ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ ದಿನ ಬಳಕೆ ವಸ್ತುಗಳಾದ ಹೆಣ್ಣು ಮಕ್ಕಳಿಗೆ ಸಿರೇ, ಗಂಡು ಮಕ್ಕಳಿಗೆ ಪ್ಯಾಂಟ್, ಶರ್ಟ, ಮಕ್ಕಳಿಗೆ ಪ್ಯಾಂಟ್ ಶರ್ಟ ಹಾಗೂ ಆಟದ ಸಾಮಗ್ರಿಗಳು ಹಾಗೂ ಇನ್ನೀತರ ದಿನನಿತ್ಯ ಮನೆಯ ಬಳಕೆಯಾಗುವ ಸಾಮಾನುಗಳು ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ಅಧ್ಯಕ್ಷೆ ಸುನಿತಾ ಬೋರಾ, ಕಾರ್ಯದರ್ಶಿ ಸಂತೋಷಿ ನೋಗ್ಜಾ, ಡೈರೆಕ್ಟ ಸ್ವಾತಿ ಪವಾರ, ಪಾಸ್ಟ್ ಪ್ರೇಸಿಡೆಂಟ್ ಪಲ್ಲವಿ ಮುಕ್ಕಾ, ಸಪ್ನಾ ದೇಶಪಾಂಡೆ, ವಿಜಯಲಕ್ಷ್ಮೀ ರೆಡ್ಡಿ, ಪಲ್ಲವಿ ಕೋಠಾರಿ, ತೃಪ್ತಿ ಶಹಾ, ಮಾನಸಾ ಸೋನಿ, ವಿಜಯಶ್ರೀ ಮುಕ್ಕಾ, ಮನಿಷಾ ಜೈನ್, ತನಿಯಾತ ಬಾನೋ, ಪ್ರೀಯಾ ವಿರೇಶ, ಸಾರಿಕಾ ರಂಗದಳ, ಅಜನಾ ಶಿರವಾಳ, ರೋಷನಿ ಶಹಾ, ಕಾಂಚನಾ ಮಂದಕನಳ್ಳಿ ಹಾಗೂ ರೋಟರಿ ಕೋ-ಆರ್ಡಿನೇಟರ್ ಮಲ್ಲಿಕಾರ್ಜುನ ಬಿರಾದಾರ, ವಕೀಲರಾದ ಆದೇಶ ಬೋರಾ ಹಾಗೂ ಗುಲಬರ್ಗಾ ಸಮಸ್ತ ದಾನಿಗಳು ಕಾರ್ಯಕ್ರಮಕ್ಕೆ ತಮ್ಮ ಅನುಗುಣವಾಗಿ ಸಹಾಯ ಹಸ್ತ ನೀಡಿದ್ದರಿಂದ ನಿರ್ಗತಿಕ ಹಾಗೂ ಕಡು-ಬಡವರಿಗೆ ಸಹಾಯ ಮಾಡಲಾಯಿತು.