ಅದ್ದೂರಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ

0
60
  • ರಾಜಶೇಖರ ಎಸ್ ಮಾತೋಳಿ

ಕಲಬುರಗಿ; ನಗರದಲ್ಲಿ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮತ್ತು ನಿವೃತ್ತಿ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವದರ ಮೂಲಕ ಅಫಜಲಪೂರ ತಾಲೂಕಿನ ಶಾಸಕರಾದ ಎಂ ವೈ ಪಾಟೀಲ್ ಮತ್ತು ಕಲಬುರ್ಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲಂಪ್ರಭು ಪಾಟೀಲ್ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಮಾತನಾಡಿದ ಶಾಸಕ ಎಂ.ವೈ ಪಾಟೀಲ್ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಕರ ವೃತ್ತಿಯಲ್ಲಿ ನಿವೃತ್ತಿ ಆಗಿರಬಹುದು ಆದರೆ ಪ್ರವೃತ್ತಿಯಲ್ಲಿ ನಿವೃತ್ತಿ ಆಗಲು ಸಾಧ್ಯವಿಲ್ಲ ಎಂದರು.ಶಿಕ್ಷಕರು ಕಲಿಸುವುದರ ಜೊತೆಗೆ ತಾವು ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಬದಲಾದ ಸಮಾಜದಲ್ಲಿ ತಂತ್ರಜ್ಞಾನ ಹೆಚ್ಚಾದಂತೆ ಅನೇಕ ವಿಷಯಗಳ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗುತ್ತದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಲ್ಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಭಾನು ಕುಮಾರ್ ಗಿರೇಗೋಳ್, ರಾಜ ಪ್ರಧಾನ ಕಾರ್ಯದರ್ಶಿಗಳಾದ ಎಂ ಕೆ ರಾಜು, ಅಫಜಲಪೂರ್ ತಾಲೂಕಿನ ಶಾಸಕರಾದ ಎಂ ವೈ ಪಾಟೀಲ್, ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲಂಪ್ರಭು ಪಾಟೀಲ್ ಕಲ್ಬುರ್ಗಿ ಗ್ರಾಮೀಣ ಶಾಸಕರಾದ ಬಸವರಾಜ್ ಮತ್ತಿಮುಡ್, ವಿಧಾನಪರಿಷತ್ ಸದಸ್ಯರಾದ ಶಶೀಲ ನಮೋಸಶಿ ರಾಜ್ಯ ಸಂಯೋಜಕರಾದ ತಿಪ್ಪಣ್ಣ ಒಡೆಯರ್, ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಜು ಲೇಂಗಟಿ, ಉತ್ತರ ವಲಯ BEO ಸೋಮಶೇಖರ್ ಹಂಚಿನಾಳ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿಗಳಾದ ರೇವಣಸಿದ್ದಯ್ಯ ವೈದ್ಯ, ಕಲ್ಯಾಣರಾವ ಬಿರಾದಾರ್, ಪ್ರೇಮ್ ಸಿಂಗ್ ಚೌವ್ಹಾಣ, ಹಣಮಂತ್ ಮರಡಿ, ಡಾ.ನಾಗಭೂಷಣ್ ಮಹಾಂತನಮಠ, ನಿರೂಪಕರಾದ ಬಸವರಾಜ್ ಫೂಲಾರಿ, ಎಲ್ಲಾ ತಾಲೂಕ್ ಅಧ್ಯಕ್ಷರು ಸೇರಿದಂತೆ ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here