ ಧಾರೆ ಎರೆಯುವ ಮೂಲಕ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡಿಸುತ್ತಾ ಕೇಂದ್ರ ಸರಕಾರ ತನ್ನ ಅಧಿಕಾರವನ್ನು ಭದ್ರಪಡಿಸಲು ನೋಡುತ್ತಿರುವುದು.
ದುರದೃಷ್ಟಕರ.ಕಾರ್ಮಿಕರ ಶಕ್ತಿ ಕಡಿಮೆಯಾಗಿರುವುದರಿಂದ ರಾಜಕೀಯ ಪಕ್ಷಗಳು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಕಾರಣ ನಾವು ಉದ್ಧಾರವಾಗಬೇಕೆಂದರೆ ರಾಜಕೀಯವಾಗಿ ಸ್ಥಾನಮಾನ ಪಡೆದು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.
ಕಾರ್ಮಿಕರು ರಾಜಕೀಯವಾಗಿ ಬೆಳೆಯಬೇಕೆಂದರೆ ಹೆಚ್ಚುಹೆಚ್ಚಾಗಿ ಪಕ್ಷದ ಸದಸ್ಯತ್ವ ಹೊಂದಬೇಕು. ಮಾತ್ರವಲ್ಲ ಎಲ್ಲ ನಗರ ಜಿಲ್ಲೆಗಳಲ್ಲಿ ಶಾಖೆಗಳನ್ನು ಹೊಂದಬೇಕು. ಆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ತಿಳಿಸಬೇಕಿದೆ. ಇಂದು ಪ್ರಜಾಪ್ರಭುತ್ವವು ಅಪಾಯದಲ್ಲಿದ್ದು ಬೆಲೆಯೇರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ ಎಂದರು.. ಕಾರ್ಮಿಕರ ವಿರೋಧಿ ಮಸೂದೆಗಳನ್ನು ಅಂಗೀಕರಿಸಿ, ಸರಕಾರ ದೇಶದ ಜನರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತಹ ನಾಯಕರನ್ನು ನಾವು ತಯಾರು ಮಾಡುವ ಮೂಲಕ ಆಯಾ ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿಧಾನಸಭೆ, ಸಂಸತ್ತಿಗೆ ಕಳಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಹೋರಾಟಗಾರ ಎಂ.ಬಿ.ಸಜ್ಜನ್ ಮಾತನಾಡಿ,ನಮ್ಮನ್ನು ಆಳುವ ಪಕ್ಷಗಳು ಇಂದು ದೇವರ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುತ್ತಿವೆ. ಆ ಮೂಲಕ ಕಲುಷಿತ ವಾತಾವರಣ ಮೂಡಿಸಿ ಎಲ್ಲರನ್ನೂ ಆತಂಕಕ್ಕೆ ದೂಡಿವೆ. ರೈತರು, ಕಾರ್ಮಿಕರು ಸೇರಿದಂತೆ ಯಾವುದೇ ದುಡಿಯುವ ವರ್ಗದ ಜನರ ಸಮಸ್ಯೆಗಳನ್ನು ಸರ್ಕಾರಗಳು ಕೇಳುತ್ತಿಲ್ಲ. ಉಳ್ಳವರ ಪರವಾಗಿ ಸರ್ಕಾರಗಳು ಕೆಲಸ ಮಾಡುತ್ತಿವೆ ಅಸಮಾಧಾನ ವ್ಯಕ್ತ ಪಡಿಸಿದರು.
ಪ್ರಕಾಶ ಕುಸಾಳೆ ಧ್ವಜಾರೋಹಣ ನೆರವೇರಿಸಿದರು. ಲಕ್ಷ್ಮಿಕಾಂತ ಸಾಗರ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಕಟ್ಟಡ ಕಾರ್ಮಿಕರ ಅಧ್ಯಕ್ಷ ಶ್ರೀಮಂತ ಬಿರಾದಾರ, ಯಶ್ವಂತ ಪಾಟೀಲ,ಸಾಯಿಬಣ್ಣ ಗುಡುಬಾ, ನಿಲೇಶ ರಾಠೋಡ,ನಾಗಪ್ಪ ರಾಯಚೂರಕರ್ ಸೇರಿದಂತೆ ಅನೇಕರು ಇದ್ದರು.