ರಾಜ್ಯೋತ್ಸವ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯ ಸಂಘ 82ನೇ ನಾಡಹಬ್ಬ

0
25

ಸುರಪುರ: ರಾಜ್ಯದಲ್ಲಿಯೇ ಅತ್ಯುತ್ತಮವಾದ ಕನ್ನಡ ಸಾಹಿತ್ಯ ಸಂಘ ಎಂದು ಸರಕಾರ ಗುರುತಿಸಿ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ,ಇದಕ್ಕೆ ಅನೇಕ ಮಹನಿಯರು ನೀಡಿದ ಕೊಡುಗೆ ಕಾರಣವಾಗಿದೆ ಎಂದು ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ ತಿಳಿಸಿದರು.

82ನೇ ನಾಡಹಬ್ಬ ಆಚರಣೆ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ನಮ್ಮ ಸಂಘಕ್ಕೆ ನಾಡಿನ ಹೆಸರಾಂತ ಸಾಹಿತಿಗಳು,ಚಿಂತಕರು,ಸಾಧಕರು ಭೇಟಿ ನೀಡಿದ್ದಾರೆ.ಅಲ್ಲದೆ ಪ್ರತಿ ವರ್ಷವೂ ನಾಡ ಹಬ್ಬದ ಆಚರಣೆ ಸಂದರ್ಭದಲ್ಲಿ ಅನೇಕ ಜನ ಹಿರಿಯ ಸಾಹಿತಿಗಳು,ಚಿಂತಕರನ್ನು ಕರೆಯಿಸಿ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದರು.

Contact Your\'s Advertisement; 9902492681

ಅಲ್ಲದೆ ರಾಜ್ಯ ಸರಕಾರ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ,ಅದನ್ನು ಸಂಘದ ಸಂಸ್ಥಾಪಕರಾಗಿದ್ದ ಬುದ್ಧಿವಂತ ಶೆಟ್ಟರ್ ಅವರು ಇದ್ದಾಗ ಕೊಡಬೇಕಿತ್ತು,ಸಂಘದ ಏಳಿಗೆಗೆ ಬುದ್ಧಿವಂತ ಶೆಟ್ಟರ್,ಶಾಂತಪ್ಪ ಬೂದಿಹಾಳ,ಡಾ.ಸುರೇಶ ಸಜ್ಜನ್ ಸೇರಿದಂತೆ ಅನೇಕರು ಶ್ರಮಿಸಿದ್ದಾರೆ ಎಂದರು.ಅಲ್ಲದೆ ಪ್ರತಿವರ್ಷದಂತೆ ಈ ವರ್ಷವೂ ನಾಡ ಹಬ್ಬದ ಅಂಗವಾಗಿ ಅಕ್ಟೋಬರ್ 3 ರಿಂದ 7ರ ವರೆಗೆ ದಿನಾಲು ಸಂಜೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಘದ ಪ್ರ.ಕಾರ್ಯದರ್ಶಿ ಮುದ್ದಪ್ಪ ಅಪ್ಪಾಗೋಳ ಮಾತನಾಡಿ,ಅಕ್ಟೋಬರ್ 3 ರಂದು ಬೆಳಿಗ್ಗೆ ಭುವನೇಶ್ವರಿ ದೇವಿಗೆ ಪೂಜೆ,ನಂತರ ಪ್ರಸಾದ ವಿತರಣೆ ನಡೆಯಲಿದೆ.ಸಾಯಂಕಾಲ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಯಂಕಣ್ಣ ಗದ್ವಾಲ್,ರಘುರಾಮ ಕಡಬೂರ,ನಾಡಹಬ್ಬ ಸಮಿತಿ ಅಧ್ಯಕ್ಷ ಗೋವಿಂದರಾಜ್ ಶಹಾಪೂರಕರ್,ಪ್ರಕಾಶ ಅಲಬನೂರ ಉಪಸ್ಥಿತರಿದ್ದರು.

ಉದ್ಘಾಟನೆ ಕಾರ್ಯಕ್ರಮ: ಅ.3 ಸಂಜೆ ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಲಿದ್ದು,ಗೌರವ ಅಧ್ಯಕ್ಷತೆಯನ್ನು ಕ.ರಾ.ಯದವ ಸಂಘದ ಉಪಾಧ್ಯಕ್ಷ ವಿಠ್ಠಲ್ ಯಾದವ್ ವಹಿಸುವರು,ವಿಶೇಷ ಆಹ್ವಾನಿತರಾಗಿ ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ ಭಾಗವಹಿಸಲಿದ್ದು,ಸಂಘದ ಅಧ್ಯಕ್ಷ ಸೂಗುರೇಶ ವಾರದ ಅಧ್ಯಕ್ಷತೆ ವಹಿಸುವರು,ಮುಖ್ಯ ಅತಿಥಿಗಳಾಗಿ ನ.ಯೋ.ಪ್ರಾ.ಅಧ್ಯಕ್ಷ ಪ್ರಕಾಶ ಗುತ್ತೇದಾರ,ಸಿಂಗಾಡೆ ಕನ್ಸ್ಟ್ರಕ್ಸನ್ ಮಾಲೀಕ ನಾರಾಯಣರಾವ್ ಸಿಂಗಾಡೆ,ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಕಮಲಾಕ್ಷ,ನ್ಯಾಯವಾದಿ ಹಣಮಂತಪ್ಪ ಗೋಗಿ ಉಪಸ್ಥಿತರಿರುವರು.ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುವುದು.ಕು.ಭೂಮಿಕಾ,ದೀಪಿಕಾ ಸ್ಥಾವರಮಠ ರಿಂದ ಸಂಗೀತ ಕಾರ್ಯಕ್ರಮ.
ಅ 4 ರಂದು ನಿವೃತ್ತ ವಿಶೇಷ ಆಹ್ವಾನಿತರಾಗಿ ಉಪನ್ಯಾಸಕ ವೇಣುಗೋಪಾಲ ನಾಯಕ ಜೇವರ್ಗಿ,ಗೌರವ ಅಧ್ಯಕ್ಷತೆ ಸಂಘದ ಗೌರವಾಧ್ಯಕ್ಷ ಶಾಂತಪ್ಪ ಬೂದಿಹಾಳ ವಹಿಸಲಿದ್ದು,ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುಭಾಷ ನಾಗಪ್ಪ ಬೋಡಾ ಅಧ್ಯಕ್ಷತೆ ವಹಿಸುವರು.

ಮಾಜಿ ನ.ಯೋ.ಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್ ಉಪಸ್ಥಿತರಿರುವರು,ಸಾಹಿತಿ ಸಿದ್ದರಾಮ ಹೊನ್ಕಲ್ ಉಪನ್ಯಾಸ ನೀಡುವರು,ಮುಖ್ಯ ಅತಿಥಿಗಳಾ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಇರುವರು.ವಿಶೇಷ ಅಭಿನಂದನೆ ಹಿರಿಯ ಸಾಹಿತಿ ಡಾ.ಅಲ್ಲಮಪ್ರಭು ಬೆಟ್ಟದೂರ,ಜಾನಪದ ಅಕಾಡೆಮಿ ಮಾ.ಅಧ್ಯಕ್ಷ ಟಾಕಪ್ಪ ಕಣ್ಣೂರ,ಲೋಹಿಯಾ ಪ್ರಕಾಶನದ ಡಾ:ಚನ್ನಬಸವಣ್ಣ,ಪತ್ರಕರ್ತ ಆನಂದ ಸೌದಿ,ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಹಾಗೂ ಉದ್ಯಮಿ ಮಲ್ಲಿಕಾರ್ಜುನ ಕಡೆಚೂರಗೆ,ಪತ್ರಕರ್ತ ಟಿ.ನಾಗೇಂದ್ರ,ಕೆಂಭಾವಿ ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ,ಸಾಹಿತಿ ಡಾ.ಪ್ರಭುರಾಜ್ ಬಳೂರಗಿ ಅವರಿಗೆ ಸನ್ಮಾನ.ಕೆಪಿಎಸ್ ಶಾಲೆ ತಿಮ್ಮಾಪುರ ಸಾಂಸ್ಕøತಿಕ ಕಾರ್ಯಕ್ರಮ.
ಅ.5 ಕನ್ನಡ ಸಾಹಿತ್ಯ ಸಂಘ ಸುರಪುರ ಅಧ್ಯಕ್ಷ ಬಸವರಾಜ ಜಮದ್ರಖಾನಿ ವಿಶೇಷ ಆಹ್ವಾನಿತರು,ವಚನ ಸಾಹಿತ್ಯ ಮತ್ತು ಕನ್ನಡ ವಿಷಯದ ಕುರಿತು ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಉಪನ್ಯಾಸ ನೀಡುವರು.

ಸಗರ ನಾಡಿನ ಶರಣರು ಕುರಿತು ಡಿ.ಎನ್.ಪಾಟೀಲ್ ಉಪನ್ಯಾಸ ನೀಡುವರು.ನಿವೃತ್ತ ಶಿಕ್ಷಕ ಜನಾರ್ಧನ ವಿಭೂತೆ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಗುಲಬರ್ಗಾ ವಿವಿ ಉರ್ದು ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ ರಬ್ಬಾ ಉಸ್ತಾದ್ ತಿಮ್ಮಾಪುರಿ,ಮಾಜಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ,ಗುರುಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೋಮಶೇಖರ ಶಾಬಾದಿ ಉಪಸ್ಥಿತರಿರುವರು.

ಕನ್ಯಾ ಕನ್ನಡ ಶಾಲೆ ತಿಮ್ಮಾಪುರ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ. ಅ.6 ಧಾರವಾಡಿ ರಂಗಾಯಣದ ನಿರ್ದೇಶಕ ಹಾಸ್ಯ ಕಲಾವಿದ ರಾಜು ತಾಳಿಕೋಟೆ ವಿಶೇಷ ಆಹ್ವಾನಿತರಾಗಿದ್ದು,ಉಪ ನೊಂದಣಾಧಿಕಾರಿ ಗುರುರಾಜ ಸಜ್ಜನ್ ಗೌರವ ಅಧ್ಯಕ್ಷತೆ ವಹಿಸುವರು,ಜೆಸ್ಕಾಂ ಎಇ ಚಂದ್ರಶೇಖರ ಬಿಳಾರ ಅಧ್ಯಕ್ಷತೆ ವಹಿಸುವರು.

ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್,ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ),ನಗರಸಭೆ ಪೌರಾಯುಕ್ತ ಜೀವನಕುಮಾರ್ ಕಟ್ಟಿಮನಿ ಗೌರವ ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಕ.ಸಂ.ಇಲಾಖೆ ಎ.ಡಿ ಉತ್ತರಾದೇವಿ ಮಠಪತಿ ಮುಖ್ಯ ಅತಿಥಿಗಳಾಗಿದ್ದು,ಶಿಕ್ಷಕ ಎಸ್.ಎಸ್.ಮಾರನಾಳ ಶರಣ ಕಾಯಕ ಮತ್ತು ದಾಸೋಹ ಕುರಿತು ಉಪನ್ಯಾಸ ನೀಡುವರು.ಸುದೀಪ ಶಿಕ್ಷಣ ಸಂಸ್ಥೆ,ಫಿನಿಕ್ಸ್ ಶಾಲೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ.

ಅ.7 ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ತಹಸಿಲ್ದಾರ್ ಹೆಚ್.ಎ.ಸರಕಾವಸ್,ಕರವೇ ಉ.ಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ ಆಗಮಿಸುವರು.ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ಗೌರವ ಅಧ್ಯಕ್ಷತೆ ವಹಿಸುವರು.ಸಂಘದ ಅಧ್ಯಕ್ಷ ಸೂಗುರೇಶ ವಾರದ್ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಬಿಇಓ ಯಲ್ಲಪ್ಪ ಕಾಡ್ಲೂರ,ನಯೋಪ್ರಾ ಮಾಜಿ ಅಧ್ಯಕ್ಷ ಮಹ್ಮದ್ ಸಲೀಂ ವರ್ತಿ ಆಗಮಿಸಲಿದ್ದು,ಜಾನಪದ ಸಾಹಿತ್ಯದಲ್ಲಿ ಮಹಿಳೆ ವಿಷಯದ ಕುರಿತು ಶಿಕ್ಷಕಿ ಶಿವಲೀಲಾ ಮುರಾಳ ಹಾಗೂ ಕನ್ನಡ ಸಾಹಿತ್ಯ ಸಂಘ ನಡೆದು ಬಂದ ದಾರಿ ಕುರಿತು ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ ಉಪನ್ಯಾಸ ನೀಡುವರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here