ಕಲಬುರಗಿ : 2024-25ನೇ ಸಾಲಿನ ದಸರಾ ಸಿಎಂ ಕಪ್ ಕ್ರೀಡಾಕೂಟದ ವಿಭಾಗ ಮಟ್ಟದ ಈಜು ಸ್ಪರ್ಧೆಗೆ
ಎಸ್‌ಬಿಆರ್ ಶಾಲೆಯ ವಿದ್ಯಾರ್ಥಿ ಬಸವಪ್ರಸಾದ್ ಪಾಟೀಲ್ ಆಯ್ಕೆಯಾಗಿದ್ದಾನೆ.
ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಈಜುಕೋಳದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಬಸವಪ್ರಸಾದ ಪಾಟೀಲ್ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್, 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಹಾಗೂ 200 ಮೀಟರ್ ಇಡಿಜುವಲ್ ಮಿಡ್ಲೇ ನಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.