ಗುರುಪಾದಲಿಂಗ ಶ್ರೀಗೆ ಯಳಸಂಗಿ ಭಕ್ತರ ಭಕ್ತಿ ಸಮರ್ಪಣೆ

0
102

ಆಳಂದ: ಬಬಲಾದ, ಯಳಸಂಗಿ ಮಠದ ಪೀಠಾಧಿಪತಿಗಳಾದ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಈಚೆಗೆ ಕೈಗೊಂಡಿದ್ದ ಅನುಷ್ಠಾನ ಮಹಾಮಂಗಲದ ಬಳಿಕ ಆಗಮಿಸಿದ್ದ ಶ್ರೀಗಳನ್ನು ತಾಲೂಕಿನ ಯಳಸಂಗಿ ಗ್ರಾಮದ ಮಠದಲ್ಲಿ ಭಕ್ತಾದಿಗಳು ಗುರು ಸಮರ್ಪಣಾ ಕಾರ್ಯಕ್ರಮ ನೆರವೇರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.

ಮೊದಲಿಗೆ ನವ ಬಂಡಿ ಉತ್ಸವದ ಮೂಲಕ ಶ್ರೀಗಳನ್ನು ಪ್ರಮುಖ ರಸ್ತೆಗಳ ಮೂಲಕ ಶ್ರೀಮಠದ ವರೆಗೆ ಅದ್ಧೂರಿಯಾಗಿ ಸ್ವಾಗತಿಸಿದ ಭಕ್ತಾದಿಗಳು ನಂತರ ವೇದಿಕೆಯ ಧಾರ್ಮಿಕ ಸಮಾರಂಭದಲ್ಲಿ ಶ್ರೀಗಳನ್ನು ಗುರು ಭಕ್ತಿ ಸಮರ್ಪಿಸಿದರು.

Contact Your\'s Advertisement; 9902492681

ಕಾರ್ಯಕ್ರಮ ಉದ್ಘಾಟಿಸಿದ ಚಿಂಚನಸೂರ ಕಲ್ಮಠದ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು, ಸಮ್ಮುಖ ವಹಿಸಿದ್ದ ಮಾಡಿಯಾಳ ಒಪ್ಪತ್ತೇಶ್ವರ ಮಠದ ಮರುಳಸಿದ್ಧ ಮಹಾಸ್ವಾಮಿಗಳು, ಗ್ರಾಮದ ಸಿದ್ಧರೂಢ ಮಠದ ಶ್ರೀ ಪರಮಾನಂದ ಮಹಾಸ್ವಾಮಿಗಳು, ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಮಠದ ಅಭಿನವ ಶಿವಲಿಂಗ ಮಹಾಸ್ವಾಮಿಗಳ ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಇಂಜಿನಿಯರ್ ಎಸ್.ಎಸ್. ಪಾಟೀಲ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡಲು ಮಠಾಧೀಶರ ಪಾತ್ರ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಭಕ್ತರಿಗೆ ದುಶ್ಚಟಗಳಿಂದ ದೂರವಿರುವಂತೆ ಮಾರ್ಗದರ್ಶನ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ಶಂಕ್ರಪ್ಪ ಯಲ್ದೆ, ಚಂದ್ರಕಾಂತ ಕೆವಂಟಗಿ, ಶರಣು ಮಾಂಗ, ಮಂಜುನಾಥ ಅಕ್ಕಲಕೋಟ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here