ಕಲಬುರಗಿ: ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶ ಇದೇ ಮೇ ತಿಂಗಳ ಮೊದಲ ವಾರದಲ್ಲಿ ಪ್ರಕಟಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ.
ಪೇಪರ್ ವ್ಯಾಲಿವೇಷನ್ ಮುಕ್ತಾಯಗೊಂಡಿದ್ದು, ಸಣ್ಣಪುಟ್ಟ ತಪ್ಪುತಡಿಗಳ ತಿದ್ದುವುದು, ತಾಂತ್ರಿಕ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಒಂದು ವಾರದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೇ ಮೊದಲ ವಾರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.ಮಂಡಳಿ ಮಧ್ಯಾಹ್ನ ಫಲಿತಾಂಶ ಪ್ರಟಿಸಿದ ಬಳಿಕ ಈ ಕೇಳಗಿನ ವೆಬ್ಸೈಟ್ karresults.nic.in ಹೋಗಿ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಫಲಿತಾಂಶಗಳ ವೆಬ್‌ಸೈಟ್ ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದೇ ತಿಂಗಳು ಪ್ರಕಟಿಸಿದ್ದ ಪಿಯು ಫಲಿತಾಂಶ ಪಟ್ಟಿಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದರು. ಹೀಗಾಗಿ ಎಸ್ಸೆಸ್ಸೆಲ್ಸಿಯ ಫಲಿತಾಂಶ ಪಟ್ಟಿಯಲ್ಲಿ ಯಾರದು ಮೇಲುಗೈ ಸಾಧಿಸಲಿದ್ದಾರೆ(ಹುಡುಗರು ಅಥವಾ ಹುಡುಗಿಯರು) ಎಂಬ ಕುತೂಹಲ ಹೆಚ್ಚಿದೆ.