ಬಡ್ಡಿ ರಹಿತ ವ್ಯವಹಾರವು ಎಲ್ಲರಿಗೂ ಸಹಾಯವಾಗಲಿ: ಮೊಹ್ಮದ್ ಯುಸೂಫ್ ಕುನ್ನಿ

0
29

ಬೀದರ್: ಕಾರುಣ್ಯ ಸೌಹಾರ್ದ ಸಹಾಕರಿ ಸಂಘದಿಂದ ಕೇವಲ ಮುಸ್ಲಿಂ ಸಮುದಾಯಕಕ್ಕೆ ಅಲ್ಲ ಎಲ್ಲ ವರ್ಗಗಕ್ಕೂ ಬಡ್ಡಿ ರಹಿತ ವ್ಯವಹಾರ ಎಲ್ಲರಿಗೂ ಸಹಾಯವಾಗಲಿ ಎಂಬ ಉದ್ದೇಶದಿಂದ ಸಂಘ ಆರಂಭಿಸಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಹ್ಮದ ಯುಸೂಪ್ ಕುನ್ನಿ ಅವರು ತಿಳಿಸಿದರು.

ಶನಿವಾರ ನಗರದ ಮಮತಾಜ್ ಫಂಕ್ಷನ್ ಹಾಲ್ನಲ್ಲಿ ಬೀದರ್ ಕಾರುಣ್ಯ ಸೌಹಾರ್ದ ಸಹಕಾರ ಸಂಘದ 7ನೇ ಸಾಮಾನ್ಯ ಸಬೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನ ಸಮಾಜದಲ್ಲಿ ಯಾರು ಕೂಡ ಬಡ್ಡಿ ರಹಿತ ವ್ಯವಹಾರ ನಡೆಸಲು ತಯ್ಯಾರಿಲ್ಲ. ಆದರೆ ನಮ್ಮ ಬ್ಯಾಂಕನ್ನು ಎಲ್ಲ ವರ್ಗದವರನ್ನು ಇದರಡಿ ಬಳಸಿಕೊಂಡು ಇದನ್ನು ಹೇಗೆ ನಡೆಸಬಹುದು ಎಂಬುದನ್ನು ತೊರಿಸಿ ರಾಜ್ಯದಲ್ಲಿಯೇ ಮಾದರಿ ಸಂಘ ಅಗುವತ್ತ ದಾಪುಗಾಲು ಇಟ್ಟಿದೆ ಎಂದರು.

Contact Your\'s Advertisement; 9902492681

ಪ್ರತಿ ದಿನ ಬೀದರ್ನಲ್ಲಿ 10 ಲಕ್ಷ ರು. ಸಂಗ್ರಹವಾಗುತ್ತದೆ ಎಂದರೆ ಇದು ಸಣ್ಣ ಕೆಲಸವಲ್ಲ. ಮಹಾರಾಷ್ಟ್ರದ ಪರಭಣಿ ಸಂಘದ ನಂತರ ಬೀದರ್ ಸಂಘವು ಪ್ರಭಾವಿ ಸಂಘವಾಗಲಿದೆ. ಇದಕ್ಕೆ ಇಲ್ಲಿನ ಸಂಘದ ಸದಸ್ಯರನ್ನು ಹೆಚ್ಚಳ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಸೌಹಾರ್ದ ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ವೀರಶೆಟ್ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ 150 ಸಂಘಗಳು ನಡೆಯುತ್ತಿವೆ ಆದರಲ್ಲಿ ಕಾರುಣ್ಯ ಸೌಹಾರ್ದ ಸಹಕಾರಿ ಸಂಘ ಅತ್ಯಂತ ಯಶಸ್ವಿ ಹಾಗೂ ಬಡ್ಡಿ ರಹಿತ ಸಂಘವಾಗಿ ಹೊರಹೊಮ್ಮಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದನ ಪ್ರಮುಖರಾದ ಅಕ್ಬರ್ ಅಲಿ ಅವರು ಮಾತನಾಡಿ, ಸಂಸ್ಥೆ ಬಡ್ಡಿ ರಹಿತ ವ್ಯವಹಾರ ಹೇಗೆ ನಡೆಸಬಹುದು ಎಂಬುದನ್ನು ತೋರಿಸಿದ್ದೇವೆ 7 ವರ್ಷ ನಿರಂತರ ಸೇವೆ ನೀಡುತ್ತ ಸುಮಾರು 73 ಕೋಟಿ ಗೂ.ಗಳ ವ್ಯವಹಾರ ನಡೆಸುತ್ತಿದೆ. ಪ್ರತಿ ದಿನ 10 ಲಕ್ಷ ರೂ.ಗಳು ಸಂಗ್ರಹವಾಗುತ್ತದೆ ಎಂದರೆ ದೊಡ್ಡ ಕೆಲಸವಾಗುತ್ತದೆ. ಬಡ್ಡಿ ವ್ಯವಹಾರ ಮಾಡುವವರಿಗೆ ದೇವರು ಕೂಡ ಸಹಾಯ ಮಾಡಲ್ಲ ಎಂದರು.

ಸಂಘದ ಜಿಲ್ಲಾಧ್ಯಕ್ಷ ರಫೀಕ್ ಅಹ್ಮದ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, 2018ರಲ್ಲಿ ಆರಂಭವಾದ ಸಂಘವು ಪ್ರತಿ ವರ್ಷ ತನ್ನ ವ್ಯವಹಾರ ಹೆಚ್ಚಳ ಮಾಡುತ್ತದೆ. ಇದೇ ಪ್ರಸಕ್ತ ಸಾಲಿನಲ್ಲಿ 2828 ಸದಸ್ಯರಿದ್ದು. 4.10 ಕೋಟಿ ರೂ.ಗಳ ಠೇವಣಿ ಇದೆ. ವಿವಿಧ ರೀತಿಯ 3 ಕೋಟಿ ರೂ.ಗಳ ಸಾಲ ನೀಡಲಾಗಿದೆ. 2023-2024ನೇ ಸಾಲಿನಲ್ಲಿ 5.28 ಲಕ್ಷ ರೂ.ಗಳ ಲಾಭಗಳಿಸಿದೆ ಎಂದು ತಿಳಿಸಿದರು. ಬಿಎಂಸಿ ಅಧ್ಯಕ್ಷ ಮಹ್ಮದ ಮುಜತಬಾಖಾನ್ ಅವರು ವಾರ್ಷಿಕ ವರದಿ ವಾಚನ ಮಾಡಿ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಶಹೀನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಅವರು ಮಾತನಾಡಿದರು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಆಸಿಫೆÇೀದ್ದಿನ್, ಎಂಡಿ ಜಾವೇದ್ ಅಹ್ಮದ್, ರಹಮತುಲ್ಲಾ ಖಾನ್, ಎಂಡಿ ವಿಖಾರೋದ್ದಿನ್, ಅಶ್ಪಾಖ್ ಅಹ್ಮದ್, ಮಹ್ಮದ್ ಅಕ್ರಮ್, ಅಲಿ, ಶೇಖರ್ ಚವ್ಹಾಣ್, ಸಬೀಹಾ ಖಾನಂ, ಆಸ್ಮಾ ಬಬೇಗಂ, ಮುಬಶೀರ್ ಶಿಂಧೆ, ಬ್ರಾಂಚ್ ಮ್ಯಾನೆಜರ್ ಕಮಿಟಿಯ ಮಹ್ಮದ್ ಮುಜಫರ್, ಶೋಯೆಬುಲ್ಲಾ ಖಾನ್ ತಾರೀಖ್‍ಮಹ್ಮದ ಮೋಜ್ಝಮ್ ಹಾಗೂ ಬ್ಯಾಂಕಿನ ನೂರಾರು ಗ್ರಾಹಕರು ಪಾಲ್ಗೊಂಡಿದ್ದರು.

ಸಂಘದ ಉಪಾಧ್ಯಕ್ಷ ಎಂಡಿ ಏಹತೇಶಾಮುಲ್ ಹಕ್ ಅವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here