ವಿಕಲಚೇತರಿಗೆ ಅನುಕಂಪ ಬೇಡ ಮನುಷ್ಯರಂತೆ ಕಾಣಿ: ಡಾ.ಗವಿಸಿದ್ಧಪ್ಪ ಪಾಟೀಲ

0
98

ಬಸವಕಲ್ಯಾಣ: ವಿಕಲಚೇತನರು ತಮ್ಮ ಅಂಗವಿಕಲತೆ ಬಗ್ಗೆ ಅಗೌರವ ತಾಳಲಾರದೇ,ಅನುಕಂಪ ತೋರಿಸದೇ ಸ್ವ ಪ್ರತಿಭೆ ಹೊಂದಿದ ಅವರಿಗೆ ಮೂಲಭೂತ ಸೌಲಭ್ಯ ಗಳನ್ನು ತೋರುವ ಕೆಲಸ ಸಮಾಜ ಮಾಡಿ ಅವರು ನಮ್ಮಂತೆ ಮನುಷ್ಯರೆಂದು ತೋರಿಸಬೇಕು ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ವಿಕಲಚೇತನರ ಸಮಾವೇಶ ಪ್ರಶಸ್ತಿ ಪ್ರದಾನ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.ಮನುಷ್ಯ ಹುಟ್ಟುವ ಮೊದಲು ತಾಯಗರ್ಭದಲ್ಲಿ,ನಂತರ ಅಂಗವೈಕಲ್ಯ ಕಂಡು ಬಂದಿ ದೆ ಆದರೆ ಅವರು ತಮ್ಮ ಸ್ವಸಾಮಥ್ಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆ ಅವರನ್ನು ನೋಡುವ ದೃಷ್ಟಿ ಬದಲಾಗಬೇಕೆಂದರು.

Contact Your\'s Advertisement; 9902492681

ಬೀದರ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿ ಕರ ಕಲ್ಯಾಣ ಅಧಿಕಾರಿ ಮಹಾದೇವ ಮುಂಗಳೆ ಉದ್ಘಾ ಟಿಸಿ ಇಂತಹ ಸಮಾವೇಶ ಮಾಡುವುದು ಒಳ್ಳೆಯ ಕಾರ್ಯವೆಂದರು.ಮುಖ್ಯ ಅತಿಥಿಯಾದ ಪತ್ರಕರ್ತ ಬಸವರಾಜ ಕೌಟೆ ಮಾತನಾಡಿ ಅಂಗವಿಕಲರು ನಾವೆಂ ದು ಹಾಗೇ ಕೂಡಬಾರದು ನಮ್ಮ ಸಾಮರ್ಥ್ಯ ತೋರಿಸ ಬೇಕೆಂದರು.

ನೇತೃತ್ವ ವಹಿಸಿದ ಮಹಾಲಿಂಗದೇವರು ಅಂಗವಿಕಲರ ನ್ನು ಕೀಳಾಗಿ ಕಾಣಬಾರದು.ಅವರಲ್ಲಿ ಎಲ್ಲಾ ಅರ್ಹತೆ ಇದೆ ಓದಿ ಶಿಕ್ಷಣ ಪಡೆದು ಮುಂದೆ ಬರಲು ಕರೆ ನೀಡಿದ ರು.ಆಹಾರ ಶಿರಸ್ತೇದಾರ ನಿಂಗಯ್ಯ ಹಿರೇಮಠ ಉಪಸ್ಥಿತಿ ಇದ್ದರು.ಅಧ್ಯಕ್ಷತೆಯನ್ನು ಅಂಗವಿಕಲರ ನೌ ಕರರಸಂಘದ ರಾಜ್ಯ ಉಪಾಧ್ಯಕ್ಷ ಶಾಂತಪ್ಪ ಸಂಗಾವಿ‌ ವಹಿಸಿದ್ದರು.

ಆಶೀರ್ವಚನ ನೀಡಿದ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಅವರು ಮಾತನಾಡಿ ವಿಕಲಚೇತನ ಎಂಬ ಅಸಹಕಾರ ಬೇಡ ಸಮಾಜದಲ್ಲಿ ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡಿ ದ್ದು ಕಂಡರೆ ನಾವೆಲ್ಲ ನಾಚಬೇಕೆಂದರು.ಇಂತಹ ಕೆಲಸ ನಿರಂತರ ಮಾಡಬೆರಕೆಂದರು.

ಶಿವಯೋಗಿ ರತ್ನ ಪ್ರಶಸ್ತಿ ಪುರಸ್ಕೃತರು: ಸಂತೋಷ ಧಾಯಗೊಂಡ(ಶಿಕ್ಷಣ), ಲಾಲಮಹಮದ್ ಕಲಮೂಡ( ಆಡಳಿತ), ಶಿವಕುಮಾರ ಪಾಟೀಲ (ಸಂ ಯೋಜಕರು),ಶಿವಕುಮಾರ ಬಿರಾದಾರ(ಅಧಿಕಾರಿ), ಮನೋಜಕುಮಾರ ಕಾಂಬಳೆ(ಪರಿಸರ), ಸುನೀಲ ಮಲಗೆ(ಸಮಾಜ) ಕ್ಷೇತ್ರದ ಸಾಧಕರಿಗೆ ಪ್ರದಾನ ಮಾಡಲಾಯಿತು.

ಶತ ಸಿರಿ ಪ್ರಶಸ್ತಿ: ೧೦೨ ವರ್ಷದ ಶತಾಯುಷಿ ರುಕ್ಮಿಣಿ ಬಾಯಿ ವಿಠ್ಠಲ ವಾಘಮಾರೆ ಶ್ರದ್ಧಾಂಜಲಿ ಶ್ರವಣ ನ್ಯೂನತೆಯುಳ್ಳ ಮಕ್ಕಳ ಶಾಲೆ ಮಕ್ಕಳಿಂದ ದೇಶಪ್ರೇಮ ನೃತ್ಯ, ನಾಡಗೀತೆ, ವಚನಗೀತೆ ಯನ್ನ ಹುಮನಾಬಾದ ಮಾಣಿಕಪ್ರಭು ಅಂಧ ಮಕ್ಕಳ ಶಾಲೆ ಮಕ್ಕಳು ಹಾಡಿದರು.ಸುರೇಶ ಕಾನೇಕರ ಸ್ವಾಗತಿ ಸಿದರು.ನಿತ್ಯಾನಂದ ಮಂಠಾಳಕರ ನಿರೂಪಿಸಿದರು ಸೂರ್ಯ ಕಾಂತ ಬೊಸ್ಲೇ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here