ಸುರಪುರ: ರಾಜ್ಯದಲ್ಲಿರುವ ಸಿವಿಲ್ ಗುತ್ತಿಗೆದಾರರ ಸಮಸ್ಯೆಗಳಿಗೆ ಸದಾಕಾಲ ಧ್ವನಿಯಾಗಿದ್ದ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಕೆಂಪಣ್ಣನವರ ನಿಧನ ದಿಂದ ಹೋರಾಟದ ಧ್ವನಿ ಮೌನವಾಗಿದೆ ಎಂದು ತಾಲೂಕ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿದರು.
ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ತಾಲೂಕ ಗುತ್ತಿಗೆದಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ದಿ.ಡಿ.ಕೆಂಪಣ್ಣ ಅವರ ನಿಧನ ದಿಂದಾಗಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗುತ್ತಿಗೆದಾರ ಅಸ್ಲಾಂ ಮಾಸ್ಟರ್ ಮಾತನಾಡಿ,ಯಾವುದೇ ಸರಕಾರಗಳಿರಲಿ ರಾಜ್ಯದಲ್ಲಿನ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗಾಗಿ ಡಿ.ಕೆಂಪಣ್ಣನವರು ಗಟ್ಟಿ ಧ್ವನಿ ಎತ್ತುತ್ತಿದ್ದರು,ಅಲ್ಲದೆ ಗುತ್ತಿಗೆದಾರರಿಗೆ ಆಗುವ ಸಮಸ್ಯೆಗಳಿಗಾಗಿ ಸದಾ ಸ್ಪಂಧಿಸುತ್ತಿದ್ದ ಅವರು ಇಂದು ನಮ್ಮನ್ನಗಲಿರುವುದು ರಾಜ್ಯದಲ್ಲಿನ ಗುತ್ತಿಗೆದಾರರಿಗೆ ದೊಡ್ಡ ನಷ್ಟವುಂಟಾಗಿದೆ ಎಂದರು.
ಸಭೆಯ ಆರಂಭದಲ್ಲಿ ದಿ.ಡಿ.ಕೆಂಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.
ಸಭೆಯಲ್ಲಿ ಹಿರಿಯ ಗುತ್ತಿಗೆದಾರರಾದ ಡಾ.ಸುರೇಶ ಸಜ್ಜನ್,ಎಸ್.ಎನ್.ಪಾಟೀಲ್,ಪ್ರಕಾಶ ಗುತ್ತೇದಾರ,ಪ್ರಕಾಶ ಸಜ್ಜನ್,ಹಿರಿಯ ನ್ಯಾಯವಾದಿ ಬಸವಲಿಂಗಪ್ಪ ಪಾಟೀಲ್,ಮಹೇಶ ಜಾಗಿರದಾರ್,ವಿಶ್ವರಾಧ್ಯ ಸತ್ಯಂಪೇಟೆ,ಕಾಳಪ್ಪ ಕವಾತಿ,ವೆಂಕಟೇಶ,ಜಗದೀಶ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.