ತನುವಿನೊಳಗಿದ್ದು ತನುವ ಗೆದ್ದ ಅಕ್ಕಮಹಾದೇವಿ

0
227

ಕಲಬುರಗಿ: ವಚನ ಕಾಲ ಅತ್ಯಪೂರ್ವವಾದುದು. ವಚನ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತ ಎನಿಸುತ್ತಿದೆ ಎಂದು ಡಾ. ಶಾಂತಲಾ ನಿಷ್ಠಿ ನುಡಿದರು.

ಜಯನಗರದ ಅನುಭವ ಮಂಟಪದಲ್ಲಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಹಾಗೂ ಕಲಬುರಗಿ ಬಸವ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ಮಹಾದೇವಿ ಅಕ್ಕಗಳ ಸಮ್ಮೇಳನ- ೧೪ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲೆಯು ಕಲೆಗಾಗಿ ಅಲ್ಲ.‌ ಕಲೆ ಜೀವನಕ್ಕಾಗಿ ಎಂದು ವಚನಕಾರರು ಹೇಳಿದ್ದರು ಎಂದು ತಿಳಿಸಿದರು.

Contact Your\'s Advertisement; 9902492681

ಚಿತ್ರಕಲೆಯಿಂದಲೇ ಮಾನವನ ಮೊದಲ ಪಾಠ ಶಾಲೆ ಶುರುವಾಗುತ್ತದೆ. ಕಲಾವಿದರಿಗೆ ಆಂತರಿಕ ಜ್ಞಾನ. ಬದುಕಿನ ಅನುಭವ ಇರಬೇಕು. ಆ ಮೂಲಕ ಸೌಂಧರ್ಯಾನುಭೂತಿಯ ಆನಂದ ಪಡೆಯಬೇಕು. ಶರಣರು ಜನಕಲ್ಯಾಣ ಹಾಗೂ ಆತ್ಮಕಲ್ಯಾಣ ಎರಡನ್ನೂ ಏಕ ಕಾಲಕ್ಕೆ ಉಂಟು ಮಾಡಿದರು ಎಂದು ತಿಳಿಸಿದರು.

ವಚನಕಾರರ ಸಾಹಿತ್ಯ ಸೇರಿದಂತೆ ಕೊಡೇಕಲ್ ಬಸವವೇಶ್ವರ ಸಾಹಿತ್ಯದಲ್ಲೂ ಕಲೆ ಹಾಸು ಹೊಕ್ಕಾಗಿದೆ. ವಚನಕಾರರು ಚಿತ್ರಕಲೆ ರಚಿಸಿರಲಿಕ್ಕಿಲ್ಲ. ಆದರೆ ಚಿತ್ರಕಲಾವಿದರಿಗೆ ಪ್ರೇರಕರಾಗಿದ್ದರು ಎಂದರು.

ಶರಣರ ವಚನಗಳನ್ನು ಕುರಿತು ಶಾಂತಲಿಂಗಪ್ಪ, ಡಾ. ಎ.ಎಸ್. ಪಾಟೀಲ, ಪ್ರೊ. ಜೆ.ಎಸ್. ಖಂಡೇರಾವ, ಡಿ.ಟಿ. ಉಪಾಧ್ಯಾಯ, ಎಂ.ಎಂ. ಗುರು, ಸೋಮಶೇಖರ ಸಾಲಿ, ಸಿದ್ಧಲಿಂಗ ಸ್ವಾಮಿ, ಮಣ್ಣೂರ ಗುರಪ್ಪ ಎಂ.ಎ. ಚೆಟ್ಟಿ, ಶಿವಲಿಂಗಪ್ಪ, ಡಾ. ಬಿ.ಕೆ.‌ಹಿರೇಮಠ ಇತರರು ವಚನಗಳಿಗೆ ಚಿತ್ರ ಬಿಡಿಸಿದ್ದಾರೆ ಎಂದು ಹೇಳಿದರು.

ಅದೇರೀತಿ ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಡಾ. ಶರಣಬಸವಪ್ಪ ಅವರು ಸಹ ಕಲೆ, ಸಾಹಿತ್ಯ, ಶಿಲ್ಪಕಲೆಯ ಪೋಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ತೇಜಸ್ವಿ, ಖುಷಿ, ನಂದಿನಿ, ತನ್ವಿ, ಭಾಗ್ಯಶ್ರೀ, ಅಮುಕ್ತಮೌಲ್ಯ ಮುಂತಾದ ಪುಟಾಣಿಗಳು, ಮಾತನಾಡಿ, 12ನೇ ಶತಮಾನದಲ್ಲಿ 33ಕ್ಕಿಂತಲೂ ಹೆಚ್ಚು ಶರಣೆಯರು ವಚನಗಳನ್ನು ರಚಿಸಿದ್ದಾರೆ. ಶರಣರು ಸ್ತ್ರೀ- ಪುರುಷರಿಗೆ ಸಮಾನ ಸ್ಥಾನಮಾನ ನೀಡಿದ್ದರು. ಇಂದಿನ ಸಮಾಜ ಶರಣರನ್ನು ಅನುಸರಿಸಿದರೆ ಹೆಣ್ಣು ಗೌರವದಿಂದ ಬದುಕಲು ಸಾಧ್ಯವಿದೆ. ಉಡುತಡಿ ಸೇರಿದಂತೆ ಎಲ್ಲ ಶರಣರ ಸ್ಮಾರಕಗಳನ್ನು ಅಭಿವೃದ್ಧಿಪಡಿಸಬೇಕು. ಅಕ್ಕಮಹಾದೇವಿಯ ಜೀವನ ಸಂದೇಶಗಳು ಭಾರತದಲ್ಲಿ ಪಠ್ಯ ವಾಗಬೇಕು ಎಂದು ಒತ್ತಾಯಿಸಿದರಲ್ಲದೆ ಅಕ್ಕನ ವ್ಯಕ್ತಿತ್ವವನ್ನು ತಮ್ಮ ಬಾಲ ಭಾಷೆಯಲ್ಲಿ ಅರುಹಿದರು.

ಇದಕ್ಕೂ ಮುನ್ನ ಜಯ ನಗರದ ಮಹಿಳಾ ವಚನೋತ್ಸವ ಸಮಿತಿ ವತಿಯಿಂದ ಮಹಾದೇವಿಯಕ್ಕಗಳ ಭಾವಚಿತ್ರದ ಮೆರವಣಿಗೆ ಜರುಗಿತು.

ಸ್ವಾಗತ ಸಮಿತಿ ಕಾರ್ಯದರ್ಶಿ ಅನಸೂಯಾ ನಡಕಟ್ಟಿ, ಸ್ವಾಗತ ಸಮಿತಿ ಗೌರವಾಧ್ಯಕ್ಷೆ ಶರಣಮ್ಮ ಕಲಬುರ್ಗಿ, ಕಾರ್ಯಾಧ್ಯಕ್ಷೆ, ಸಂಚಾಲಕಿ ಡಾ. ಜಯಶ್ರೀ ದಂಡೆ, ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ವೇದಿಕೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here