ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಕೊಡುಗೆ ಅತ್ಯಮೂಲ್ಯ ಎಂದು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಬಣಗಾರ ಫೌಂಡೇಷನ್ ಹಾಗೂ ಜಾಗೃತಿ ಸಮಾಜ ಸೇವಾ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆ,ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡಿ ಚರಿತ್ರೆಯನ್ನು ತನ್ನದೇ ಆದ ಹಿರಿಮೆಯನ್ನು ಹೊಂದಿರುವ ಸುರಪುರ ಬ?ನಾಡಿನಲ್ಲಿ ಧಾರ್ಮಿಕ,ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸಾಕಷ್ಟು ಜನರು ಹೆಸರು ಮಾಡಿದ್ದಾರೆ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗನ್ನು ಕೈಗೊಳ್ಳುವ ಮೂಲಕ ಸಂಘ ಸಂಸ್ಥೆಗಳು ಈ ಭಾಗದಲ್ಲಿ ಸಾಧಕರು ಹಾಗೂ ಸಾಹಿತಿಗಳನ್ನು ಗುರುತಿಸುವ ಮೂಲಕ ಮತ್ತಷ್ಟು ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.
ಸಾಹಿತಿ ಶಿವಲೀಲಾ ಮುರಾಳ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಪ್ರತಿಯೊಬ್ಬರ ಜೀವನದಲ್ಲಿ ನಮ್ಮ ಜನ್ಮ ನೀಡಿದ ನಮ್ಮ ತಪ್ಪುಗಳನ್ನು ತಿದ್ದಿ ತೀಡುವ ತಾಯಿ ಮೊದಲ ಗುರುವಾಗಿದ್ದರೆ ಅಕ್ಷರ ಜ್ಞಾನ ಕಲಿಸಿದ ಶಿಕ್ಷಕರು ಎರಡನೇ ಗುರುಗಳು ಹಾಗೂ ವಚನಕಾರರು ಹೇಳಿರುವಂತೆ ಅರಿವೇ ಗುರು ಮೂರನೇ ಗುರುವಾಗಿದ್ದರೆ ಎಂದು ಹೇಳಿದರು.
ಇಂದು ಮಕ್ಕಳು ಮೊಬೈಲ್ ಹಾವಳಿಯಿಂದಾಗಿ ದಾರಿ ತಪ್ಪುತ್ತಿದ್ದಾರೆ ಇದಕ್ಕೆ ಪಾಲಕರು ಕೂಡಾ ಜವಾಬ್ದಾರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ಅವರು ತಂದೆತಾಯಿಂದಿರು ನಮ್ಮ ಮಕ್ಕಳ ಕಡೆಗೆ ಗಮನಹರಿಸಬೇಕಾಗಿದೆ ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಭವಿಷ್ಯದಲ್ಲಿ ಮಕ್ಕಳು ಉತ್ತಮ ಪ್ರಜೆಗಳಾಗಬೇಕಾದರೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಬೆಳೆಸಬೇಕು ಎಂದು ಹೇಳಿದರು.
ಬಿಇಓ ಯಲ್ಲಪ್ಪ ಕಾಡ್ಲೂರ ಮಾತನಾಡಿ ಸಮಾಜದಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನ ನೀಡಲಾಗಿದೆ ಇದನ್ನು ನೋಡಿಯೇ “ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಎಂಬ ಮಾತನ್ನು ದಾಸರು,ಶರಣರು ತಮ್ಮ ರಚನೆಗಳಲ್ಲಿ ಗುರುಗಳಿಗೆ ಇರುವ ಸ್ಥಾನವನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸಾಹಿತಿ ಶ್ರೀನಿವಾಸ ಜಾಲವಾದಿ,ನಿವೃತ್ತ ಪ್ರಾಂಶುಪಾಲ ಸುವರ್ಣಾ ಅರ್ಜುಣಗಿ ಹಾಗೂ ಸಾನಿಧ್ಯ ವಹಿಸಿದ್ದ ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು. ಶಂಕ್ರಪ್ಪ ಬಣಗಾರ ಅಧ್ಯಕ್ಷತೆ ವಹಿಸಿದ್ದರು ಬಸವರಾಜ ಜಮದ್ರಖಾನಿ,ಸಾಯಬಣ್ಣ ಪುರ್ಲೆ,ಗಂಗಾಧರ ರುಮಾಲ,ಅಮೃತಲಾಲ ಜೈನ,ಬಸವರಾಜ ಮಾಲಿಪಾಟೀಲ,ಶರಣಯ್ಯಸ್ವಾಮಿ ಬ್ರಹ್ಮಮಠ ಮಸ್ಕಿ,ಜಾಗೃತಿ ಸಮಾಜದ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ ಮಾರ್ಗೆಲ್ ಹಾಗೂ ಬಣಗಾರ ಫೌಂಡೇಷನ್ ಅಧ್ಯಕ್ಷ ವಸಂತಕುಮರ ಬಣಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೊಡ್ಡ ಮಲ್ಲಿಕಾರ್ಜುನ ಉದ್ಧಾರ ಪ್ರಾಸ್ತಾವಿಕವಾಗಿ ಮಾತನಾಡಿದರು ಅಂಬ್ರೇಶ ಚಿಲ್ಲಾಳ ನಿರೂಪಿಸಿದರು ಹಾಗೂ ಅನ್ವರ ಜಮಾದಾರ ವಂದಿಸಿದರು.
ಸಾಧಕರಿಗೆ ಸನ್ಮಾನ: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವೆಂಕಟೇಶ್ವರ ಸುರಪುರಕರ,ಕನಕಪ್ಪ ವಾಗಣಗೇರಾ,ಸ್ವಾಮಿ ನೀಲಕಂಠಯ್ಯ, ಬಸವರಾಜೇಶ್ವರಿ ಹೂಗಾರ,ಬೀಬಿ ಫಾತೀಮಾ ಬ್ಯಾಕೋಡ,ಅಲಕನಂದಾ ಐಜಿ,ವೀಣಾ ಅಂಬೂರೆ ಹಾಗೂ ಧೀರೇಂದ್ರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಕವಿಗೋಷ್ಠಿ: ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಸಾಹಿತಿಗಳಾದ ಹೆಚ್.ರಾಠೋಡ,ಶರಣಗೌಡ ಪಾಟೀಲ ಜೈನಾಪುರ,ಶ್ರೀಧರ ಮಸ್ಕಿ,ವಿದ್ಯಾಕುಮಾರ ಬಡಿಗೇರ,ದೇವಿಂದ್ರ ಕರಡಕಲ್, ಶಶಿಧರಸ್ವಾಮಿ ಉದ್ಭಾಳ,ಶರಣಮ್ಮ ದೊಡ್ಡಮನಿ ಹಾಗೂ ಲಲಿತಾ ಯಾದವ್ ಕವನ ವಾಚಿಸಿದರು.