ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

0
112

ಚಿಂಚೋಳಿ; ತಾಲೂಕಿನಲ್ಲಿ ಎಸ್.ಸಿ.ಪಿ- ಟಿ ಎಸ್ ಪಿ ವಿಶೇಷ ಘಟಕ ಯೋಜನೆ ಅಡಿಯಲ್ಲಿನ ಅನುದಾನವನ್ನು ಪರಿಶಿಷ್ಟ ಜಾತಿ ಜನರು ವಾಸಿಸುವ ಬಡಾವಣೆಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಸೇರಿಂದ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಇಲ್ಲಿನ ತಹಸೀಲ್ ಕಾರ್ಯಾಲಯದ ಮುಂದೆ ದಲಿತ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು.

ಪ್ರತಿಯೊಂದು ಗ್ರಾಮಗಳಲ್ಲಿರುವ ಕೃಷಿ ರಹಿತ ಪರಿಶಿಷ್ಟ ಜಾತಿಯ ಜನರು ಸಲ್ಲಿಸಿದ ಫಾರ್ಮ್ ನಂಬರ್ 54 ನ್ನು ಪರಿಶೀಲನೆ ಮಾಡಿ ಅವರಿಗೆ ಜಮೀನು ವಿತರಣೆ ಮಾಡಬೇಕು ಮತ್ತುಚಿಮ್ಮನಚೋಡ ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಗೆ ಹೋಗುವ ಮುಖ್ಯರಸ್ತೆಯಲ್ಲಿ ಬರುವ ಲಂಡೇನ ನಾಲದ ಬ್ರೀಡ್ಜನ್ನು ಮೇಲ್ಪಟಕ್ಕೇರಿಸುವಂತೆ ಹಲವಾರು ಬಾರಿ ಮನವಿ ಮಾಡಿದರು.

Contact Your\'s Advertisement; 9902492681

ಸ್ಪಂದಿಸಿದ ತಾಲೂಕಾಡಳಿತದ ನಿರ್ಲಕ್ಷ್ಯತನಕ್ಕೆ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ದಲಿತ ವ್ಯಕ್ತಿ ಮನೆಗೆ ಹೋಗುವಾಗ ನೀರಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಬಾಬು ನೂಲ್ಕರ ರವರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಮತ್ತು ದೋಟಿಕೋಳ ಕನಕಪೂರ ಗಣಾಪೂರ ತಾಡಪಳ್ಳಿ ಪಸ್ತಪೂರ ಗಂಜಗಿರಿ ಮುಂತಾದ ಗ್ರಾಮಗಳಲ್ಲಿ ಅರ್ದಕ್ಕೆ ನಿಂತಿರುವ ಡಾ ಬಿ ಆರ್ ಅಂಬೇಡ್ಕರ ಭವನ ಕಾಮಗಾರಿಗಳು ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣರಾಗುತ್ತಿರುವುದನ್ನು ಕಂಡು ಹಿಡಿದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತೆ ಸೂಚನೆ. ತಾಲೂಕಿನ ಪ್ರತಿಯೊಂದು ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ತಡೆಯಬೇಕು ಎಂದರು.

ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಮತ್ತು ಕೆಲವೊಂದು ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಬಲಪಡಿಸಬೇಕು, ಬಿ.ಸಿ ಎಮ್. ಮೈನಾರಿಟಿ.ಸಮಾಜ ಕಲ್ಯಾಣ ಇಲಾಖೆಗಳ ವತಿಯಿಂದ ನಡೆಯುತ್ತಿರುವ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಮಾಸಪತ್ರಿಕೆ ಮತ್ತು ಕನ್ನಡ ಇಂಗ್ಲಿಷ್ ದಿನಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಐನೋಳ್ಳಿ ಮತ್ತು ಹೋಡೆಬೀರನಳ್ಳಿ ಗ್ರಾಮದ ಪರಿಶಿಷ್ಟ ಬಡಾವಣೆಗಳಲ್ಲಿ ಸಾಮೂಹಿಕ ಮಹಿಳಾ ಶೌಚಾಲಯ, ಪ್ರತಿಯೊಂದು ಗ್ರಾಮಗಳಲ್ಲಿ ಜೆಜೆಎಮ್ ಅಡಿಯಲ್ಲಿ ನಡೆದ ಕಾಮಗಾರಿಗಳಿಂದ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ರಸ್ತೆ ಮದ್ಯ ಅಗೆದಿರುವುದು ಮುಚ್ಚದೆಯಿರುವುದರಿಂದ ಸಾರ್ವಜನಿಕರಿಗೆ ವಯೋವೃದ್ದರಿಗೆ ಓಡಾಡಲು ಸಮಸ್ಯೆಯಾಗುತ್ತಿರುವುದರಿಂದ ಕೂಡಲೆ ಸಮಸ್ಯೆ ಬಗೆಹರಿಸಬೇಕು, ಸ್ಥಳೀಯ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಸಮಯಕ್ಕೆ ಅನುಗುಣವಾಗಿ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಪತ್ರ ಸಲ್ಲಿಸುವ ಮೂಲಕ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಗನ್ನಾಥ ಡಾಕ್ಟರ್ ರಾಮರಾವ್ ಗಾರಂಪಳ್ಳಿ ಸತೀಷ್ ದೇಗಲ್ಮಡಿ ವಿಠಲ್ ಟಿಕೆ ಗೌತಮ್ ಭೋಮ್ನಳ್ಳಿ ರಾಜಶೇಖರ ಹೋಸಮನಿ ಪಂಡರಿ ಲೋಡ್ಡನೂರ್ ಗೋಪಾಲ ಗಾರಂಪಳ್ಳಿ ಉಲ್ಲಾಸ ಕೆರೊಳ್ಳಿ ಮಾರುತಿ ಗಂಜಗಿರಿ ಅಭಿಜಿತ್ ಕುಮಾರ್ ಕೊರವಿ ಮಹೇಶ್ ಕೆಳಕೇರಿ ಚೇತನ್ ನಿರಾಳ್ಕರ್ ಮಹೇಶಕುಮಾರ  ಉಮೇಶ್ ದೋಟಿಕೋಳ ಕಾಶಿರಾಂ ದೇಗಲ್ಮಡಿ ನಾಗಶೇನ್ ಬೊಮ್ಮನಳ್ಳಿ ಬಾಬುರಾವ್ ಕಳಸ್ಕರ ಅಮೃತರಾವ್ ತಾಜಲಾಪೂರ ದೀಲಿಪಕುಮಾರ ಬೊಮ್ಮನಳ್ಳಿ ಪ್ರವೀಣ ಮೇತ್ರಿ ರಾಜು ಚಿಮ್ಮಾಯಿದಲಾಯಿ  ಮೌನೇಶ್ ಮುಸ್ತರಿ ರವಿಕುಮಾರ ರುಸ್ತಂಪೂರ ಮನೋಜ್ ಗಾರಂಪಳ್ಳಿ  ಮುಂತಾದವರು ಉಪಸ್ಥಿತರಿದ್ದರು,

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here