ಯಾದಗಿರಿ; ಶಹಾಪೂ ಪಟ್ಟಣದ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸದೆ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ ಬೆದರಿಕೆವೊಡುತ್ತಿರುವ ನಿಲಯದ ಮೇಲ್ವಿಚಾರಕರವರನ್ನು ಅಮಾನತುಗೊಳಿಸಿ ಬೇರೆಯೊಬ್ಬರನ್ನು ನೇಮಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ನಗರದ ತಹಸಿಲ್ದಾರ್ ಕಾರ್ಯಾಲಯ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಲಕ್ಷ್ಮಣ ಹಳಿಸಗರ , ಅಯ್ಯಪ್ಪ ಗೊಂದೆನೂರ್ , ಶೇಖರ್ ಬಡಿಗೆರ್ , ನಿಂಗಪ್ಪ ಸತ್ಯಂಪೇಟೆ,ಬಸವರಾಜ್ ಚಿಪ್ಪಾರ್ , ವಿಶ್ವ ಬೀರನೂರ,ಹುಸೇನ್ ಕೊಂಗಂಡಿ,ಅಮರೇಶ ಬೂದನೂರ್ , ವಿಶ್ವ ಪರಸಾಪೂರ್ , ಮೌನೇಶ್ ಜಾರಕಿಹೊಳಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.