ಕಾವ್ಯ ದೊಂಬರಾಟವಲ್ಲ: ಕಾವ್ಯ ಸಂಸ್ಕೃತಿ ಯಾನಕ್ಕೆ ಚಾಲನೆ

0
106

ಕಲಬುರಗಿ: ‘ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.‌ಬಸವರಾಜ ಸಾದರ ಅಭಿಪ್ರಾಯ ವ್ಯಕ್ತಪಡಿಸಿದರು.

ರಂಗ ಮಂಡಲ ಬೆಂಗಳೂರು, ರಾಷ್ಟ್ರಕೂಟ ಸಾಂಸ್ಕೃತಿಕ ಪ್ರತಿಷ್ಠಾನಗಳ ಸಹಯೋಗದಲ್ಲಿ ಐಡಿಯಲ್ ಫೈನ್ ಆರ್ಟ್ಸನ ಕಲಾ ನಿಕೇತನ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತೊಗರಿ ನಾಡಿನಲ್ಲಿ ಜನರೆಡೆಗೆ ಕಾವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ದೀಪದ ಹಾಗೆ ದೀಪಕ್ಕೆ ದಿಕ್ಕಿನ ಪರಿವೇ ಇರುವುದಿಲ್ಲ. ಜಗತ್ತಿನಲ್ಲಿ ಇಂದು ಮದ್ದು ಗುಂಡುಗಳ ಸಪ್ಪಳ ಕೇಳಿ ಬರುತ್ತಿದ್ದು, ಜನರ ನೋವಿಗೆ ಸ್ಪಂದಿಸುವ, ಮದ್ದಾಗುವ, ಮುಲಾಮು ಹಚ್ವುವ ಕೆಲಸ ಆಗಲಿ ಎಂದು ತಿಳಿಸಿದರು.

Contact Your\'s Advertisement; 9902492681

ವಚನಕಾರರ ಮಾತಿನಂತೆ ಕಾವ್ಯಕ್ಕೆ ಜ್ಯೋತಿ ಮುಟ್ಟಿ ತಾ ಜ್ಯೋತಿಯಾಗುವ ಶಕ್ತಿ ಇದೆ.‌ ಕಾವ್ಯ ಖಡ್ಗವಾಗುವುದರ ಜೊತೆಗೆ ಕಾವ್ಯ ಬದುಕಾಗಬೇಕು ಎಂದು ಅವರು ಕರೆ ನೀಡಿದರು.

ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ. ಕಾಶೀನಾಥ ಅಂಬಲಗೆ ಮಾತನಾಡಿ, ಕವಿಯಾದವರು ಕೇವಲ ಶಬ್ದಗಳನ್ನು ಜೋಡಿಸಿ, ಪೋಣಿಸಿ ಹೆಣೆದ ಕಾವ್ಯ ಆಗುವುದಿಲ್ಲ. ಕಾವ್ಯ ತನ್ನ ಕಾಲಘಟ್ಟದ ಸಂಘರ್ಷಗಳನ್ನು ಚಿತ್ರಿಸಬೇಕು ಎಂದರು.

ಕಾವ್ಯಕ್ಕೆ ಯುದ್ಧ ನಿಲ್ಲಿಸುವ ತಾಕತ್ತು ಇದೆ. ಹೀಗಾಗಿ ಕಾವ್ಯ ಬೆಳಕಾಗಬೇಕು, ಕಾವ್ಯ ಬೆಳದಿಂಗಳಾಗಬೇಕು. ಶರಣರ ಸಮತಾ ಯೋಗದ ದೀಕ್ಷೆ ಕೊಡಬೇಕು ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಡಾ. ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಜಿ.ಎನ್. ಮೋಹನ ಮಾತನಾಡಿದರು. ಹಿರಿಯ ರಂಗಕರ್ಮಿ ಕೆ.‌ಗುಂಡಣ್ಣ ವೇದಿಕೆಯಲ್ಲಿದ್ದರು. ಮಹಿಪಾಲರೆಡ್ಡಿ ಮುನ್ನೂರ್ ನಿರೂಪಿಸಿದರು. ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿದರು. ಕಿರಣ ಪಾಟೀಲ ಪ್ರಾರ್ಥನೆಗೀತೆ ಹಾಡಿದರು.

ಕಾವ್ಯ ಮನುಷ್ಯನಿಗೆ ಆತ್ಮಸ್ಥೈರ್ಯ, ಚೈತನ್ಯ ತುಂಬುತ್ತದೆ. ಕಾವ್ಯ ಮತ್ತು ರಂಗಭೂಮಿಯಿಂದ ನೋವು ನಿವಾರಣೆಯಾಗುತ್ತದೆ. ಈ ಕಾವ್ಯ ಯಾನ ಈಗಾಗಲೇ 3 ಜಿಲ್ಲೆಗಳನ್ನು ದಾಟಿದ್ದು, ಮಂಡ್ಯದಲ್ಲಿ ನಡೆಯುವ 10ನೇ ಕಾವ್ಯಯಾನ ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲಾಧ್ಯಕ್ಷರ ಸಮಾಗಮ ಕಾರ್ಯಕ್ರಮ ನಡೆಯಲಿದೆ. -ಡಿ.ಬಿ. ಮಲ್ಲಿಕಾರ್ಜುನ ಸ್ವಾಮಿ, ಕಾವ್ಯಯಾನದ ರೂವಾರಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here